‘ಆರಡಿಗೊಳ್ ಸಾಹಿತ್ಯವಲೋಕನ’ ಕೃತಿಯು ಬಿ. ವಿ ವಸಂತಕುಮಾರ್ ಅವರ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ರಾಜಕೀಯ, ಧರ್ಮ, ತತ್ವಶಾಸ್ತ್ರ, ಭಾಷೆ, ಶಿಕ್ಷಣ, ಚರಿತ್ರೆ-ಹೀಗೆ ಹಲವು ವಿಷಯಗಳು ಇಲ್ಲಿನ ಲೇಖನಗಳ ರಚನಾ ವಿನ್ಯಾಸವನ್ನು ರೂಪಿಸಿವೆ.ಇಲ್ಲಿ ಪ್ರಸ್ತಾಪಿತವಾಗುವ ಸಮಕಾಲೀನ ಸಂದರ್ಭದ ತಲ್ಲಣಗಳು ಹಾಗೂ ತಾತ್ವಿಕ ಸಂಘರ್ಷಗಳು ಸಂವಾದವನ್ನು ಆಹ್ವಾನಿಸುತ್ತದೆ. ಅರಡಿಗೊಳ್ ಸಂಕಲನದ ವೈವಿಧ್ಯಮಯ ಬರಹಗಳು ಕನ್ನಡ ಪರಂಪರೆಯನ್ನು ರೂಢಿಗಿಂತ ಬಿನ್ನ ನೆಲೆಯಲ್ಲಿ ನೋಡಲು ಸಂಶೋಧನಾ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತದೆ. ನಮ್ಮ ದೇಶ ಭಾರತ ಮಾತ್ರವಲ್ಲ ಜಂಬೂದ್ವೀಪವೇ ನಮ್ಮ ದೇಶ, ಭಾರತೀಯ ಸಂಸ್ಕೃತಿಯ ಮೇರುದೀಪ ಸ್ತಂಭಗಳು, ಆದಿದೇವ ಬಾಹುಬಲಿ, ಬೃಹದ್ದೇಶೀ ಕವಿರಾಜಮಾರ್ಗ, ಒಂದು ನಾಣ್ಯದ ಎರಡು ಮುಖಗಳು, ಭಾರತೀಯತೆಯನ್ನು ಪುನರುಜೀವನಗೊಳಿಸಿದ ವಚನಸಾಹಿತ್ಯ, ಒಂದು ವಚನ ವಿಮರ್ಶೆ, ವಚನಗುಮ್ಮಟವನ್ನು ಕೊಟ್ಟ ದಾರ್ಶನಿಕರು, ನೇಕಾರ ತಮ್ಮಣ್ಣಪ್ಪ, ವೀರಶೈವ-ಲಿಂಗಾಯತ ಬಸವಣ್ಣನ ನಿಲುವೇನು?, ಕಲ್ಯಾಣವನ್ನು ಕಟ್ಟುವ ಕಲ್ಯಾಣದ ಪ್ರಜ್ಞೆ ಬಸವಣ್ಣ, ವಚನಕಾರರು ಕಟ್ಟಬಯಸಿದ ಐಕ್ಯತೆಯ ಸಮಾಜ, 'ಆರಡಿಗೊಳ್’, ಸತ್ಯವೆಂಬುದೆ ಚಿಮೂ, ಚಿಮೂವೆಂಬುದೆ ಸತ್ಯ, ನುಡಿದಂತೆ ನಡೆದ ನ್ಯಾಯನಿಷ್ಠುರಿ ಚಿಮೂ, ಕಾವ್ಯ ವಿಚಾರ ಚರ್ಚೆ; ಮೀಮಾಂಸೆ ಹೊಸ ಬೆಳಕು ಸಿಪಿಕೆ, ಮಹಾತ್ಮರ ಮಟ್ಟಕ್ಕೆ ನಮ್ಮ ಸಮಾಜ ಮೆಲೇರಲಿ, ಮುಕುತಿಮಾರ್ಗಕೆ ಯೋಗ್ಯ ನಾನಾದೆನೊ”- ಕನಕದಾಸರು , ವಿಧಿಯನ್ನು ಗೆದ್ದ ಚರಿತ್ರೆ ನಳಚರಿತ್ರೆ, ಪುತಿನ ಅವರ ಶಬರಿ, ಬಹುಮುಖಿ ಬದುಕಿನ ಆಪ್ತ ಕಥನ : ಕ್ಷಮತೆ, ಪೋಷಕರ ಕೈದೀವಿಗೆ, ಸಾಂಕ್ರಾಮಿಕ ರೋಗ ಮತ್ತು ಸಾಹಿತ್ಯಲೋಕ, ಹಂದ್ರಾಳರ `ಮೋದಿ ಅಂದ್ರೆ ಮೋಡಿ', “ಚಿನಾರ್ ವೃಕ್ಷದ ಅಳು” ವರ್ತಮಾನದ ತಲ್ಲಣಗಳಿಗೆ ಕನ್ನಡಿ ಹಿಡಿವ ಕಥಾಸಂಕಲನ ಅಲ್ಲ ಹೃದಯವೀಣೆ, ಒಳಗಿನ ಬೆಳಗು, ಅಯೋಧ್ಯೆ, ರಾಮ ಮತ್ತು ರಾಮಾಯಣ, ಲಯಬದ್ಧ ಸಂವೇದನಾಶೀಲ ವಚನಗಳು, ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು, ವಸಾಹತುಶಾಹಿ ಮತ್ತು ಕನ್ನಡ ಭಾಷೆ ಮತ್ತು ಸಾಹಿತ್ಯ, ಕನ್ನಡ ಪಠ್ಯಗಳ ಪ್ರಸ್ತುತತೆ, ಭಾರತೀಯ ಭಾಷೆ ಮತ್ತು ಸಾಹಿತ್ಯದ ಅಧ್ಯಯನದ ಮಹತ್ವ, ಸಂಸ್ಕೃತ ಮತ್ತು ಭಾರತೀಯ ಸಾಹಿತ್ಯ, ಗಣರಾಜ್ಯೋತ್ಸವ ಮತ್ತು ಭಾರತೀಯ ಸಂಸ್ಕೃತಿಯ ವಿಕಾಸ, ಹಿಂದಿ ಭಾಷೆಯು ಕೇವಲ ಉತ್ತರದ ಭಾಷೆಯೇ?, ಕರ್ನಾಟಕಕ್ಕೆ ಕನ್ನಡ ಭಾರತಕ್ಕೆ ಹಿಂದಿ, ಹಿಂದಿನ ಮೈಸೂರು ಜಿಲ್ಲೆಯ ಸ್ವಾತಂತ್ರ್ಯ ಚಳವಳಿ, ಜಗಕೆಲ್ಲಾ ಜ್ಯೋತಿ ನೀನಾಗು, ಯದುಗಿರಿಯ ಮೌನವಿಕಾಸ, ಡಾ. ಚಂದ್ರಶೇಖರ ಕಂಬಾರರ 'ಗಂಗಾಮಾಯಿ', ಆರಡಿಗೊಳ್, ಭಾರತ ಒಂದು ರಾಷ್ಟ್ರವಾಗಿರಲಿಲ್ಲವೇ, ಆತ್ಮನಿರ್ಭರ ಭಾರತ ಮತ್ತು ಯುವಜನ, ಶಿಶುನಾಳ ಶರೀಫರ ಗಿರಣಿ ವಿಸ್ತಾರ ನೋಡಮ್ಮ, ಚಿಂತನಾನುಭವ ಸೌರಭ, ವಿಪ್ಲವ : ಒಂದು ಸಮೀಕ್ಷೆ, 'ಸುಂಟರಗಾಳಿ'ಯಲ್ಲಿ ನೈಜಧರ್ಮದ ಹುಡುಕಾಟ, ಶ್ರೀಹರಿಯಾದ 'ಹಾವಾಡಿಗರ ಹುಡುಗ', ಅಮರಜ್ಯೋತಿ ಎಂಬ ಕಣೇಲೆ, ಸಿದ್ಧಲಿಂಗಯ್ಯನವರ ಕಾವ್ಯ : ಒಂದು ಪಕ್ಷಿನೋಟ, ಪದವಿ ಹಂತದಲ್ಲಿ ಭಾಷಾಕಲಿಕೆಯ ಬಿಕ್ಕಟ್ಟುಗಳು, ಶಿವಮೊಗ್ಗ ಜಿಲ್ಲೆಯ ಶರಣ ಪರಂಪರೆ, ಆಟದೊಳಗೆ ಅನೌಪಚಾರಿಕ ಪಾಠ, ಲಾಲಿತ್ಯವೂ ಒಂದು ಜೀವನಮೌಲ್ಯ, ಕನ್ನಡ ಸಾಹಿತ್ಯಕ್ಕೆ ಕೃಷ್ಣದೇವರಾಯನ ಕೊಡುಗೆ, ನಡುಗನ್ನಡ ಸಾಹಿತ್ಯದ ಆಶಯಗಳು, ಭಾರತೀಯರ ಅಂತಃಸತ್ಯಃ ವಿಜಯದಶಮಿ, ವಿಜಯನಗರ, ಕೃಷ್ಣದೇವರಾಯ, 'ಕಲ್ಕಿ'ಯು ನೀಡುವ ಎಚ್ಚರ: ಇನ್ನೆಲ್ಲಿಯ ನಿದ್ದೆ?, "ನಾನು, ಗಾಂಧಿ ಮತ್ತು ನಮ್ಮ ಮೇಷ್ಟು" - ಒಂದು ನೋಟ, ಶ್ರೀ ಅವರ 'ಭರತಮಾತೆಯ ನುಡಿ', ನಿಸಾರ್ ಅವರ “ನವಯುಗ ಸಂವತ್ಸರ, ಮರೆಯಬಾರದು ಗತವೈಭವ ದ, ರಾ.ಬೇಂದ್ರೆ ಅವರ 'ಜೋಗಿ', ಅಡಿಗರ 'ವರ್ಧಮಾನ' : ಒಂದು ವಿಶ್ಲೇಷಣೆ. ಹೀಗೆ ವಿವಿಧ ಲೇಖನಗಳು ಒಳಗೊಂಡಿವೆ.
ಲೇಖಕ ಬಿ.ವಿ. ವಸಂತ ಕುಮಾರ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಪ್ಪಗೊಂಡನ ಹಳ್ಳಿಯವರು. ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿ ಪಡೆದರು. ‘ಕೈಲಾಸಂ ಕನ್ನಡ ಒಂದು ಅಧ್ಯಯನ" ಎಂಬುದು ಅವರ ಪಿಎಚ್ ಡಿ ಪ್ರಬಂಧ. ಪ್ರಸ್ತುತ ಮೈಸೂರಿನ ಮಹಾರಾಣಿ ಕಾಲೇಜು ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರು. ಕೃತಿಗಳು: ಚೇತನ ಚಿತ್ತಾರ, ಬೆಟ್ಟದ ಮುಡಿಗೆ ಹೂ, ದೇವರ ದಾಸಿಮಯ್ಯ ಮತ್ತು ಅನಂತತೆ, ಒಲುಮೆಯ ಕುಲುಮೆಯಲ್ಲಿ, ಪಿ.ಲಂಕೇಶ್, ಡೆಪ್ಯುಟಿ ಚೆನ್ನಬಸಪ್ಪ, ಕಾಯಕ ಮೀಮಾಂಸೆ, ಕಾವ್ಯ ಪ್ರಪಂಚ, ಕಾದಂಬರಿ: ಜೋಗೇರ ಹುಡುಗಿ, ಸಂಶೋಧನೆ : ಶಿಕಾರಿಪುರ ತಾಲ್ಲೂಕಿನ ಸಾಂಸ್ಕೃತಿಕ ಸಂಕಥನ, ಪಂಪ ಪದ ಪ್ರಪಂಚ ...
READ MORE