‘ಒಳಹೊರಗು‘ ಸುಬ್ರಾಯ ಚೊಕ್ಕಾಡಿ ಅವರ ವಿಮರ್ಶ ಲೇಖನಗಳ ಬರಹವಾಗಿದೆ. ತಾನೂ ಸೃಷ್ಟಿಸಿದ ಸಾಹಿತ್ಯದ ಸ್ವ ವಿಮರ್ಶೆಯ ಜೊತೆಗೆ ಇತರ ಸಾಹಿತಿ ಮಿತ್ರರ ಕೃತಿಗಳ ವಿಮರ್ಶೆ ಹಾಗೂ ಕೃತಿಗಳ ಸಂಕಲನ ಈ ಮಾಡಲಾಗಿದೆ.
ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...
READ MOREಹೊಸತು -ಮಾರ್ಚ್-2003
ಆಂತರಿಕ ದುಗುಡಗಳನ್ನು ಹೊರ ಜಗತ್ತಿಗೆ ತಿಳಿಸಲು, ಸಮಾಜದ ನಡುವೆ ಸ್ಪಷ್ಟ ಸ್ವಂತಿಕೆಯನ್ನು ಗುರುತಿಸಿಕೊಳ್ಳಲು ಸಾಹಿತ್ಯಕ್ಕೆ ಮೊರೆಹೋದ ಚೊಕ್ಕಾಡಿಯವರ ಚಿಂತನ-ಮಂಥನದ ನವನೀತವೇ ಇಲ್ಲಿನ ಬರಹಗಳು. ತಾನು ಸೃಷ್ಟಿಸಿದ ಸಾಹಿತ್ಯದ ಸ್ವ-ವಿಮರ್ಶೆಯ ಜೊತೆಗೆ ಇತರ ಸಾಹಿತಿ ಮಿತ್ರರ ಕೃತಿಗಳ ವಿಮರ್ಶೆಯನ್ನೂ ಮಾಡಿದ್ದಾರೆ. ಈ ಸಂಕಲನವನ್ನು ಕೃತಿಗಳ ಶೋಧನೆ ಯೆಂದರೂ ತಪ್ಪಾಗಲಾರದು. ಕೃತಿಯ ಓದಿನ ನಂತರದ ಅನಿಸಿಕೆಯನ್ನು ದಾಖಲಿಸಿದ್ದಾರೆ.