ಮುನ್ನುಡಿಯು ಕೃತಿಯನ್ನು ಓದಬೇಕೆ ಬೇಡವೆ ಎಂದು ನಿರ್ದರಿಸುವಲ್ಲಿ ಓದುಗರಿಗೆ ನೆರವಾಗುತ್ತದೆ.ಹೋಸ ಲೇಖಕರನ್ನು ಪರಿಚಯಿಸುವ ಕೆಲಸವನ್ನು ಕೆಲವೂಮ್ಮೆ ಮುನ್ನುಡಿ ಮಾಡುತ್ತದೆ.ಪುಸ್ತಕಗಳ ಮುನ್ನುಡಿಯು ಕೃತಿಗೆ ಭೂಷಣ ಎನ್ನುವ ಮಾತುಗಳಿವೆ. ಈ ಪದ್ಧತಿಯನ್ನು ಚಾಚೂ ತಪ್ಪದೆ ಬಹುತೇಕ ಸಾಹಿತಿಗಳು ಪಾಲಿಸಿಕೊಂಡು ಬಂದಿದ್ದಾರೆ. ಮತ್ತೊಂದು ಕಡೆ, ಮುನ್ನುಡಿ ಬೇಕೆ, ಏಕೆ ಎನ್ನುವ ಪ್ರಶ್ನೆಗಳೂ ಸಾರಸ್ವತ ಲೋಕದಲ್ಲಿವೆ.ಕಳೆದ ಎರಡು ದಶಕಗಳಲ್ಲಿ ಅನೇಕ ಹೊಸಬರ ಕೃತಿಗಳಿಗೆ ಮುನ್ನುಡಿಗಳನ್ನು ಪೆರ್ಲ ಅವರು ಬರೆದಿದ್ದಾರೆ.ಹೊಸ ತಲೆಮಾರಿನ ಓದಿಗೊಂದು ಭಾಷ್ಯದಂತಿರುವ ಈ ಪುಸ್ತಕದಲ್ಲಿ 42 ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ.
ಯಕ್ಷಗಾನ, ಸಾಹಿತ್ಯ, ಶಿಕ್ಷಣ, ಧಾರ್ಮಿಕ, ವೈದಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಹೆಸರುಗಳಿಸಿರುವ ಲೇಖಕ ವಸಂತಕುಮಾರ ಪೆರ್ಲ. ಅವರು ಕಾಸರಗೋಡಿನ ಪುಟ್ಟ ಊರಾದ ಪೆರ್ಲದಲ್ಲಿ 1958ರ ಜುಲೈ 2ರಂದು ಜನಿಸಿದರು. ಈ ಪೆರ್ಲ ಭರಿನ ಹೆಸರಿಗೆ ಕೀರ್ತಿ ತಂದವರಲ್ಲಿ ವಸಂತಕುಮಾರ್ ಒಬ್ಬರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಳತ್ಕ್ತಡ್ಕ ಶಾಲೆಯಲ್ಲಿ ಮತ್ತು ಪ್ರೌಢಶಿಕ್ಷಣವನ್ನು ಪೆರ್ಲ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಪೂರೈಸಿದರು. ಪದವಿ, ಉನ್ನತ ಪದವಿಯನ್ನು ಮತ್ತು ರಂಗಭೂಮಿ ವಿಷಯದಲ್ಲಿ ಡಾಕ್ಟರೇಟ್. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆೆ. ಹೈಸ್ಕೂಲ್ ವಿದ್ಯಾಭ್ಯಾಸದ ಕಾಲದಲ್ಲೇ ಕಥೆಗಳನ್ನು ಬರೆಯ ತೊಡಗಿದ ಅವರು ಬೆಂಗಳೂರಿನ ಪ್ರಜಾಪ್ರಭುತ್ವ ವಾರಪತ್ರಿಕೆಯಲ್ಲಿ ಉಪಸಂಪಾದಕ-ವರದಿಗಾರರಾಗಿ ಔದ್ಯೋಗಿಕ ...
READ MORE