ಕನ್ನಡದ ಅತಿ ಮುಖ್ಯ ಲೇಖಕಿ ವೈದೇಹಿ aವರ ಸಮಗ್ರ ವಾಙ್ಮಯವನ್ನು ಆಪ್ತವಾಗಿ ಅವಲೋಕಿಸಿರುವ ಪುಸ್ತಕ. ಈ ಪುಸ್ತಕದಲ್ಲಿ ವೈದೇಹಿ ಅವರ ಸಣ್ಣಕತೆ, ಕಾದಂಬರಿ, ಕಾವ್ಯ, ಜೀವನಕಥೆಗಳ ಸಂಗ್ರಹ ಮತ್ತು ಪ್ರಬಂಧಗಳ ಸ್ವರೂಪ, ಸಿದ್ಧಿ, ಸಾಧನೆ, ವೈಶಿಷ್ಠ್ಯಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ಆಯಾ ಪ್ರಕಾರಗಳಿಗೆ ಸೇರಿದ ಪ್ರಾತಿನಿಧಿಕ ಬಿಡಿ ಕೃತಿಗಳ ಆಳವಾದ ವಿಶ್ಲೇಷಣೆ, ಅವುಗಳ ನಡುವೆ ಹೆಣೆದುಕೊಂಡಿರುವ ಅಂತರ್ ಪಠ್ಯೀಯ ಸಂಬಂಧಗಳ ಶೋಧಗಳನ್ನು ಕೂಡಿ ಹಾಕಲಾಗಿದೆ. ಅವುಗಳನ್ನು ಒಂದು ದರ್ಶನದತ್ತ ಚಲಿಸುವ ಪರಿಯ ಎಚ್ಚರದ ಗ್ರಹಿಕೆಯಿದೆ. ವೈದೇಹಿಯವರ ಕಥನಕಾರಣ ಮತ್ತು ಸ್ವಾರಸ್ಯಗಳನ್ನು ಲವಲವಿಕೆಯಿಂದ ತೆರೆದು ತೋರುವ ಟಿ.ಪಿ.ಅಶೋಕ ಅವರ ಈ ವಿಮರ್ಶಾ ಕೃತಿಯು ಉತ್ತಮ ಗ್ರಂಥಗಳಲ್ಲಿ ಒಂದಾಗಿದೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE