ಸಾಹಿತ್ಯ ಕೃತಿಯೊಂದುಜನಸಮೂಹದ ಬದುಕಿನ ಗರ್ಭದಲ್ಲಿಯೇ ರೂಪ ಪಡೆಯುತ್ತದೆ. ನೆಲದ ಬದುಕಿನ ಮೇಲೆಯೇ ಅದು ನಿಂತಿರುತ್ತದೆ. ಯಾವೆಲ್ಲ ಆದರ್ಶಗಳು, ಪರಮಮೌಲ್ಯಗಳು ಅದರಲ್ಲಿ ತುಂಬಿಕೊಂಡಿದ್ದರೂ ಅದರ ಮುಖ ಮಾತ್ರ ಭೂಮಿಯಯತ್ತಲೇ ಇರುತ್ತದೆ.ಹಾಗಾಗಿ ಒಂದು ಸಾಹಿತ್ಯ ಕೃತಿ ಕೇವಲ ಸಾಹಿತ್ಯಾಂಶಗಳನ್ನು ನೀಡಿ ವಿರಮಿಸುವುದಿಲ್ಲ. ಅಂತೆಯೇ ಮಲೆನಾಡಿನ ಬಗ್ಗೆ ಕುವೆಂಪು ಕಾದಂಬರಿಗಳು ವಿಶೇಷವಾದ ಮಾಹಿತಿ ನೀಡುತ್ತವೆ. ಇದರಿಂದಾಗಿ ಒಂದು ವಿಚಾರ ಸ್ಪಷ್ಡವಾಗುತ್ತದೆ. ಸಾಹಿತ್ಯ ಕೃತಿಗಳ ವಿಶ್ಲೇಷಣೆಯಿಂದ ಆ ಸಾಹಿತ್ಯ ಕೃತಿಗಳು ಚಿತ್ರಿಸುವ ಜನಜೀವನದ ಹತ್ತಾರು ಮುಖಗಳ ಪರಿಚಯವನ್ನು ಪಡೆಯಬಹುದು. ಪ್ರಯತ್ನಿಸಿದರೆ ಅವುಗಳ ಮೂಲಕ ಅಂದಿನ ಸ್ಥಿತಿಗಳ ʼವ್ಯವಸ್ಥಿತ ಅರಿವುʼ ಹೊಂದಬಹುದು. ಕುವೆಂಪು ಕಾದಂಬರಿಗಳನ್ನುಸಾಹಿತ್ಯಿಕ, ಭಾಷಿಕ, ಸಾಮಾಜಿಕ, ಐತಿಹಾಸಿಕ, ಮನಃಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸುವಷ್ಟು ಸಾಧನ ಸಾಮಗ್ರಿಯನ್ನು ಅವು ತುಂಬಿಕೊಂಡಿವೆ. ಸಾಂಸ್ಕೃತಿವಾದ ವಿಶ್ಲೇಷಣೆಯಿಂದ ಅವುಗಳ ಅರ್ಥವ್ಯಾಪ್ತಿ ಮತ್ತೂ ಹೆಚ್ಚುತ್ತದೆ, ಎಂದರೆ ಅಲ್ಲಿ ಅಂತರ್ಗತವಾಗಿರುವ ಸಮಾಜ ಮತ್ತು ಮಾನವಶಾಸ್ತ್ರೀಯವಾದ ಮುಖ ಗೋಚರಿಸುತ್ತದೆ.
ಡಾ. ಗುರುಪಾದ ಮರಿಗುದ್ದಿ ಅವರು ಸೃಜನಶೀಲ ಹಾಗೂ ಸೃಜನೇತರ ಕ್ಷೇತ್ರಗಳೆರಡರಲ್ಲಿಯೂ ಕೃತಿ ರಚಿಸಿರುವ 'ಸವ್ಯಸಾಚಿ’. ಕಾವ್ಯಲಹರಿಯಿಂದ ಆರಂಭವಾದ ಸಾಹಿತ್ಯ ಕೃಷಿಯು ಸಂಶೋಧನೆ, ವಿಮರ್ಶೆ ಹಾಗೂ ಕುವೆಂಪು ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ, ಲೋಕಾನುಭವ ಸಾಹಿತ್ಯಗಳಲ್ಲಿ ಹರಡಿದೆ. ಅವರು ಕುವೆಂಪು ಸಾಹಿತ್ಯ ಕುರಿತಂತೆ ಬರೆದ ನಿರಂತರ ನಿಷ್ಠಾವಂತ ಕೃಷಿಕರು. ಕುವೆಂಪು ಸಾಹಿತ್ಯದ ಕುರಿತು ಉತ್ತರ ಕರ್ನಾಟಕದಲ್ಲಿ ಕುವೆಂಪು ಸಾಹಿತ್ಯದ ಪರಿಚಯ ಕೈಗೊಂಡಿದ್ದಾರೆ. ಗುರುಪಾದ ಮರಿಗುದ್ದಿ ಅವರು ಸ್ವಂತ ಪ್ರತಿಭೆ ಹಾಗೂ ಸತತ ಅಭ್ಯಾಸದಿಂದ ಸಾಹಿತ್ಯದ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿರುವ ಅವರು ವಾಗ್ಮಿಯಾಗಿಯೂ ಜನಪ್ರಿಯ. ಸರಳತೆ ಸಜ್ಜನಿಕೆಗೆ ಹೆಸರಾದ ಮರಿಗುದ್ದಿ ...
