ಅನವರತ

Author : ಎಸ್. ಆರ್. ವಿಜಯಶಂಕರ್

Pages 318

₹ 235.00




Year of Publication: 2019
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ ಜೆ.ಸಿ ರಸ್ತೆ, ಬೆಂಗಳೂರು.

Synopsys

’ಅನವರತ’ ಎಸ್.ಆರ್ ವಿಜಯಶಂಕರ ಅವರ ಆಯ್ದ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಡಾ. ವಸುಂಧರಾ ಭೂಪತಿ, ’ಅನವರತ’ ಕೃತಿಯು ನಮ್ಮ ಸಮಕಾಲೀನ ಸಂದರ್ಭದ ಸಾಹಿತ್ಯ ಲೋಕದ ಮಹತ್ವದ ಹೆಜ್ಜೆಗಳನ್ನು ವಿಮರ್ಶಾತ್ಮಕವಾಗಿ ಪರಿಚಯಿಸುವ ಸಂಕಲನವಾಗಿದೆ. ಪಾಶ್ಚಾತ್ಯ ಸಾಹಿತ್ಯದ ಮಹತ್ವಪೂರ್ಣ ಕೃತಿಗಳ ಜೊತೆಗೆ ಭಾರತೀಯ ಸಂಸ್ಕೃತ ಸಾಹಿತ್ಯದ ಪ್ರಮುಖ ಕೃತಿಗಳ ಅಧ್ಯಯನ ಲೇಖಕರಿಗಿದ್ದು, ಅವರಿಗಿರುವ ಬಹುಜ್ಞತೆ ಇಲ್ಲಿ ವಿಶಾಲವಾಗಿ ಕಂಡುಬರುತ್ತದೆ. ಸಮಕಾಲೀನ ಕೃತಿಯೊಂದನ್ನು ವಿಮರ್ಶಿಸುವಾಗ ಎಲ್ಲಾ ಅಂಶಗಳನ್ನು ಒಗ್ಗೂಡಿಸಿ, ತಿಳಿವಳಿಕೆಗಳ ಹಿನ್ನೆಲೆಯೊಳಗೆ ಅದನ್ನು ತೂಗಿ ನೋಡುವ, ಮೌಲ್ಯ ನಿರ್ಣಯ ಮಾಡುವ ಶಕ್ತಿ, ಅವರ ನಿಷ್ಪಕ್ಷಪಾತ ಗುಣಕ್ಕೆ ಪೂರಕವಾಗಿದೆ. ಅನವರತ ಎನ್ನುವ ಹೆಸರೇ ಕಾಲದ ನಿರಂತರತೆಯನ್ನು ನಿರಂತರತೆಯೊಳಗಿನ, ಬದುಕಿನ ಗತಿಶೀಲತೆಯನ್ನು ಗ್ರಹಿಸುವ ಗಂಭೀರ ಪ್ರಯತ್ನ ಎನ್ನುವುದನ್ನು ಸೂಚಿಸುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಎಸ್. ಆರ್. ವಿಜಯಶಂಕರ್

ಎಸ್. ಆರ್. ವಿಜಯಶಂಕರ್ ಒಬ್ಬ ವಿಮರ್ಶಕರು. ಬೆಂಗಳೂರಿನಲ್ಲಿ ವಾಸವಿರುವ ಅವರು, ಸಾಹಿತ್ಯ , ಸಂಸ್ಕೃತಿ,  ವಿಮರ್ಶಾ ಬರಹಗಳಿಂದ ಕನ್ನಡ ಓದುಗರಿಗೆ ಪರಿಚಿತರಾಗಿದ್ದಾರೆ.  ಇಂಟೆಲ್ ಟೆಕ್ನಾಲಜಿ ಯಲ್ಲಿ ದಕ್ಷಿಣ ಏಷ್ಯಾದ  ಸಂವಹನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು, ಜನಪ್ರಿಯ ನಿಯತಕಾಲಿಕೆಗಳಲ್ಲಿ ಲೇಖನಗಳನ್ನೂ ಅಂಕಣಗಳನ್ನೂ ಬರೆಯುತ್ತಾ ಬಂದಿದ್ದಾರೆ. ಇತ್ತೀಚೆಗೆ ಅವರು ತಮ್ಮ ಹೆಚಿನ ಬರಹಗಳನ್ನು ಸಾಹಿತ್ಯಿಕ ಕಿರುಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದಾರೆ.  ಹಿಂದಿನ ಕೃತಿಗಳ ಮರು ಓದುಗರಿಗೆ ಗಮನ ಕೊಡುತ್ತಿರುವ ವಿಜಯ ಶಂಕರ್, ಕವಿ ಗೋಪಾಲಕೃಷ್ಣ ಅಡಿಗರ  ಮರು ಓದಿನ 'ಪ್ರತಿಮಾ ಲೋಕ', ಕೃತಿಯನ್ನು ಸಂಪಾದಿಸಿದ್ದಾರೆ. ...

READ MORE

Related Books