About the Author

ಕತೆಗಾರ-ನಾಟಕಕಾರ ರಾಮಚಂದ್ರದೇವ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು.  1948ರ ಮಾರ್ಚ್‌ 22ರಂದು ಜನಿಸಿದರು.

ಕಲ್ಲಡ್ಕ, ಬಾಳ್ತಿಲ, ಪಂಜ, ಪುತ್ತೂರುಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ದೇವ ಅವರು ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡ, ಇಂಗ್ಲಿಷ್ ಭಾಷಾಶಾಸ್ತ್ರ, ಹಿಂದಿಗಳನ್ನು ವಿಶೇಷ ವಿಷಯಗಳನ್ನಾಗಿ ತೆಗೆದುಕೊಂಡು ಬಿ.ಎ. ಪದವಿ ಹಾಗೂ ಮಾನಸ ಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಶೇಕ್ಸ್‌ಪಿಯರ್ ಅನುವಾದಗಳ ತೌಲನಿಕ ಅಧ್ಯಯನಕ್ಕಾಗಿ ಪಿಎಚ್. ಡಿ. ಪಡೆದರು.

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು.  ನವದೆಹಲಿಯ ಅಮೆರಿಕನ್ ಎಂಬೆಸಿಗೆ ಸೇರಿದ ಯುನೈಟೆಡ್ ಸ್ಟೇಟ್ಸ್ ಲೈಬ್ ಆಫ್ ಕಾಂಗ್ರೆಸ್ಸಿನಲ್ಲಿ ಗ್ರಂಥಪಾಲಕರಾಗಿದ್ದ ಅವರು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕ ಹಾಗೂ ಅದೇ ಸಂಸ್ಥೆಯ ಪ್ರಿಂಟರ್ ಪ್ರಕಾಶನದ ಮುಖ್ಯಸ್ಥರಾಗಿದ್ದರು. ಬೋಧಿ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾದ ಅವರು ಕೆಲ ಕಾಲ ಕಲ್ಲಡ್ಕ ಗ್ರಾಮದ ತಮ್ಮ ತೋಟದಲ್ಲಿ ಕೃಷಿಕರಾಗಿದ್ದರು.

ದೇವ ಅವರು 2013 ಸೆಪ್ಟೆಂಬರ್‌ 11ರಂದು ನಿಧನರಾದರು.

 

ರಾಮಚಂದ್ರದೇವ

(22 Mar 1948-11 Sep 2013)