ಹಾಮಾನಾ ಸಾಹಿತ್ಯಾವಲೋಕನ ಸಂಪಾದಕರು ಪ್ರೊ.ಶಿವರಾಮ ಕಾಡನಕುಪ್ಪೆ.
ನವೋದಯ ಆದರ್ಶಗಳಿಂದ ರೂಪಿತವಾದ, ಮಹಾಕವಿ ಕುವೆಂಪು ಅವರ ಸಾನಿದ್ಯದಲ್ಲಿ ವಿಶ್ವಮಾನವ ಸಂದೇಶವನ್ನು ಸ್ವೀಕರಿಸಿದ ಕನ್ನಡದ ಜಾಗೃತ ಪ್ರಜ್ಞೆಯ ಡಾ.ಹಾ.ಮಾ.ನಾಯಕ ಅವರು ಸದಾ ಸ್ಮರಣೀಯರು. ಮೈಸೂರಿನಿಂದ ಹೊರಬಂದು ಕಲ್ಕತ್ತಾ ಮತ್ತು ಅಮೆರಿಕೆಯಲ್ಲಿ ವ್ಯಾಸಂಗ ಮಾಡಿದ ಹಾ.ಮಾ.ನಾಯಕರು ವಿಶಾಲ ಮನೋಧರ್ಮದವರು.
ಬಾಲ್ಯದಿಂದಲೇ ಕನ್ನಡ ಮತ್ತು ಕನ್ನಡ ಸಾಹಿತ್ಯವನ್ನು ತಮ್ಮ ಆರಾಧನೆಯ ದೈವತ್ವವನ್ನಾಗಿ ರೂಪಿಸಿಕೊಂಡ ಅವರು ಭಾಷಾ ವಿಜ್ಞಾನದ ಪ್ರಾಧ್ಯಾಪಕರಾಗಿಯೂ ಕನ್ನಡದ ಏಳ್ಗೆಗಾಗಿ ದುಡಿದವರು. ಹಾಮಾನಾ ಬರೆಯುತ್ತಾರೆ ಎಂದರೆ ಕನ್ನಡವನ್ನು ಕೇಂದ್ರವಾಗಿರಿಸಿಕೊಂಡು ಹಲವಾರು ಪ್ರಚಲಿತ ವಿಷಯಗಳನ್ನು ಕುರಿತು ವಿವೇಚಿಸುತ್ತಾರೆ ಎಂದರ್ಥ. ಅವರು ಬರೆಯಲು ಪ್ರಾರಂಭಿಸಿದಾಗ ಅವರಿನ್ನೂ ಪ್ರೌಢಶಾಲೆಯ ವಿದ್ಯಾರ್ಥಿ. ಜೀವನದ ಅಂತಿಮ ಕ್ಷಣದವರೆಗೂ ಅವಿಶ್ರಾಂತವಾಗಿ ಬರೆದವರು.
ಅಂಕಣ ಸಾಹಿತ್ಯಕ್ಕೆ ಮೆರಗನ್ನೂ ಘನತೆಯನ್ನೂ ತಂದುಕೊಟ್ಟ ಶ್ರೇಯಸ್ಸು ಹಾಮಾನಾ ಅವರಿಗೆ ಸಲ್ಲುತ್ತದೆ. ಹಾಮಾನ ಅವರ ಸಂಪೂರ್ಣ ಸಾಹಿತ್ಯಾವಲೋಕನವೇ ಈ ಕೃತಿ.
ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...
READ MORE