READ MOREಕುವೆಂಪು ಸಾಹಿತ್ಯ ಕೃತಿಗಳು ಸಂಸ್ಕೃತಿಯ ಸುಸಮೃದ್ಧ ಖನಿಗಳಾಗಿವೆ.ಅವರ ಎರಡು ಮಹಕಾದಂಬರಿಗಳನ್ನು ಪ್ರಾದೇಶಿಕ ಎಪಿಕ್‌ಗಳೆಂದು,ಮಲೆನಾಡಿನ ಮಹಾಭಾರತಗಳೆಂದು ಕರೆಯಲಾಗಿದೆ. ಮಲೆನಾಡಿನ ಮಹಾಭಾರತಗಳಾದರೂ ಅಲ್ಲಿ ಕಾಣುವುದು ಭಾರತೀಯ ಸಂಸಂಸ್ಕೃತಿಯ ಮಹಾಜ್ಯೋತಿ.ಹೂವಯ್ಯ ಮುಕುಂದಯ್ಯರನ್ನು ಜಗತ್ತಿನ ಯಾವ ಭಾಗದಲ್ಲಾದರೂ ಕಾಣಬಹುದು ; ಚಂದ್ರಯ್ಯಗೌಡ ಸುಬ್ಬಣ್ಣ ಹೆಗ್ಗಡೆಯವರು ಮಹಾರಾಷ್ಟ್ರದ ಸಹ್ಯಾದ್ರಿ ತಪ್ಪಲಿನಲ್ಲಿಯೂ ಸಿಗುವಂಥವರು ; ಸೀತೆ ಚಿನ್ನಮ್ಮ ರಾಜಾಸ್ಥಾನದಲ್ಲಿಯೂ ಕಾಣುವಂಥವರು ; ನಾಗಕ್ಕ ಸುಬ್ಬಮ್ಮ ಅಸ್ಸಾಂನಲ್ಲಿ ಸಿಗುವುದಿಲ್ಲವೇ ? ಐತ ಪೀಂಚಲು ಗುತ್ತಿಯರು ಅಂತೆಯೇ ಹುಲಿಯ ನಾಡಿನ ಯಾವ ಕೊಂಪೆಯಲ್ಲಾದರೂ ಇರುವಂಥವರೇ. ಇಲ್ಲಿ ಚಿತ್ರಿತವಾಗಿರುವ ಜಾತೀಯತೆ,ಅಸ್ಪೃಶ್ಯತೆ, ತಾರತಮ್ಯ ಭೇದ, ಪುರೋಹಿತಶಾಹಿ ಹಾಗೂ ಮತಾಂತರ ಭಾರತೀಯ ಸಂಸ್ಕೃತಿಯ ವಿಶಿಷ್ಟ ಲಕ್ಷಣಗಳು ! ಅಂದ ಮೇಲೆ ಇವನ್ನುರಾಷ್ಟ್ರೀಯ ಕಾದಂಬರಿಗಳೆಂದೇ ಕರೆಯಬಹುದು.
ಒಕ್ಕಲಿಗರದು. ವಿಶಿಷ್ಟ ಧಾರ್ಮಿಕ ಜೀವನವನ್ನುವುದನ್ನು ಗ್ರಂಥಕರ್ತರು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಅವರು ಯಾವ ಮತಕ್ಕೂ ಅಂಟಿಕೊಂಡವರಲ್ಲ, ಯಾವ ಮತವನ್ನೂ ದೂಷಿಸಿದವರಲ್ಲ, ಜೈನರ ಪ್ರಭಾವವಿದ್ದಾಗ ಜೈನರಾದರು, ವೀರಶೈವರು ಆಳುವಾಗ ವೀರಶೈವರಾದರು, ಪಾದ್ರಿಗಳ ಉಪದೇಶಕ್ಕೆ ಸೋತು ಕ್ರಿಶ್ಚಿಯನ್‌ರಾದರು ; ಅಷ್ಟೇ ಅಲ್ಲ, ಮತಾಂತರವಾಗದೆಯೆ ಎಲ್ಲ ಮತೀಯರ ದೇವರುಗಳಿಗೆ ನಡೆದುಕೊಳ್ಳು ತ್ತಾರೆ ;ಎಲ್ಲ ಮಠಗಳಿಗೂ ಹೋಗುತ್ತಾರೆ. ಇವರನ್ನು ಹಿಂದುಗಳ ಗುಂಪಿಗೆ ಸೇರಿಸುವುದೂ ಕಷ್ಟವಾಗುತ್ತದೆ. ಏಕೆಂದರೆ ಹಿಂದುವಾದವನು ಯಾವ ಯಾವ ವಿಧಿನಿಷೇಧಗಳನ್ನನುಸರಿಸಬೇಕೆಂದು ಸಂಪ್ರದಾಯಸ್ಥರು ಹೇಳುತ್ತಾರೆಯೋ ಅವುಗಳಲ್ಲೊಂದೂ ಅವರಿಗನ್ವಯಿಸುವುದಿಲ್ಲ. ಹಿಂದೂ ಎಂಬ ಪ್ರಜ್ಞೆಯೂ ಅವರಿಗಿಲ್ಲ. ಪ್ರಜ್ಞೆ ಇದ್ದರೆ ಬಾಬಯ್ಯನ ಹಬ್ಬದಲ್ಲಿ ಹುಲಿವೇಷ ಹಾಕುತ್ತಿದ್ದರೆ? ಪಾದ್ರಿಗಳ ಕಾಲಿಗೆ ಬೀಳುತ್ತಿದ್ದರೆ
–ದೇಜಗೌ-