ರಾಮಾಯಣ ಮತ್ತು ಮಹಾಭಾರತ ವಿಶ್ವಸಾಹಿತ್ಯದಲ್ಲಿ ಪ್ರಮುಖವಾದ ಮಹಾಕಾವ್ಯಗಳು. ಮುಖ್ಯವಾಗಿ ರಾಮಾಯಣ ಮತ್ತು ಮಹಾಭಾರತ ನಮ್ಮ ದೇಶದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಬೆಳವಣಿಗೆಯ ಹಂತಗಳನ್ನು ವಿವರಿಸುತ್ತದೆ. ಈ ಮಹಾಕಾವ್ಯಗಳ ಕಥೆಗಳು ಜನಜನಿತ. ಈ ಕಥೆಗಳನ್ನು ಸಾಹಿತ್ಯದ ವಿವಿದ ಆಕಾರಗಳಲ್ಲಿ ಬಳಸಲಾಗಿದೆ, ಅವು ನುಡಿಮುತ್ತು, ಹಾಡು, ನಾಟಕ, ಚಲನಚಿತ್ರಗಳಲ್ಲಿ ಹೀಗೆ ಹಲವು ರೂಪಗಳಲ್ಲಿವೆ.
ರಾಮನ ಬಗ್ಗೆ ನೂರೊಂದು ಸೂಜಿಮೊನೆಯ ಪ್ರಶ್ನೆಗಳು ಮತ್ತು ವಿಮರ್ಶೆ ಹಿಂದೆಯೂ ಇದ್ದವು. ಈಗಲೂ ಇವೆ, ನಾಳೆಯೂ ಇರುತ್ತವೆ, ಇಲ್ಲಿ ಲೇಖಕರು, ರಾಮಾಯಣದ ಬಗ್ಗೆ ಹಲವರಿಗೆ ಗೊತ್ತಿಲ್ಲದ ವಿಷಯಗಳನ್ನು ವಿವರಿಸಿದ್ದಾರೆ ಹಾಗೂ ಅನೇಕ ಅಚ್ಚರಿಯ ಪ್ರಶ್ನೆಗಳಿಗೆ ತಮ್ಮದೇ ಆದ ಉತ್ತರಗಳನ್ನೂ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ.
ಎಡಪಂಥೀಯ ಚಿಂತನೆಗಳ ಮೂಲಕ ಕನ್ನಡಿಗರಿಗೆ ಪರಿಚಿತರಿರುವ ಜಿ.ಎನ್. ನಾಗರಾಜ್ ಅವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1971 ಅಗ್ರಿ) ಹಾಗೂ ಎಂಎಸ್ಸಿ (1973) ಪದವಿ ಪಡೆದರು. ಸದ್ಯ ಕೃಷಿ ಕೂಲಿಕಾರರ ಸಂಘ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...
READ MORE