ಸರಹದ್ದುಗಳ ಆಚೆ-ಈಚೆ

Author : ಬಿ.ಎನ್. ಸುಮಿತ್ರಾಬಾಯಿ

₹ 120.00




Year of Publication: 2009
Published by: ಇಳಾ ಪ್ರಕಾಶನ
Address: ರಾಘವ ನಗರ, ನ್ಯೂ ಟಿಂಬರ್‌ಯಾರ್ಡ್ ಬಡಾವಣೆ, ಬೆಂಗಳೂರು. 560026

Synopsys

‘ಸರಹದ್ದುಗಳ ಆಚೆ ಈಚೆ’ ಕೃತಿಯು ಬಿ.ಎನ್. ಸುಮಿತ್ರಾಬಾಯಿ ಅವರ ಸಾಹಿತ್ಯ ವಿಮರ್ಶೆಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ ‘ಸಮತಾ, ಜಾಗೃತಿ, ಅಚಲ, ಮಾನಸದೊಂದಿಗೆ ಚಳವಳಿಯ ಜೊತೆಯಲ್ಲಿ ಸಾಗುತ್ತಾ ಬಂದ ಲೇಖಕಿಯ ಕ್ರಿಯಾಶೀಲತೆ ಬೌದ್ದಿಕ ಶಿಸ್ತಿನೆಡೆಗೆ ಗಮನ ಹರಿಸಿದಷ್ಟೇ ಸಾಮಾಜಿಕ ಸ್ವಾಸ್ಥ್ಯದೆಡೆಗೂ ದುಡಿದಿದೆ. ಅವರ ಸ್ತ್ರೀವಾದ’ವು ಸಾಹಿತ್ಯ ವಿಮರ್ಶೆಯ ಸಾಧನವಾಗಿರುವಂತೆಯೇ ಸಾಹಿತ್ಯದ ವಿಶ್ಲೇಷಣೆಗೂ ನೆರವಾಗುತ್ತದೆ. ಇಲ್ಲಿ ಸ್ತ್ರೀವಾದಿ ಅಧ್ಯಯನದ ಹಲವು ಆಯಾಮಗಳನ್ನು ಕುರಿತು ಗಂಭೀರವಾಗಿ ವಿಶ್ಲೇಷಿಸಬಹುದು. ಕುವೆಂಪು, ಶಾಂತಿನಾಥ ದೇಸಾಯಿ, ತೇಜಸ್ವಿ ಮತ್ತು ಆಮೂರರಂತಹ, ಕನ್ನಡ ಸಾಹಿತ್ಯದ ದಿಗ್ಗಜಗಳನ್ನು ಹಿಡಿದು ಅಲ್ಲಾಡಿಸುವ ಸುಮಿತ್ರಾ, ಪಂಪನಿಂದ ಹಿಡಿದು ವಚನಕಾರರ ಬಗ್ಗೆಯೂ ಈವರೆಗೆ ಸ್ಥಾಪಿತವಾಗಿರುವ ಹಲವಾರು ತೀರ್ಮಾನಗಳನ್ನು ಪ್ರಶ್ನಿಸುತ್ತಾ, ಅತ್ಯಂತ ತರ್ಕಬದ್ಧವಾದ ವಿಚಾರಸರಣಿಯ ಮೂಲಕ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

 

About the Author

ಬಿ.ಎನ್. ಸುಮಿತ್ರಾಬಾಯಿ

ಜೈನಶಾಸ್ತ್ರ ಮತ್ತು ಪ್ರಾಕೃತ ಪರಿಣಿತೆ ಆಗಿರುವ ಬಿ.ಎನ್‌. ಸುಮಿತ್ರಾಬಾಯಿ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಸಾರ್ವತ್ರಿಕದೆಡೆಗೆ, ವಿಚಯ,  ಅಯನ, ಮಹಿಳೆ ಮತ್ತು ಸಾಹಿತ್ಯ, ಸರಹದ್ದುಗಳ ಆಚೆ, ಸ್ತ್ರೀವಾದಿ ಪ್ರವೇಶಿಕೆ ಅವರ ಪ್ರಮುಖ ವಿಮರ್ಶಾ ಕೃತಿಗಳು. ’ಕಲ್ಯಾಣ ಸರಸ್ವತಿ, ಕಾತ್ಯಾಯನಿ ವಾಚಿಕೆ, ಸ್ತ್ರೀವಾದಿ ಪ್ರವೇಶಿಕೆ’ ಕೃತಿಗಳನ್ನು ಸಂಪಾದಿಸಿದ್ದಾರೆ.  ಅವರಿಗೆ ಅನುಪಮಾ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ. ಡಾ. ಬಿ. ಎನ್. ಸುಮಿತ್ರಾ ಬಾಯಿ ಅವರ  ಬೊಗಸೆಯಲ್ಲಿ ಹೊಳೆ ನೀರು (ಲೇಖನ ಸಂಕಲನ) ಕೃತಿಗೆ 2014ರ ವಿ.ಎಂ. ಇನಾಂದಾರ ಸ್ಮಾರಕ ವಿಮರ್ಶಾ ಪ್ರಶಸ್ತಿ ಸಂದಿದೆ ಹಾಗೂ ಪಿ. ...

READ MORE

Related Books