ಉರಿಯೊಳಗಣ ಕರ್ಪೂರ

Author : ಅರ್ಜುನ್ ಗೊಳಸಂಗಿ

Pages 79

₹ 80.00




Year of Publication: 2012
Published by: ದಲಿತ ಸಾಹಿತ್ಯ ಪರಿಷತ್ತು(ರಿ)
Address: ರಾಜ್ಯ ಘಟಕ, ಗದಗ
Phone: 9448789322

Synopsys

‘ಉರಿಯೊಳಗಣ ಕರ್ಪೂರ’ ಕೃತಿಯು ಅರ್ಜುನ ಗೊಳಸಂಗಿ ಅವರ ವಿಮರ್ಶಾ ಸಂಕಲನವಾಗಿದೆ. ದಲಿತರ ಹಾಗೂ ಅವರ ಕುರಿತ ಸಾಹಿತ್ಯದ ಬಗ್ಗೆ ಇವರು ನಿರ್ಲಕ್ಷ್ಯ ಹಾಗೂ ಮಡಿವಂತಿಕೆ ಕಾರಣವಿರಬಹುದು. ದಲಿತ ಸಾಹಿತ್ಯ ವಿಮರ್ಶೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ವಿಮರ್ಶಾ ಸಂಕಲನ ಹಲವಾರು ದಲಿತ ಸಾಹಿತ್ಯ ಕೃತಿಗಳು ಹಾಗೂ ದಲಿತ ಚಿಂತಕರ ಕುರಿತು ಮೌಲಿಕ ಚರ್ಚೆಯನ್ನು ನಡೆಸುತ್ತದೆ. ಸುಮಾರು ನಲವತ್ತೆರಡು ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ ದಲಿತೇತರ ಸಾಹಿತ್ಯ ಚಿಂತನೆಯನ್ನು ಸಹ ನಡೆಸುತ್ತದೆ. ಒಟ್ಟಾರೆ ಅವಮಾನ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ಶೋಷಣೆ, ಅಸಹಾಯಕತೆಗಳ ಪ್ರತಿಬಿಂಬದಂತಿರುವ ದಲಿತ ಸಾಹಿತ್ಯ ಚಿಂತನೆಯನ್ನು ಒರೆಹಚ್ಚುವ ಪ್ರಯತ್ನವನ್ನು ಈ ಕೃತಿ ಮಾಡುತ್ತದೆ. 

About the Author

ಅರ್ಜುನ್ ಗೊಳಸಂಗಿ
(10 June 1966)

ಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಗೊಳಸಂಗಿ ಎಂಬ ಹಳ್ಳಿಯವರಾ ಅರ್ಜುನ ಗೊಳಸಂಗಿ ಅವರು ಕವಿ-ಲೇಖಕ. 1966ರ ಜೂನ್‌ 10 ರಂದು ಜನಿಸಿದರು. ತಂದೆ ಯಲ್ಲಪ್ಪ ತಾಯಿ ಮಲಕಮ್ಮ. ಕೃಷಿಕ ಕುಟುಂಬಕ್ಕೆ ಸೇರಿದ ಅರ್ಜುನ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ  ಕನ್ನಡ ಎಂ.ಎ ಮತ್ತು ಪಿಎಚ್.ಡಿ. ಪದವಿ ಪಡೆದರು. ಬಸವೇಶ್ವರ, ಡಾ. ಅಂಬೇಡ್ಕರ್ ಮತ್ತು ಭಾಷಾವಿಜ್ಞಾನದಲ್ಲಿ ಡಿಪ್ಲೋಮಾ ಪದವಿಗಳನ್ನು ಪಡೆದಿರುವ ಅವರು ಗದಗ ಸಹಕಾರಿ ಜವಳಿ ಗಿರಣಿಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಕಾವ್ಯ, ಕತೆ, ವಿಮರ್ಶೆ ಸಂಶೋಧನೆ, ಸಾಂಸ್ಕೃತಿಕ ಅಧ್ಯಯನ, ಜಾನಪದ ಒಳಗೊಂಡಂತೆ ಇದುವರೆಗೆ 25ಕ್ಕೂ ಹೆಚ್ಚು ಕೃತಿಗಳನ್ನು ...

