ತ್ರಿವೇಣಿ: ಮನ ಮಂಥನ

Author : ಅರ್ಚನಾ ಆರ್‌

Pages 216

₹ 220.00




Year of Publication: 2020
Published by: ಐಸಿರಿ ಪ್ರಕಾಶನ
Address: ನಾಗರಬಾವಿ ಬೆಂಗಳೂರು-72
Phone: 934180447001

Synopsys

`ತ್ರಿವೇಣಿ: ಮನ ಮಂಥನ’ ಅರ್ಚನಾ ಆರ್‌ ಅವರ ವಿಮರ್ಶಾ ಕೃತಿಯಾಗಿದೆ. ಭಾರತೀಯ ಸಮಾಜದಲ್ಲಿ ಪ್ರಚಲಿತವಿದ್ದ ಮೌಲ್ಯಗಳನ್ನೇ ತ್ರಿವೇಣಿಯವರು ಪ್ರತಿಪಾದಿಸಿದ್ದಾರೆಂದು ಅಭಿಪ್ರಾಯಿಸುವ ಅರ್ಚನಾ ಅವರು, ಇದು ತ್ರಿವೇಣಿಯವರ ದೃಷ್ಟಿಕೋನದ ಮಿತಿಯೆಂದು ಭಾವಿಸಿರುವಂತಿದೆ. ಇದೇ ಕೃತಿಯಲ್ಲಿ ಅರ್ಚನಾ ಅವರು ಭಾರತೀಯ ಸಂಸ್ಕೃತಿ ಮತ್ತು ಸಮಾಜವು ಮಹಿಳೆಯನ್ನು ಕೇವಲ ವೈಭವೀಕರಿಸಿತೇ ಹೊರತು ಸೂಕ್ತ ಸ್ಥಾನ ನೀಡಿಲ್ಲವೆಂದು ವಾದಿಸಿರುವ ಹಿನ್ನೆಲೆಯಲ್ಲಿ ತ್ರಿವೇಣಿಯವರ ದೃಷ್ಟಿಕೋನದ ಮಿತಿಯನ್ನು ಗುರುತಿಸಬಹುದು. ಅರ್ಚನಾ ಅಭಿಪ್ರಾಯ ಸರಿಯೇ ಇರಬಹುದು ಆದರೆ ಇಂತಹ ನಿರ್ಣಯಾತ್ಮಕ ನುಡಿಗಳು ಅಭಿಪ್ರಾಯದ ಹಂತದಲ್ಲಿ ಮಾತ್ರ ನಿಲ್ಲದೆ ವಿಸ್ತೃತ ಹಾಗೂ ಪೂರಕ ಚಿಂತನಾ ವಿಧಾನವನ್ನು ಬಯಸುತ್ತವೆ.

About the Author

ಅರ್ಚನಾ ಆರ್‌

ಅರ್ಚನಾ ಆರ್‌ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ವೃತ್ತಿಯಲ್ಲಿ ಶಿಕ್ಷಕಿ ಯಾಗಿದ್ದು, ಪ್ರವೃತ್ತಿಯಲ್ಲಿ ಸಾಂಸ್ಕೃತಿಕ ಕ್ಷೇತ್ರ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. ಕೃತಿಗಳು: ತ್ರಿವೇಣಿ: ಮನ ಮಂಥನ ...

READ MORE

Related Books