‘ಬುದ್ಧಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ’ ಎಸ್. ಎಲ್. ಭೈರಪ್ಪನವರ ‘ಆವರಣ’ ಕೃತಿಯ ವಿಮರ್ಶೆ ಹಾಗೂ ಸಂಕಥನ. ಆವರಣ ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದ್ದು, ಅದರೊಂದಿಗೆ ಕನ್ನಡ ಸಾಹಿತ್ಯ ಲೋಕದ ಒಂದು ವಿಮರ್ಶಾ ಕೃತಿ ಬುದ್ದಿ ಜೀವಿ ವರ್ಸಸ್ ಬೌದ್ಧಿಕ ಸ್ವಾತಂತ್ರ್ಯ
ಈ ಕೃತಿಯನ್ನು ಲೇಖಕ ಅಜಕ್ಕಳ ಗಿರೀಶ ಭಟ್ ರಚಿಸಿದ್ದಾರೆ. ಪರಸ್ಪರ ವಿರುದ್ಧ ವಾದ ತಾತ್ತ್ವಿಕತೆಗಳನ್ನು ಎದುರೆದುರು ಇಟ್ಟು ಚಿಂತನೆ ಮಾಡುವುದು ಎಂದರೆ, ಕ್ಷೌರದಂಗಡಿಯಲ್ಲಿ ಎದುರೆದುರು ಇಟ್ಟಿರುವ ಕನ್ನಡಿಗಳ ನಡುವೆ ನಿಂತು ಎಡಕ್ಕೊಮ್ಮೆ, ಬಲಕ್ಕೊಮ್ಮೆ ನೋಡಿದಂತೆ. ಹೀಗೆ ನೋಡುವುದು ಸಾಹಿತ್ಯದ ಅಭ್ಯಾಸಿಗೆ ಹಿತವಾದ ಶ್ರಮ ಎನಿಸುತ್ತದೆ. ಈ ಶ್ರಮದ ಭಾಗವಾಗಿಯೇ ಸಾಹಿತ್ಯ, ಇತಿಹಾಸ ಮತ್ತು ಸೆಕ್ಯುಲರಿಸಂ ಮೊದಲಾದ ವಿಷಯಗಳ ಕುರಿತು ಇಂದು ಚಾಲ್ತಿಯಲ್ಲಿರುವ ಹಲವು ಒಪ್ಪಿತ ನಿಲುವುಗಳನ್ನು ಈ ಕೃತಿ ಎದುರು ಹಾಕಿಕೊಳ್ಳುತ್ತದೆ.
ಅಜಕ್ಕಳ ಗಿರೀಶ್ ಭಟ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ವೃತ್ತಿಯಲ್ಲಿ ಕನ್ನಡ ಅಧ್ಯಾಪಕರು. ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿದ್ದರು. ಸದ್ಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಅಂಚೆ ತೆರಪಿನ ಶಿಕ್ಷಣದ ಮೂಲಕ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ಡಾ. ಡಿ.ಆರ್. ನಾಗರಾಜ್ ಕುರಿತು ಒಂದು ಅಧ್ಯಯನದ ಬಗ್ಗೆ ಮಹಾಪ್ರಬಂಧವನ್ನು ರಚಿಸಿ ಡಾ. ಶಿವರಾಮಶೆಟ್ಟಿಯವರ ಮಾರ್ಗದರ್ಶನದಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. ಭಾಷೆ, ಸಾಹಿತ್ಯ, ಸಂಸ್ಕೃತಿ ಕುರಿತು ಲೇಖನಗಳನ್ನು ಬರೆಯತೊಡಗಿದ ಅವರ ಐವತ್ತಕ್ಕೂ ಹೆಚ್ಚು ಲೇಖನಗಳು ...
READ MORE