ನಿರ್ದಿಗಂತವಾಗಿ ಏರಿ

Author : ಸುಭಾಷ್ ರಾಜಮಾನೆ

Pages 300

₹ 245.00




Year of Publication: 2017
Published by: ವಂಶಿ ಪಬ್ಲಿಕೇಷನ್ಸ್
Address: ಗಾಯತ್ರಿ ಕಾಂಪ್ಲೆಕ್ಸ್, ಟಿ.ಬಿ. ಬಸ್ ನಿಲ್ದಾಣದ ಬಳಿ ಬಿ.ಎಚ್. ರಸ್ತೆ, ನೆಲಮಂಗಲ, ಬೆಂಗಳೂರು - 562123
Phone: 9743055511

Synopsys

‘ನಿರ್ದಿಗಂತವಾಗಿ ಏರಿ’ ಲೇಖಕ ಸುಭಾಷ್ ರಾಜಮಾನೆ ಅವರ ವಿಮರ್ಶಾ ಲೇಖನಗಳ ಸಂಕಲನ. ಬೆಳಗಾವಿ ಸೀಮೆಯವರಾದ ರಾಜಮಾನೆ, ಗ್ರಾಮೀಣ ಪ್ರದೇಶದ ದಲಿತರು ಸಾಮಾನ್ಯವಾಗಿ ಅನುಭವಿಸುವ ಕಷ್ಟ ಅಪಮಾನ ಕಂಡವರು. ಅವರಂತೆ ಕಷ್ಟಪಟ್ಟು ಬೆಳೆದವರನ್ನು ನಾನು ಹೆಚ್ಚು ನೋಡಲಿಲ್ಲ. ಆದರೆ ರಾಜಮಾನೆಯವರಿಗೆ ಸಾಹಿತ್ಯದ ಓದು ಮತ್ತು ಬರೆಹಗಳು ಆತ್ಮವಿಶ್ವಾಸ ಮತ್ತು ಘನತೆಯ ಬದುಕನ್ನು ಕಟ್ಟಿಕೊಳ್ಳುವ ಹಾದಿಯಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ ಎನ್ನುತ್ತಾರೆ ಹಿರಿಯ ಲೇಖಕ ರಹಮತ್ ತರೀಕೆರೆ.

ಕನ್ನಡದ ಕತೆ ಕಾವ್ಯ ಕಾದಂಬರಿಗಳನ್ನೇ ಓದುವವರು ಅಥವಾ ಅವನ್ನು ಆಕರವಾಗಿಸಿಕೊಂಡು ಸಂಶೋಧನೆ ಮಾಡುವವರು ಸಾಕಷ್ಟಿದ್ದಾರೆ. ಆದರೆ ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಗಳನ್ನು ಪ್ರೀತಿಯಿಂದ ಓದುವವರು ಅಥವಾ ಅವನ್ನಿಟ್ಟುಕೊಂಡು ಸಂಶೋಧನೆ ಮಾಡುವವರು ಕಡಿಮೆ. ರಾಜಮಾನೆ ಅವರಿಗೆ ಸಾಹಿತ್ಯ ವಿಮರ್ಶೆಯ ಜತೆ ಹಿಂದಿನಿಂದ ಒಡನಾಟ ಇದ್ದುದರಿಂದ ಅದನ್ನು ಅಧ್ಯಯನ ಮಾಡುವುದು ಸುಲಭವಾಯಿತು. ಈ ಪುಸ್ತಕ ಅವರ ಓದಿನ ಹರಹನ್ನೂ ವಿಶ್ಲೇಷಣ ಪ್ರತಿಭೆಯನ್ನೂ ಈ ಕೃತಿ ಒಳಗೊಂಡಿದೆ.

About the Author

ಸುಭಾಷ್ ರಾಜಮಾನೆ
(01 June 1980)

ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎಡ್ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನುವಾದಿಸಿರುವ ಕೃತಿಗಳು: `ದಿ ಆರ್ಟಸ್ಟ್' (ಮೈಕೆಲ್ ಹಜನ್ ವಿಸಿಯಸ್), 'ಬದುಕಿನ ಅರ್ಥವನ್ನು ಹುಡುಕುತ್ತಾ...' (ವಿಕ್ಟರ್ ಫ್ರಾಂಕ್ಲ್), 'ಮುಳುಗದಿರಲಿ ಬದುಕು' (ಎಪಿಕ್ಟೇಟಸ್), 'ರಾತ್ರಿಗೆ ಸಾವಿರ ಕಣ್ಣುಗಳು' (ಅಲೆಸ್ಸಂಡ್ರೋ ...

READ MORE

Related Books