ದೇಶೀವಾದ

Author : ರಾಜೇಂದ್ರ ಚೆನ್ನಿ

Pages 116

₹ 100.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ದೇಶೀವಾದ ಎನ್ನುವುದು ವಿಮರ್ಶೆಯಲ್ಲಿ ಅಥವಾ ಸಾಹಿತ್ಯ ಸಿದ್ದಾಂತದಲ್ಲಿ ಅಷ್ಟೇನೂ ಪರಿಚಿತವಲ್ಲದ ಪದ. ಕನ್ನಡ ಮತ್ತು ಇತರ ಭಾಷೆಯ ಸಾಹಿತ್ಯಗಳಲ್ಲಿ ಈ ಪದವನ್ನು ಹೋಲುವ ಅನೇಕ ಶಬ್ದಗಳು ಬಳಕೆಯಲ್ಲಿವೆ. ಈ ಪುಸ್ತಿಕೆಯಲ್ಲಿ ಚರ್ಚಿಸಲಾಗಿರುವ ದೇಶೀವಾದದ ವ್ಯಾಪ್ತಿಗೆ ಬರುವಂತಹ ಅನೇಕ ಪರಿಕಲ್ಪನೆಗಳ ಫಲವತ್ತಾದ ಚರ್ಚೆಯೂ ಆಗಿದೆ. ಆದರೆ ಒಂದು ಸ್ವತಂತ್ರ ಸಿದ್ದಾಂತವಾಗಿ ಅಥವಾ ಸಾಹಿತ್ಯಕ ಚಳುವಳಿಯಾಗಿ ದೇಶೀವಾದವು ಹೆಚ್ಚಿನ ಮನ್ನಣೆ ಪಡೆದಿಲ್ಲ. ದೇಶೀವಾದ ಎನ್ನುವ ಪಾರಿಭಾಷಿಕಕ್ಕೆ ಖಚಿತವಾದ ವ್ಯಾಖ್ಯೆ ದೊರೆತಂತೆ ಕಾಣುತ್ತಿಲ್ಲ. ಈ ಹೆಸರನ್ನು ಹೊಂದಿರುವ ಸಾಹಿತ್ಯಕ ಚಳುವಳಿಯು ಯಾವುದೇ ಸಾಹಿತ್ಯದಲ್ಲಿ ಮಹತ್ವ ಪಡೆಯದಿದ್ದರೂ ಹಲವಾರು ಶ್ರೇಷ್ಠ ಕೃತಿಗಳ ಹುಟ್ಟಿಗೆ ಕಾರಣವಾಗಿಎ. ಮತ್ತು ಕಾಲಕಾಲಕ್ಕೆ ವಿಮರ್ಶೆಯ ಒಲವನ್ನು ಪ್ರಭಾವಿಸಿರುವ ಪ್ರವೃತ್ತಿಯ ದ್ಯೋತಕವಾಗಿದೆ. ಅದನ್ನು ಈ ಗ್ರಂಥದಲ್ಲಿ ಚರ್ಚಿಸಲಾಗುತ್ತದೆ. ದೇಶೀವಾದ ಎನ್ನುವ ಪದವನ್ನು ಇಂಗ್ಲಿಷ್ ಪಾರಿಭಾಷಿಕವಾದ Nativismನ ತರ್ಜುಮೆಯಾಗಿ ಬಳಸಿಕೊಳ್ಳಲಾಗಿದೆ. ಕರ್ನಾಟಕ ಸಾಹಿತ್ಯ ಆಕಾಡೆಮಿಯ ಪಾರಿಭಾಷಿಕ ಮಾಲೆಯಲ್ಲಿ ಪ್ರಕಟವಾಗಿದ್ದ ಈ ಕೃತಿಯು ವಿಸ್ತೃತ ಆವೃತ್ತಿಯಾಗಿ ಮರುಮುದ್ರಣ ಕಂಡಿದೆ.

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books