`ಕನ್ನಡ ಸಣ್ಣ ಕತೆಗಳಲ್ಲಿ ಮಾನವೀಯ ಸಂವೇದನೆ' ಈ ಕೃತಿಯು ವಿಮರ್ಶಾ ಬರಹಗಳನ್ನು ಒಳಗೊಂಡಿದೆ. ಕೃತಿಕಾರರು-ಡಾ. ವಾಸಯ್ಯ ಎನ್. ಕನ್ನಡ ಸಣ್ಣ ಕತೆಗಳಲ್ಲಿಯ ಹೊಸ ಹೊಸ ಸಂವೇದನೆಗಳ ಕುರಿತು ವಿಮರ್ಶಿಸಿ ದ ಕೃತಿ. ಎಂ ಎಸ್ ವೇದಾ, ಸೋಮಣ್ಣ ಹೊಂಗಲ್ಲಿ. ಹನೂರು ಚೆನ್ನಪ್ಪ, ವಸುಧೇಂದ್ರ, ಕಮಲಾ ಹಂಪನಾ ,ಸಾ.ರಾ. ಅಬೂಬುಕ್ಕರ್, ಕೃಷ್ಣ ನಾಯಕ್, ಮಂಜುನಾಥ ಲತಾ,ಕೆ.ಶರೀಫ, ಸುನಂದಾ ಪ್ರಕಾಶ ಕಡಮೆ,ಕೇಶವ ರೆಡ್ಡಿ ಹಂದ್ರಾಳ, ಮಾಲತಿ ಕೃಷ್ಣಾ ರಾವ್ ಅವರ ಕತೆಗಳನ್ನು ಆಯ್ದು ಕೊಂಡು ಸಮಕಾಲೀನ ಚಿಂತನೆಗಳನ್ನು ವಿಮರ್ಶಿಸಲಾಗಿದೆ.
ಡಾ. ವಾಸಯ್ಯ ಎನ್ ಅವರು ವಿಮರ್ಶಕರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ (2017) ಬಹುಮಾನ ದೊರೆತಿದೆ. ಕೃತಿಗಳು: ತುಂತುರು ಹನಿ, ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ, ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ ಅಧ್ಯಯನ, ಆರ್ತ ಧ್ವನಿ, ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ, ಹೊಸಗನ್ನಡ ಕಾವ್ಯದಲ್ಲಿ ಮಳೆ, ಕವಿಯ ಮನದಲ್ಲಿ ಬುದ್ಧ,, ಸಂಶೋಧನಾ ಸಿರಿ. ...
READ MORE