‘ನಿರುಕ್ತ’ ಎಲ್. ಸಿ. ಸುಮಿತ್ರಾ ಅವರ ವಿಮರ್ಶಾ ಲೇಖನವಾಗಿದೆ. ಕೃತಿಯಲ್ಲಿ ಸ್ತ್ರೀವಾದಿ ದೃಷ್ಟಿಕೋನದ ಪ್ರಾಧಾನ್ಯತೆ ಕಂಡುಬಂದರೂ ಅದು ಒರಟುಒರಟಾಗಿ ಕಾಣದೆ ಸಾಹಿತ್ಯ ಕೃತಿಗಳ ಮಹತ್ವವನ್ನು ಅರಿಯಲು ಸಹಕರಿಸಿದೆ. ಕುವೆಂಪು ಬಗ್ಗೆ ಇಲ್ಲಿ ಮೂರು ಲೇಖನಗಳಿವೆ. ಒಂದು ಲೇಖನ ಕಾನೂರು ಹೆಗ್ಗಡಿತಿ ಮತ್ತು ವಾಸುದೇವನ್ ನಾಯರ್ ಅವರ 'ಚೌಕಟ್ಟಿನ ಮನೆ' ಕಾದಂಬರಿ ಕುರಿತ ತೌಲನಿಕ ವಿಮರ್ಶೆ. ಇಲ್ಲಿನ ಬರಹಗಳು ಸಾಹಿತ್ಯ ಕೃತಿಗಳ ಪ್ರಾಮುಖ್ಯತೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸುತ್ತವೆಯೇ ಹೊರತು ಅವುಗಳ ಆಳವಾದ ವಿಶ್ಲೇಷಣೆಗೆ ತೊಡಗುವುದಿಲ್ಲ. ಆದರೂ ಸರಳವಾದ ವಿಮರ್ಶೆಯ ಭಾಷೆ ಕೆಲವು ಅಂಶಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಜನಪ್ರಿಯ ಲೇಖಕಿ ಸುಮಿತ್ರ ಎಲ್.ಸಿ ಅವರು ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ. ತಾಯಿ ಹೊನ್ನಮ್ಮ, ತಂದೆ ಎಲ್.ಚಂದ್ರಪ್ಪಗೌಡ. ಸಾಹಿತ್ಯದಲ್ಲಿ ಸ್ನಾತಕೋತ್ತರ ಪಡೆದಿರುವ ಇವರು ಹಾಲಿ ಅಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ(ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ), ಹೂ ಹಸಿರಿನ ಮಾತು ಇವು ಸುಮಿತ್ರ ಅವರ ಪ್ರಮುಖ ಕೃತಿಗಳಾಗಿವೆ. ಇವರಿಗೆ ನೀಲಗಂಗಾದತ್ತಿ ಬಹುಮಾನ, ಶಿವಮೊಗ್ಗ ಕರ್ನಾಟಕ ಸಂಘದಿಂದ ಎಸ್.ವಿ. ಪರಮೇಶ್ವರಭಟ್ಟ ಪ್ರಶಸ್ತಿ ನೀಡಿ ಗೌರಿವಿಸಲಾಗಿದೆ. ...
READ MOREಹೊಸತು- ಸೆಪ್ಟೆಂಬರ್-2005
ಹಲವಾರು ವಿಮರ್ಶಾತ್ಮಕ ಬರಹಗಳನ್ನು ಒಳಗೊಂಡಿರುವ 'ನಿರುಕ್ತ' ಕೃತಿಯಲ್ಲಿ ಸ್ತ್ರೀವಾದಿ ದೃಷ್ಟಿಕೋನದ ಪ್ರಾಧಾನ್ಯತೆ ಕಂಡುಬಂದರೂ ಅದು ಒರಟುಒರಟಾಗಿ ಕಾಣದೆ ಸಾಹಿತ್ಯ ಕೃತಿಗಳ ಮಹತ್ವವನ್ನು ಅರಿಯಲು ಸಹಕರಿಸಿದೆ. ಕುವೆಂಪು ಬಗ್ಗೆ ಇಲ್ಲಿ ಮೂರು ಲೇಖನ ಗಳಿವೆ. ಒಂದು ಲೇಖನ ಕಾನೂರು ಹೆಗ್ಗಡಿತಿ ಮತ್ತು ವಾಸುದೇವನ್ ನಾಯರ್ ಅವರ 'ಚೌಕಟ್ಟಿನ ಮನೆ' ಕಾದಂಬರಿ ಕುರಿತ ತೌಲನಿಕ ವಿಮರ್ಶೆ. ಇಲ್ಲಿನ ಬರಹಗಳು ಸಾಹಿತ್ಯ ಕೃತಿಗಳ ಪ್ರಾಮುಖ್ಯತೆಯನ್ನು ಪ್ರಾಥಮಿಕ ಹಂತದಲ್ಲಿ ಗುರುತಿಸುತ್ತವೆಯೇ ಹೊರತು ಅವುಗಳ ಆಳವಾದ ವಿಶ್ಲೇಷಣೆಗೆ ತೊಡಗುವುದಿಲ್ಲ. ಆದರೂ ಸರಳವಾದ ವಿಮರ್ಶೆಯ ಭಾಷೆ ಕೆಲವು ಅಂಶಗಳನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಇಲ್ಲಿನ ಲೇಖನಗಳಲ್ಲಿ ತೇಜಸ್ವಿಯವರ ಪತ್ನಿ ರಾಜೇಶ್ವರಿಯವರ ಸಂದರ್ಶನವೊಂದು ಇದ್ದು ವಿಭಿನ್ನವಾಗಿ ಗಮನ ಸೆಳೆಯುತ್ತದೆ. ಎಷ್ಟೋ ಜನ 'ಬರಹಗಾರ' ರೆನಿಸಿಕೊಂಡಿರುವವರಿಗಿಂತ ಹೆಚ್ಚಿನ ಸೂಕ್ಷ್ಮ ಗ್ರಹಿಕೆ ಇಲ್ಲಿ ಕಾಣುತ್ತದೆ.