ಪುತಿನ ಕವಿತೆಗಳ ಕುರಿತ ಎಂ.ಆರ್. ಕಮಲ ಅವರ ಲೇಖನಗಳ ಸಂಕಲನ ಕೊಳದ ಮೇಲಿನ ಗಾಳಿ. ಪುತಿನ ಅವರ 25 ಕವಿತೆಗಳನ್ನು ಅನುಸಂಧಾನಿಸಿದಾಗ ಸ್ಫುರಿತವಾದ ಭಾವ ಲಹರಿಗಳು ಈ ಪುಸ್ತಕದಲ್ಲಿ ಸೊಗಸಾದ ಲಲಿತ ಪ್ರಬಂಧಗಳಂತೆ ಆಕಾರಗೊಂಡಿವೆ. ಈ ಬರಹಗಳು ಕನ್ನಡಕ್ಕೆ ಹೊಸಬಗೆಯ ಕಾವ್ಯಾನುಸಂಧಾನದ ಬಾಗಿಲನ್ನು ಸಹಾ ತೆರೆಯುತ್ತಿದೆ. ಇದು ಕಾವ್ಯಾನುಸಂಧಾನದ ಪಶ್ಚಾತ್-ಭಾವದ ಹೊಸ ಸಂಕಥನ. ಕೃತಿಗೆ ಮುನ್ನುಡಿ ಬರೆದಿರುವ ಎಚ್.ಎಸ್. ವೆಂಕಟೇಶಮೂರ್ತಿ ಅವರು ಎಂ.ಆರ್. ಕಮಲ ಅವರ ಬರವಣಿಗೆಯ ಬಗ್ಗೆ ಬರೆಯುತ್ತಾ ಪುತಿನ ಕಾವ್ಯಾನುಸಂಧಾನದ ಪಶ್ವಾತ್ಪರಿಣಾಮದ ಸಲೀಲವೂ ಸೂಕ್ಷ್ಮವೂ ಆದ ಅನುಭವ ಕಥನವನ್ನಿಲ್ಲಿ ಭಾವಪೂರ್ಣವಾಗಿ ಪ್ರಸ್ತುತ ಪಡಿಸಿದ್ದಾರೆ. ಕಾವ್ಯಾನುಭವವು ಓದುಗನ ಖಾಸಗಿ ಲೋಕದ ದಿವ್ಯಗಳೊಂದಿಗೆ ಹೇಗೆ ತಳುಕು ಹಾಕಿಕೊಳ್ಳುವುದು ಎಂಬುದರ ಸುಂದರ ವಿದಕ್ಷೆ ಕಮಲ ಅವರ ಈ ವಿನೂತನ ಭಾವ ಲಹರಿ ಎಂದಿದ್ದಾರೆ' ಇದು ಕೊಳದ ಮೇಲಿನ ಗಾಳಿ ಕೃತಿಯ ಪ್ರಸ್ತುತತೆಯನ್ನು ವಿವರಿಸುತ್ತದೆ.
ಕವಿ-ಅನುವಾದಕಿಯಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತ ಎಂ.ಆರ್. ಕಮಲಾ ಅವರು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. 1959ರ ಮಾರ್ಚ್ 27ರಂದು ಜನಿಸಿದರು. ತಂದೆ ಎಂ.ಎಚ್. ರಾಮಸ್ವಾಮಿ, ತಾಯಿ ವಿಶಾಲಾಕ್ಷಿ. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಎಲ್.ಎಲ್.ಬಿ. ಪದವಿ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಪಾಶ್ಚಿಮಾತ್ಯ ಸಾಹಿತ್ಯ ಅಧ್ಯಯನಕ್ಕಾಗಿ ಬಿಎಂಶ್ರೀ ಚಿನ್ನದ ಪದಕ ವಿಜೇತರು. ಫ್ರೆಂಚ್ ಭಾಷೆಯಲ್ಲಿ ಪದವೀಧರರು. ಶಕುಂತಲೋಪಾಖ್ಯಾನ (1988), ಜಾಣೆ ಮತ್ತು ಇತರ ಕವಿತೆಗಳು (1992), ಹೂವು ಚೆಲ್ಲಿದ ಹಾದಿ (2007), ಮಾರಿಬಿಡಿ (2017) ಕವನ ಸಂಕಲನಗಳು. ಆಫ್ರಿಕನ್-ಅಮೆರಿಕನ್ ಮತ್ತು ಅರಬ್ ಮಹಿಳಾ ಕಾವ್ಯದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. ’ಕತ್ತಲ ಹೂವಿನ ಹಾಡು (1989) ...
READ MORE