‘ಶಬ್ದಸೌಂದರ್ಯ’ ಲೇಖಕ ಶಿವಕುಮಾರ ಹಿರೇಮಠ ಅವರು ರಚಿಸಿರುವ ವಿಮರ್ಶಾ ಲೇಖನಗಳ ಸಂಕಲನ. ಇಲ್ಲಿ ದೇವರು ಮೌಲ್ಯ ಮೌಡ್ಯ ಮತ್ತು ಮಾಲಿನ್ಯ, ಸುರಪುರ ತಾಲೂಕಿನ ದಾರ್ಶನಿಕರು, ಕನ್ನಡ ಆಧ್ಯಾತ್ಮ ಜಗತ್ತು ಮತ್ತು ಅಜ್ಞಾತ ಅನುಭಾವಿ ಸುಲ್ತಾನ ಪಟೇಲ್, ಶಾಂತರಸ ಘಜ್ ಲ್ ಗಲ್ಲಿಯಲ್ಲಿ ಸತ್ಯ ಸ್ನೇಹದ ರುದ್ರಮುನಿ, ದೇವರ ಕುರಿತ ವಾದಗಳು ಹಾಗೂ ಅನುಭಾವದ ಅನುಸಂಧಾನ, ಕನ್ನಡ ಕಾವ್ಯ ಎದುರಿಸಿದ ಸಾಂಸ್ಕೃತಿಕ ಸವಾಲುಗಳು, ಗಾಂಧಿ ಅಂಬೇಡ್ಕರ್ ಭಿನ್ನ ಸಾಂಸ್ಕೃತಿಕ ಅನುಸಂಧಾನ, ಜಾಗತೀಕರಣವೆಂಬ ಸ್ಪುರದ್ರೂಪಿ ರಾಕ್ಷಸ, ಶರೀಫರ ಕಾವ್ಯಗಳಲ್ಲಿ ದೇಶಿ ಧಾತು ಸೇರಿದಂತೆ ಹಲವು ವಿಮರ್ಶಾ ಲೇಖನಗಳು ಸಂಕಲನಗೊಂಡಿವೆ.
ಶಿವಕುಮಾರ ಹಿರೇಮಠ ಅವರು ಮೂಲತಃ ಗುಲಬರ್ಗಾ ಮೂಲದವರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಶಿವಕುಮಾರ್ ಅವರು ಕವಿಯಾಗಿಯೂ ಗಮನಸೆಳೆದಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಕವನವಾಚಿಸಿದ್ದಾರೆ. ಗಂಭೀರ ಓದುಗರಾದ ಶಿವಕುಮಾರ್ ಪುಸ್ತಕ ವಿಮರ್ಶೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶಬ್ದ ಸೌಂದರ್ಯ (ವಿಮರ್ಶಾಲೇಖನ ಸಂಕಲನ) ಸೇರಿದಂತೆ ಹಲವು ಕೃತಿಗಳು ಪ್ರಕಟವಾಗಿವೆ. ...
READ MORE