ವಿನೂತನ ಕಥನ ಕಾರಣ

Author : ಬಿ. ಜನಾರ್ದನ ಭಟ್

Pages 520

₹ 525.00




Year of Publication: 2022
Published by: ಶ್ರೀ ರಾಮ ಪ್ರಕಾಶನ
Address: ಸಂಖ್ಯೆ 893 / ಡಿ, 3ನೇ ಕ್ರಾಸ್ ಬಡಾವಾಣೆ, ನೆಗ್ರು ನಗರ, ಮಂಡ್ಯ - 571401
Phone: 9448768567

Synopsys

‘ವಿನೂತನ ಕಥನ ಕಾರಣ’ ಕೃತಿಯು ಬಿ. ಜನಾರ್ದನ ಭಟ್ ಅವರ ಸಾಹಿತ್ಯಾ ವಿಮರ್ಶ ಸಂಕಲನವಾಗಿದೆ. ಕೃತಿಯಲ್ಲಿ ಒಟ್ಟು 18 ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯ 'ನವಚಾರಿತ್ರಿಕ ಚಳುವಳಿ'ಗೆ ಸಂಬಂಧಿಸಿದ್ದು. ಇತ್ತೀಚಿನ ಸಾಹಿತ್ಯ ವಿದ್ಯಮಾನಗಳನ್ನು ಕೂಲಂಕುಶವಾಗಿ ಅವಲೋಕಿಸಿ ಬರೆದಿರುವ ಈ ಭಾಗದಲ್ಲಿ ಕಳೆದ ಮೂರು ದಶಕಗಳಲ್ಲಿ ಕನ್ನಡ ಸಾಹಿತ್ಯದಲ್ಲಿನ ಬದಲಾವಣೆ, ಕಾದಂಬರಿಗಳಲ್ಲಿ ಹೆಚ್ಚಿನ ಕೃತಿಗಳು ಚರಿತ್ರೆಯನ್ನು ಬಳಸಿಕೊಂಡು ಸಂಕಥನಗಳನ್ನು ಮಂಡಿಸುವ ಕೃತಿಗಳು ಇದರ ವಿಸ್ತರಣೆಯಲ್ಲಿ ಚರ್ಚೆಗೆ ಒಳಗಾಗಿವೆ. ರಾಜಕೀಯ ನಿಲುವುಗಳ ಮೂಲಕ ಸಮಾಜದಲ್ಲಿ ನಡೆಯುವ ದೊಡ್ಡ ಸ್ಥಿತ್ಯಂತರಗಳು ಸಾಹಿತ್ಯದಲ್ಲಿ ಹೊಸ ಸಂಚಲನಗಳಿಗೆ ಕಾರಣವಾಗುತ್ತಿವೆ. ಸಾಹಿತ್ಯದಲ್ಲಿ ಮುಖ್ಯ ಚಟುವಟಿಕೆಯಾದ ಕೃತಿ ರಚನೆಯು ಚಳುವಳಿಯ ಸ್ವರೂಪ ಪಡೆಯಲು ಇರುವ ಪ್ರೇರಣೆ ಯಾವುದು? ನವಚಾರಿಕತ್ರಿಕ ಕೃತಿ ರಚನೆಗೆ ವೇದಿಕೆಯನ್ನು ನಿರ್ಮಿಸಿದ ವಿಷಯಗಳಾವುವು? ಎಂಬುದನ್ನು ಪ್ರಸ್ತಾಪಿಸಿ ಅದೊಂದು ಚಳುವಳಿಯ ರೂಪವನ್ನು ತಾಳಲು ಕಾರಣವೇನು? ವರ್ತಮಾನದ, ಆಶಯಗಳಿಗೆ, ಅಗತ್ಯಗಳಿಗೆ ತಕ್ಕಂತೆ ಇತಿಹಾಸವನ್ನು ನಿರೂಪಿಸುವ ಸಂಕಥನಗಳು ನಿರ್ಮಾಣವಾಗುವ ಮೂರು ಸ್ತರಗಳು ಯಾವುವು? ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books