ಸಾಹಿತ್ಯ ವಿಮರ್ಶಕ ಎಲ್.ಎಸ್. ಶೇಷಗಿರಿರಾವ್ ಅವರು ವಿವಿಧ ದೇಶ-ಭಾಷೆಗಳ ನಾಟಕಗಳನ್ನು ಒಗ್ಗೂಡಿಸಿ ತಂದಿರುವ ಕೃತಿ ’ನಾಟಕ ರತ್ನಗಳು’ .ವಿಶ್ವ ಸಾಹಿತ್ಯ ತಮ್ಮ ಆಸಕ್ತಿಯ ಕ್ಷೇತ್ರವಾಗಿರುವುದರಿಂದಲೇ ಇಂತಹ ಪ್ರಯತ್ನ ಅವರಿಗೆ ಸಾಧ್ಯವಾಗಿದೆ.
ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು ಕೃತಿಯ ಬಗ್ಗೆ ಪ್ರಸ್ತಾಪಿಸುತ್ತ ಎಲ್‌ಎಸ್‌ಎಸ್ ಅವರು ’...ತಮ್ಮ ಇಳಿವಯಸ್ಸಿನಲ್ಲಿಯೂ ಅವರು ಜಗತ್ತಿನ ಬೇರೆ ಬೇರೆ ದೇಶ-ಭಾಷೆಗಳ ನಾಟಕಗಳನ್ನು ಪರಿಚಯಿಸುವುದರ ಮೂಲಕ ಕನ್ನಡದ ಮನಸ್ಸನ್ನು ಹಿಗ್ಗಿಸುವ ಪ್ರಯತ್ನ ಮಾಡಿದ್ದಾರೆ. ಈ ರೀತಿಯ ಪ್ರಯತ್ನಗಳು ಜಾಗತಿಕ ನೆಲೆಯಲ್ಲಿ ಸಂವಾದ ನಡೆಸಲು ಅತ್ಯಗತ್ಯ. ತೌಲನಿಕ ಅಧ್ಯಯನಕ್ಕೂ ಅಗತ್ಯ, ಕನ್ನಡದ ಬೆಳವಣಿಗೆಗಂತೂ ಅತ್ಯಂತ ಉಪಯುಕ್ತ’ ಎಂಬ ಮಾತುಗಳನ್ನು ಆಡಿದ್ದಾರೆ.
ವಿಶ್ವದ ಅನೇಕ ನಾಟಕಗಳು ಒಟ್ಟಿಗೆ ಸಿಗುವದರಿಂದ ಸಾಹಿತ್ಯಾಸಕ್ತರಿಗೂ ನಾಟಕಾಸಕ್ತರಿಗೂ ಒಟ್ಟಿಗೆ ಪ್ರಿಯವಾಗುವ ಕೃತಿ ಇದು.
ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಲ್.ಎಸ್. ಶೇಷಗಿರಿರಾವ್ ಅವರು ಪ್ರಬುದ್ಧ ವಿಮರ್ಶಕರೆಂದೇ ಖ್ಯಾತರು. ತಂದೆ ಸ್ವಾಮಿರಾವ್- ತಾಯಿ ಕಮಲಾಬಾಯಿ. 1925ರ ಫೆಬ್ರುವರಿ 16ರಂದು ಜನಿಸಿದರು. ಬೆಂಗಳೂರು ಮೈಸೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ನಾಗಪುರ ವಿ.ವಿ.ಯಲ್ಲಿ ಇಂಗ್ಲಿಷ್ ಎಂ.ಎ. ಪದವೀಧರರಾದರು. ಕಾಲೇಜು ಶಿಕ್ಷಣ ಇಲಾಖೆಗೆ ಸೇರಿ ಕೋಲಾರ, ಮಡಿಕೇರಿ, ಬೆಂಗಳೂರುಗಳಲ್ಲಿ ಕಾಲೇಜು ಅಧ್ಯಾಪಕರಾಗಿ ಕೊನೆಯಲ್ಲಿ ಕೆಲವುಕಾಲ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. 1947-50ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಥಮ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ...
READ MORE