ಚಿಂತಕ ರಾಜೇಂದ್ರ ಚೆನ್ನಿ ಅವರು 2015ರಿಂದ ಈಚೆಗೆ ಬರೆದ ಲೇಖನಗಳ ಸಂಕಲನ ಇದು. ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆಗೆ ಮರುಗಿ ಬರೆದ 'ಕೆಟ್ಟಿತ್ತು ಕಲ್ಯಾಣ: ಕಲಬುರ್ಗಿಯವರ ಹತ್ಯೆ', 'ಸಮಕಾಲೀನ ದಲಿತ ಸಾಹಿತ್ಯ’, ಇಲ್ಲಿನ ಪ್ರಮುಖ ಲೇಖನಗಳು. ಅಲ್ಲದೆ ಸಮಾಜ, ಸಂಸ್ಕೃತಿ ಹಾಗೂ ರಾಜಕೀಯ ಸಾಹಿತ್ಯಕ್ಕೆ ಸಂಬಂಧಿಸಿದ ಲೇಖನಗಳನ್ನೂ ಕೃತಿ ಒಳಗೊಂಡಿದೆ.
ರಾಜ್‌ಕುಮಾರ್, ಶೇಕ್ಸ್ ಪಿಯರ್, ಕನಕದಾಸ ಹೀಗೆ ಅನೇಕ ವ್ಯಕ್ತಿತ್ವಗಳ ಮೂಲಕ, ಸಮಕಾಲೀನ ಸಮಸ್ಯೆಗಳನ್ನು ಅವರ ಬರಹಗಳು ಚರ್ಚಿಸುತ್ತವೆ. ಅಂತೆಯೇ ಕೃತಿಯಲ್ಲಿ ಹಲವು ಜ್ಞಾನ ಶಿಸ್ತುಗಳಿಗೆ ಸಂಬಂಧಿಸಿದ ಲೇಖನಗಳಿವೆ. ಪ್ರಾದೇಶಿಕ, ಭಾರತೀಯ, ಇತರ ಭಾಷೆಗಳ ಹಾಗೂ ಜಾಗತಿಕ ಸಾಹಿತ್ಯ ಸಂವೇದನೆ ಚಿಂತನೆ ಸಂದರ್ಭಗಳ ಮುಖಾಮುಖಿಯಲ್ಲಿ ವಿಶ್ಲೇಷಣೆಗಳು ನಡೆದಿವೆ.
ಏನು ಮಾತನಾಡಿದರೂ ರಾಜಕೀಯವಾಗಿಬಿಡುವ ಆತಂಕವನ್ನು, ಅದರಿಂದ ಹೊರಬರಬೇಕಾದ ಅಗತ್ಯತೆಯನ್ನು ಕೃತಿ ಹೇಳುತ್ತದೆ. ಸಾಹಿತ್ಯ, ಸಂಸ್ಕೃತಿಯಂತಹ ವಿಚಾರಗಳು ರಾಜಕೀಯ ಸ್ವರೂಪ ಪಡೆಯುವುದರ ಬಗ್ಗೆ ಲೇಖನಗಳು ತಳಮಳದಿಂದ ಮಾತನಾಡುತ್ತವೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE