’ಉರಿಯ ಉಯ್ಯಾಲೆ’ ಪ್ರೊ. ಶಿವರಾಮಯ್ಯನವರ ಎರಡನೇ ವಿಮರ್ಶಾ ಸಂಕಲನ. ಇಲ್ಲಿ ಹದಿಮೂರು ವಿಮರ್ಶಾ ಲೇಖನಗಳಿವೆ. ಅತ್ಯಾಧುನಿಕ ಮಾಹಿತಿ ತಂತ್ರಜ್ಞಾನಕ್ಕೆ ಮಾದ್ಯಮವಾಗಿರುವ ಇಂಗ್ಲಿಷಿನಿಂದ ನಮ್ಮ ದೇಶೀಭಾಷಾ ಸಂಸ್ಕೃತಿಗಳಿಗೆ ಪೆಟ್ಟು ಬೀಳುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರ ಆಫ್ರಿಕನ್ ಬುಡಕಟ್ಟುಗಳ ಅನೇಕ ಭಾಷಾ ಸಂಸ್ಕೃತಿಗಳು ನಶಿಸಿಹೋದಂತೆ ನಮ್ಮ ಭಾಷಾ ಸಂಸ್ಕೃತಿಗಳೂ ನಶಿಸಿ ಹೋಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಜಾಗತೀಕರಣವೆಂಬ ಈ ಸರಕು ಸಂಸ್ಕೃತಿಗೆ ಮುಖಾಮುಖಿಯಾಗಿ ನಮ್ಮ ನಮ್ಮ ಭಾಷಾ ಸಂಸ್ಕೃತಿಗಳು ಸೆಟೆದು ನಿಲ್ಲಬೇಕಾಗಿರುವುದು ಇಂದಿನ ಅನಿವಾರ್ಯ. ಈ ಒಂದು ಹಿನ್ನೆಲೆಯಿಂದ ನಮ್ಮ ಸೃಜನಶೀಲ ಕೃತಿಗಳನ್ನು ನೋಡುವ ಪುನರ್ ಮೌಲ್ಮೀಕರಣಕ್ಕೆ ಒಳಪಡಿಸುವ ಸಾಂಸ್ಕೃತಿಕ ವಿಮರ್ಶೆ ಕೃತಿಯಲ್ಲಿದೆ. ಪ್ರಾಚೀನ ಸಾಹಿತ್ಯ- ಊಳಿಗಮಾನ್ಯ ಪದ್ದತಿಯ ಪ್ರಧಾನತೆ ಮತ್ತು ಸೃಜನಶೀಲತೆ, ಚಾಣಕ್ಯನ ಹಲ್ಲು ಮುರಿದಿದ್ದೇಕೆ?, ಕುವೆಂಪು ಕಾದಂಬರಿಗಳಲ್ಲಿ ಮಾನವೀಯ ಮೌಲ್ಯಗಳು, ಚಲನಚಿತ್ರ ಮಹಾಭಾತರ- ಬ್ಯಾಂಡಿಡ್ ಕ್ವೀನ್, ಲಂಕೇಶರ ನಾಡೋಜ ಪ್ರಜ್ಞೆ, ಮುಂತಾದ ಲೇಖನಗಳಿವೆ.
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE