ಕಾರಣ ಮೀಮಾಂಸೆ

Author : ಡಿ. ಅಂಜನಪ್ಪ ಚಳ್ಳಕೆರೆ

Pages 180

₹ 150.00




Year of Publication: 2017
Published by: ಸಿ.ವಿ.ಜಿ. ಪಬ್ಲಿಕೇಷನ್ಸ್
Address: ನಂ.277, 5ನೇ ಕ್ರಾಸ್, ವಿಧಾನಸೌಧ ಲೇಔಟ್, ಲಗ್ಗೆರೆ, ಬೆಂಗಳೂರು- 560058

Synopsys

‘ಕಾರಣ ಮೀಮಾಂಸೆ’ ವಿಮರ್ಶಕ ಪ್ರೊ.ಡಿ.ಅಂಜನಪ್ಪ ಚಳ್ಳಕೆರೆ ಅವರ ವಿಮರ್ಶಾ ಲೇಖನಗಳ ಸಂಕಲನ. ಯಾವುದೇ ಸಾಹಿತ್ಯಿಕ ಕೃತಿಗೆ ಒಂದು ಸಾಮಾಜಿಕ ಹಿನ್ನೆಲೆ, ಹೊಣೆಗಾರಿಕೆ ಮತ್ತು ಉದ್ದೇಶ ಇರುತ್ತದೆ, ಇರಬೇಕು ಎಂಬುದು ಲೇಖಕರ ಖಚಿತ ನಿಲುವು. ಅವರ ವಿಮರ್ಶೆಯ ಕಣ್ಣು ಪಂಪನಿಂದ ಕುವೆಂಪುವರೆಗಿನ ಶ್ರೇಣಿಯನ್ನು ದಾಟಿಕೊಂಡು ಹೊಸ ತಲೆಮಾರಿನ ವೈವಿಧ್ಯಮಯ ಕೃತಿಗಳನ್ನು ಹಾದು ಬಂದಿರುವುದು ಅವರ ಆಯ್ಕೆಯ ಅಭಿರುಚಿಗೆ ಸಾಕ್ಷಿಯಾಗಿದೆ ಹಾಗೂ ಕೃತಿಗಳ ಅಂತರಂಗದೊಳಗೆ ಅಡಗಿರುವ ಸೊಗಸನ್ನು ಆಸ್ವಾದಿಸಿ ವಿವರಿಸುವ ರೀತಿ ತುಂಬಾ ವಿಶಿಷ್ಟವಾಗಿದೆ.

About the Author

ಡಿ. ಅಂಜನಪ್ಪ ಚಳ್ಳಕೆರೆ

ಪ್ರೊ. ಡಿ.ಅಂಜನಪ್ಪ ಚಳ್ಳಕೆರೆ  ಅವರು ಇವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದವರು. ಪ್ರಾಥಮಿಕ, ಮಾಧ್ಯಮಿಕ ಮತ್ತು ಪದವಿ ಶಿಕ್ಷಣವನ್ನು ಚಳ್ಳಕೆರೆಯಲ್ಲಿ ಪೂರೈಸಿದರು. ಪ್ರೌಢಶಾಲಾ ಶಿಕ್ಷಣವನ್ನು ಪರಶುರಾಂಪುರದಲ್ಲಿ ಅಭ್ಯಸಿಸಿದರು. ಕನ್ನಡ ಸ್ನಾತಕೋತ್ತರ ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಈಗ ಚಳ್ಳಕರಯ ಎಚ್.ಪಿ.ಪಿ.ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾರ ನಿರ್ವಹಿಸುತ್ತಿದ್ದಾರೆ. ಕನ್ನಡದ ವಿಶಿಷ್ಟ ಓದುಗರಾಗಿರುವ ಅವರು ಈಗಾಗಲೇ ಇವರ ‘ಒಡಲ ಭಾಷೆ (2014), ವೈಚಾರಿಕತೆ ಮತ್ತು ಸಾಂಸ್ಕೃತಿಕ ರಾಜಕಾರಣ, ಕಾರಣ ಮೀಮಾಂಸೆ (2017), ;ವಿಮರ್ಶೆಯ ವಿವೇಕ’ ಎಂಬ ನಾಲ್ಕು ಕೃತಿಗಳು ಪ್ರಕಟವಾಗಿವೆ. ...

READ MORE

Related Books