ಡಾ. ಶಿವಕುಮಾರ್ ಆರ್. ಅವರು ವಚನ ಸಾಹಿತ್ಯವನ್ನು ವರ್ತಮಾನದ ವಸ್ತುವಿಷಯಗಳಿಗೆ ಅನುಸಂಧಾನಗೊಳಿಸುವ ಕೆಲಸವನ್ನು ಈ ಕೃತಿಯ ಮೂಲಕ ಮಾಡಿದ್ದಾರೆ. ವಚನಗಳನ್ನು ಹೊಸ ನೆಲೆಯಲ್ಲಿ ಅರ್ಥೈಸುವ ಪ್ರಯತ್ನವನ್ನು ಮಾಡಿದ್ದಾರೆ.
ಡಾ. ಶಿವಕುಮಾರ್ ಆರ್ ಅವರು ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ರತ್ನಪುರಿ ಅಂಚೆಯ ದಾಸನಪುರ ಗ್ರಾಮದಲ್ಲಿ 14/04/1993 ರಲ್ಲಿ ಜನಿಸಿದರು. ಇವರ ತಂದೆ ರಾಜೇಗೌಡ, ತಾಯಿ ಕಾಂತಮ್ಮ. ಕನ್ನಡ ವಿಷಯದಲ್ಲಿ ಎಂ.ಎ ಪದವಿಯನ್ನು ಎರಡು ಚಿನ್ನದ ಪದಕಗಳನ್ನು ಪಡೆದುಕೊಳ್ಳುವ ಮೂಲಕ ತೇರ್ಗಡೆ ಹೊಂದಿದರು. ಮುಂದೆ "ವಚನ ಸಾಹಿತ್ಯ: ವಿವಾಹ ಮತ್ತು ಕುಟುಂಬ ಪರಿಕಲ್ಪನೆ" ಎಂಬ ವಿಷಯದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿಯನ್ನು ಸಹ ಪಡೆದುಕೊಂಡಿದ್ದಾರೆ. "ವಚನ : ವರ್ತಮಾನದ ಅನುಸಂಧಾನ" ಇದು ಇವರ ಚೊಚ್ಚಲ ಕೃತಿಯಾಗಿದೆ. ...
READ MORE