READ MORE

Reviews

(ಹೊಸತು ಜೂನ್ 2013, ಪುಸ್ತಕ ಪರಿಚಯ)

ಭಾರತೀಯ ಮನಸ್ಸುಗಳಲ್ಲಿ ರಕ್ತಗತವಾಗಿ ಬೆಳೆದುಬಂದಿರುವ ಜಾತಿಯ ಅಂಧಕಾರ, ಉಳ್ಳವರ ದಬ್ಬಾಳಿಕೆ, ಶೋಷಣೆ, ಅವಮಾನ, ಮನುಷ್ಯತ್ವದ ಅಂತರ್ಜಲವೇ ಒಣಗಿ ಹೋದಂತೆ ವರ್ತಿಸುವ ಮೇಲ್ವರ್ಗ-ಮೇಲ್ದಾತಿಗಳ ಹಿಂಸೆಯ ವಿರುದ್ಧ, ಸಮಾಜದ ಕನಸು ಕಾಣುತ್ತಾ, ಜಾತಿ ನಿರ್ಮೂಲನೆಯ ಆಶಯದಿಂದ ಅಂಬೇಡ್ಕರ್, ಮಾರ್ಕ್ಸ್, ನಾರಾಯಣ ಗುರು ಮುಂತಾದವರಿಂದ ಪ್ರಭಾವಿತಗೊಂಡು ಹುಟ್ಟಿಕೊಂಡ ಚಳುವಳಿಯೇ ದಲಿತ ಚಳುವಳಿ, ಚಳುವಳಿ ಬರೀ ಬೀದಿ ಹೋರಾಟಗಳಿಗೆ ಸೀಮಿತಗೊಳ್ಳದೆ ಸಾಹಿತ್ವಿಕ ಸಾಂಸ್ಕೃತಿಕ ಹಾಗೂ ರಾಜಕೀಯ ಚಳುವಳಿಯಾಗಿ ಬೆಳೆದುಬಂದದ್ದು ವಿಶೇಷ. ಅನೇಕ ದಲಿತ ಚಿಂತಕರು, ಬರಹಗಾರರು ಮುಖ್ಯವಾಹಿನಿಗೆ ಬಂದದ್ದು ಈ ಚಳುವಳಿಯ ಮೂಲಕವೇ ಅವರ ಚಿಂತನೆ ಮತ್ತು ಬರಹಗಳು ಹೋರಾಟಗಾರರಿಗೆ ದಾರಿದೀಪವಾದರ ದಲಿತ ಮತ್ತು ದಲಿತ ಪರ ಸಾಹಿತ್ಯ ಹುಲುಸಾಗಿ ಬೆಳೆದಂತೆ ದಲಿತ ಸಾಹಿತ್ಯ ವಿಮರ್ಶೆ ಬೆಳೆಯಲಿಲ್ಲ. ಇದಕ್ಕೆ ದಲಿತರ ಹಾಗೂ ಅವರ ಕುರಿತ ಸಾಹಿತ್ಯದ ಬಗ್ಗೆ ಇವರು ನಿರ್ಲಕ್ಷ್ಯ ಹಾಗೂ ಮಡಿವಂತಿಕೆ ಕಾರಣವಿರಬಹುದು. ದಲಿತ ಸಾಹಿತ್ಯ ವಿಮರ್ಶೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ವಿಮರ್ಶಾ ಸಂಕಲನ ಹಲವಾರು ದಲಿತ ಸಾಹಿತ್ಯ ಕೃತಿಗಳು ಹಾಗೂ ದಲಿತ ಚಿಂತಕರ ಕುರಿತು ಮೌಲಿಕ ಚರ್ಚೆಯನ್ನು ನಡೆಸುತ್ತದೆ. ಸುಮಾರು ನಲವತ್ತೆರಡು ವಿಮರ್ಶಾ ಲೇಖನಗಳನ್ನು ಒಳಗೊಂಡ ಕೃತಿ ದಲಿತೇತರ ಸಾಹಿತ್ಯ ಚಿಂತನೆಯನ್ನು ಸಹ ನಡೆಸುತ್ತದೆ. ಒಟ್ಟಾರೆ ಅವಮಾನ, ಅಸ್ಪೃಶ್ಯತೆ, ಅಸಮಾನತೆ, ಅನ್ಯಾಯ, ಶೋಷಣೆ, ಅಸಹಾಯಕತೆಗಳ ಪ್ರತಿಬಿಂಬದಂತಿರುವ ದಲಿತ ಸಾಹಿತ್ಯ ಚಿಂತನೆಯನ್ನು ಒರೆಹಚ್ಚುವ ಪ್ರಯತ್ನವನ್ನು ಕೃತಿ ಮಾಡುತ್ತದೆ, ಎಲ್ಲರೂ ಓದಬಹುದಾದ ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದಾದ ಸಂಪನ್ನ ಕೃತಿ ಇದಾಗಿದೆ.

--

 

Related Books