‘ವಸ್ತು’ ಅರವಿಂದ ಚೊಕ್ಕಾಡಿ ಅವರ ಅಧ್ಯಯನ ಗ್ರಂಥವಾಗಿದೆ. ಈ ಕೃತಿಯಲ್ಲಿ ನಾ. ಮೊಗಸಾಲೆ ಅವರ ಕಾದಂಬರಿಗಳ ಅಧ್ಯಯನ ಮಾಡಲಾಗಿದ್ದು, ಇಲ್ಲಿ ಅವರ ಹದಿನಾಲ್ಕು ಕಾದಂಬರಿಗಳ ಕಥಾವಸ್ತುವನ್ನು ಪ್ರತ್ಯೇಕವಾಗಿ ತಳದವರೆಗೂ ಶೋಧಿಸುತ್ತ ವಿಶ್ಲೇಷಣೆ ಮಾಡಲಾಗಿದೆ.
ಅರವಿಂದ ಚೊಕ್ಕಾಡಿ ಅವರು 1975ರ ಡಿಸೆಂಬರ್ 21ರಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಮಾಲೆತ್ತೋಡಿ ಎಂಬಲ್ಲಿ ಜನಿಸಿದರು. ತಂದೆ ಕುಕ್ಕೆಮನೆ ವೆಂಕಟ್ರಮಣಯ್ಯ ಗೋಪಾಲ ಶರ್ಮ. ತಾಯಿ ಪಾರ್ವತಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚಕ್ಕಾಡಿಯಲ್ಲಿ ಮುಗಿಸಿ ಪದವಿ ಪೂರ್ವ ಮತ್ತು ಬಿ.ಎ ಪದವಿಯನ್ನು ಸುಳ್ಯದ ನೆಕರೂ ಮೆಮೋರಿಯಲ್ ಕಾಲೇಜಿನಲ್ಲಿ ಪಡೆದರು. ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಿಂದ ಬಿ. ಇಡ್. ಪದವೀಧರರಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ. ಎ ಪದವಿ ಪಡೆದರು. 2011 ರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ...
READ MOREಹೊಸತು- ಡಿಸೆಂಬರ್ -2003
ಕಾಂತಾವರದಂಥ ಚಿಕ್ಕ ಊರಿನಲ್ಲಿ ಯಶಸ್ವಿ ವೈದ್ಯರಾಗಿರುವಂತೆ ಡಾ|| ನಾ. ಮೊಗಸಾಲೆ ಪ್ರಗತಿಶೀಲ ಧೋರಣೆಯ ಬರಹ ಗಾರರೂ ಸಂಘಟಕರೂ ಹೌದು. ಇಲ್ಲಿ ಅವರ ಹದಿನಾಲ್ಕು ಕಾದಂಬರಿಗಳ ಕಥಾವಸ್ತುವನ್ನು ಪ್ರತ್ಯೇಕವಾಗಿ ತಳದವರೆಗೂ ಶೋಧಿಸುತ್ತ ವಿಶ್ಲೇಷಣೆ ಮಾಡಿರುವವರು ಯುವ ಬರಹಗಾರ ಅರವಿಂದ ಚೊಕ್ಕಾಡಿ, ವೈವಿಧ್ಯತೆಯಿರುವ ಸಮಾಜದ ಚಿತ್ರಣ ನೀಡುವಾಗ ಲೇಖಕ ತನ್ನ ಸೈದ್ಧಾಂತಿಕ ಧೋರಣೆಗಳನ್ನು ಕೃತಿಯ ಮೂಲಕ ಎಷ್ಟರಮಟ್ಟಿಗೆ ಪ್ರತಿಫಲಿಸಲು ಶಕ್ತನಾಗುತ್ತಾನೆಂಬುದು ಒಟ್ಟಾರೆ ಈ ಕೃತಿಗಳ ವಿಶ್ಲೇಷಣೆಯ ಹಿಂದಿರುವ ಕುತೂಹಲ ಎನ್ನಬಹುದು.