ಸಾಹಿತ್ಯ, ಸಂಸ್ಕೃತಿ, ರಾಜಕೀಯ ಟಿಪ್ಪಣಿಗಳು
ನಾವು ಇತಿಹಾಸದಿಂದ ಬಲ್ಲ ಯಾವ ವ್ಯವಸ್ಥೆಯೂ ಸಮಗ್ರವಾಗಿಲ್ಲ. ಅಂಥ ವ್ಯವಸ್ಥೆಯಲ್ಲಿ ಹುಟ್ಟಿ ಬದುಕುವ ಯಾವ ಮನುಷ್ಯ ಜೀವಿಯೂ ವ್ಯವಸ್ಥೆಯೂ ಸಮಗ್ರವಾಗಿರಲು ಸಾಧ್ಯವೂ ಇಲ್ಲ. ಚರಿತ್ರೆಯ ಚಲನೆಯಲ್ಲಿ ಎಲ್ಲಾ ವ್ಯವಸ್ಥೆಗಳೂ ಅಸಮಗ್ರವಾಗಿರುವುದು ಅನಿವಾರ್ಯವೇ. ಇಷ್ಟು ಮಾತ್ರವಲ್ಲದೆ ಸಿಗ್ಮಂಡ್ ಫ್ರಾಯ್ಡ್ ನಂತರ ಸಮಗ್ರವಾದ, ಏಕಾಕೃತಿ ಉಳ್ಳ ಮನುಷ್ಯ ಪ್ರಜ್ಞೆಯನ್ನು ಕಲ್ಪಿಸಿಕೊಳ್ಳುವುದೂ ವೈಚಾರಿಕವಾಗಿ ಸಮರ್ಪಕವಲ್ಲ. ಹಾಗಿರುವಾಗ ಕೃತಿಯಲ್ಲಿ, ಕೃತಿಕಾರನ ಕಲ್ಪಿತ ವ್ಯಕ್ತಿತ್ವದಲ್ಲಿ ಮಾತ್ರ ಸಮಗ್ರತೆಯನ್ನು ಯಾಕೆ ಅಪೇಕ್ಷಿಸುತ್ತೇವೆ? ಬಹುಶಃ ಅಸಮಗ್ರತೆಯೇ ವ್ಯವಸ್ಥೆ, ಬದುಕು ಹಾಗೂ ಪ್ರಜ್ಞೆಯ ಅನಿವಾರ್ಯ ಸ್ವರೂಪವೆನ್ನುವುದನ್ನು ಒಪ್ಪಲು ನಮ್ಮ ಮನಸ್ಸು ಹಿಂದೇಟು ಹಾಕುತ್ತದೆ. ಈ ತಾತ್ವಿಕ ಅಧೈರ್ಯದಿಂದಾಗಿಯೇ ಸಮಗ್ರತೆಯ ಅಪೇಕ್ಷೆ ನಮ್ಮಲ್ಲಿ ಹುಟ್ಟುತ್ತದೆ.
ಅಸಮಗ್ರ ಕೃತಿಯಲ್ಲಿ ಒಟ್ಟು 26 ಲೇಖನಗಳಿವೆ. ಬೇಂದ್ರೆ, ಅಡಿಗರ, ಕಂಬಾರ, ವಚನ ಚಳವಳಿ, ಅಕ್ಕ, ಕನ್ನಡ ಕಥನ, ನವ್ಯ ವಿಮರ್ಶೆ, ರಾಘವೇಂದ್ರ ಪಾಟೀಲ, ನೆನಪಿನ ದೋಣಿಯಲ್ಲಿ ಕುವೆಂಪು, ಅಖೈರಾಗದ ಪದ್ಯಗಳು, ಕುರಿತಾದ ಲೇಖನಗಳು ಸಾಹಿತ್ಯ- ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದವುಗಳಾಗಿವೆ. ಪವಿತ್ರವಾದದ್ದು ಒಂದೇ ಭಾರತ ಸಂವಿಧಾನ, ಸಾಮಾಜಿಕ ನ್ಯಾಯ, ಚುನಾವಣಾ ರಾಜಕೀಯ, ಕನ್ನಡವು ಒಂದು ಪರಿಭಾವಿಸುವ ಒಂದು ಕ್ರಿಯೆ, ಕನ್ನಡ ಸಾಹಿತ್ಯ ಸಂಸ್ಕೃತಿ-ಲೋಹಿಯಾ ಪ್ರಶ್ನೆಗಳು, ಕನ್ನಡ ಸ್ವರಾಜ್, ರಾಜಕುಮಾರ, ವಸಾಹತು ಸಂದರ್ಭದಲ್ಲಿ ಭಾಷಾಂತರ, ಜಾಗತೀಕರಣ ಸೃಷ್ಟಿಸಿದ ಬಿಕ್ಕಟ್ಟುಗಳು, ದೇಶಿ ಶಿಕ್ಷಣ ಪದ್ದತಿ ಮತ್ತು ಜಾಗತೀಕರಣ ಲೇಖನಗಳು ಕೂಡ ಸಮಕಾಲೀನ ಸಮಾಜ, ಸಂಸ್ಕೃತಿ, ಚಿಂತನೆ ನಡೆಸುತ್ತವೆ. ಸುತ್ತಲಿನ ಬದಲಾವಣೆಯ ಬಗ್ಗೆ ಅರಿವು ಮೂಡಿಸುವಲ್ಲಿ ಈ ಲೇಖನಗಳು ಯಶಸ್ವಿಯಾಗಿವೆ.
ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...
READ MORE