‘ಒರೆಗಲ್ಲು’ ಬೆಸಗರಹಳ್ಳಿ ರಾಮಣ್ಣ ಅವರ ಕೃತಿಯಾಗಿದೆ. ಇದಕ್ಕೆ ಎನ್.ಆರ್. ವಿಶುಕುಮಾರ್ ಅವರ ಮುನ್ನುಡಿ ಬರಹವಿದೆ; ವೃತ್ತಿಯಿಂದ ವೈದ್ಯರಾಗಿದ್ದ ರಾಮಣ್ಣನವರು 'ಕನ್ನಂಬಾಡಿ' ಪತ್ರಿಕೆಗೆ ಅಂಕಣ ಬರೆಯುವ ಸಂದರ್ಭದಲ್ಲಿ ಸೇವಾ ನಿವೃತ್ತಿಯ ಅಂಚಿನಲ್ಲಿದ್ದು ಮಂಡ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅರಿವಳಿಕೆ (ಅನಸ್ತೇಸಿಯಾ) ತಜ್ಞರಾಗಿ ಕಾವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಅವರಿಗೆ ಹಗಲು ರಾತ್ರಿಗಳನ್ನದೆ ತುರ್ತು ಆಪರೇಷನ್ ಕರೆಗಳು ಬರುತ್ತಿತ್ತು. ಇಂತಹ ಒತ್ತಡದ ಕಾರ್ಯಗಳ ನಡುವೆ ಕೂಡ ಅವರು ಯಾವುದೇ ಬೇಸರವಿಲ್ಲದೆ ಪತ್ರಿಕೆಗೆ ನಿರಂತರವಾಗಿ ಮೂರು ವರ್ಷಗಳ ಕಾಲ 'ಒರೆಗಲ್ಲು' ಅಂಕಣ ಬರೆದುಕೊಟ್ಟರು. ಇದು ಅವರ ಕಾರ್ಯತತ್ಪರತೆ ಮತ್ತು ಪತ್ರಿಕೆಯ ಮೂಲಕ ಜನರಿಗೆ ಒಳ್ಳೆಯದನ್ನು ಹೇಳಬೇಕೆನ್ನುವ ತುಡಿತಕ್ಕೆ ಸಾಕ್ಷಿ.
ಬೆಸಗರಹಳ್ಳಿ ರಾಮಣ್ಣ ಅವರು ಮಂಡ್ಯ ಜಿಲ್ಲೆಯ ಬೆಸಗರಹಳ್ಳಿಯಲ್ಲಿ ಜನಿಸಿದರು. ಇವರ ತಾಯಿ ದೊಡ್ಡತಾಯಮ್ಮ, ತಂದೆ ಚಿಕ್ಕಎಲ್ಲೇಗೌಡ. ತಮ್ಮಲ್ಲಿದ್ದ ಪ್ರತಿಭೆ, ಶಕ್ತಿ, ಚೈತನ್ಯಗಳನ್ನು ಗ್ರಾಮೀಣ ಸಮುದಾಯದ ನೋವು, ನಲಿವು , ಶೋಷಣೆಗೆ, ಅಜ್ಞಾನಕ್ಕೆ ಸ್ಪಂದಿಸಲು ಮೀಸಲಿಟ್ಟವರು ರಾಮಣ್ಣ. ಒಂದೆಡೆ ಸಮುದಾಯದ ದೇಹರೋಗ್ಯ, ಸ್ವಾಸ್ಥ್ಯದ ಕಡೆಗೆ ಗಮನಹರಿಸಿದರೆ ಮತ್ತೊಂದೆಡೆ ಪ್ರವೃತ್ತಿಯಿಂದ ಲೇಖಕರಾಗಿ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಕಡೆಗೂ ಗಮನ ಹರಿಸಿದರು. ಪ್ರಾರಂಭಿಕ ಶಿಕ್ಷಣ ಬೆಸಗರಹಳ್ಳಿ ಮತ್ತು ಮದ್ದೂರಿನಲ್ಲಿ. ಇಂಟರ್ಮೀಡಿಯೇಟ್ ನಂತರ ಎಂ.ಬಿ.ಬಿ.ಎಸ್. ಪದವಿ ಪಡೆದದ್ದು ಮೈಸೂರಿನಲ್ಲಿ. ನಂತರ ಅರಿವಳಿಕೆ ಶಾಸ್ತ್ರದಲ್ಲಿ ಪಡೆದ ಡಿಪ್ಲೊಮಾ. ಅಮೆರಿಕ ಮುಂತಾದ ವಿದೇಶಗಳಿಂದ ಉದ್ಯೋಗಕ್ಕೆ ಆಹ್ವಾನ ಬಂದರೂ ಆಯ್ದುಕೊಂಡದ್ದು ...
READ MORE