ಕನ್ನಡದಲ್ಲಿ ಅಂಕಣ ಸಾಹಿತ್ಯ

Author : ಸುರೇಂದ್ರಕುಮಾರ ಕೆರಮಗಿ

Pages 48

₹ 10.00




Year of Publication: 2012
Published by: ಪ್ರಸಾರಾಂಗ
Address: ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ-6

Synopsys

ಲೇಖ ಡಾ.ಸುರೇಂದ್ರಕುಮಾರ್ ಕೆರಮಗಿ ಅವರ ‘ಕನ್ನಡದಲ್ಲಿ ಅಂಕಣ ಸಾಹಿತ್ಯ’ ಕೃತಿಯು ಅಂಕಣ ಬರಹಗಳ ವಿಮರ್ಶಾ ಕೃತಿ. ಹೊಸಗನ್ನಡದ ಪ್ರಭಾವಿ ಪ್ರಕಾರಗಳಲ್ಲಿ ಒಂದಾದ ಅಂಕಣ ಬರಹಗಳನ್ನು ಆಧರಿಸಿ ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದ ಕಾಲಘಟ್ಟದಲ್ಲಿ ಪ್ರಸಿದ್ಧ ಪತ್ರಿಕೆಗಳಲ್ಲಿ ಬರೆದ 25 ಜನ ಅಂಕಣಕಾರರ ಅಂಕಣ ಕೃಷಿ ಹಾಗೂ ಅಂಕಣ ಮೌಲ್ಯ ಚಿಂತನೆಯ ಕೃತಿ ಇದು. ಕೃಷ್ಣಶರ್ಮ,ಮಾಸ್ತಿ ವೆಂಕಟೇಶ ಅಯ್ಯಂಗಾರ್, ಟಿಎಸ್ಸಾರ್, ಖಾದ್ರಿ ಶಾಮಣ್ಣ, ಆಚಾರ್ಯ, ಪಾಟೀಲ ಪುಟ್ಟಪ್ಪ, ಎಚ್ಎಸ್ಕೆ, ಹಾ.ಮಾ. ನಾಯಕ ಮೊದಲಾದ ಹಿರಿಯರಿಂದ ಇತ್ತೀಚಿನ ಲೇಖಕರ ಅಂಕಣ ಬರಹಗಳನ್ನು ವಿಶ್ಲೇಷಿಸಲಾಗಿದೆ.

About the Author

ಸುರೇಂದ್ರಕುಮಾರ ಕೆರಮಗಿ

ಡಾ. ಸುರೇಂದ್ರಕುಮಾರ್ ಕೆರಮಗಿ ಅವರು ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನವರು. ಸ್ವಾಯತ್ತ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು. "ಡಾ.ಹಾ.ಮಾ ನಾಯಕ ಅವರ ಅಂಕಣ ಸಾಹಿತ್ಯ ಒಂದು ಅಧ್ಯಯನ" ವಿಷಯವಾಗಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯವು ಇವರಿಗೆ ಪಿಎಚ್ ಡಿ ಪ್ರದಾನ ಮಾಡಿದೆ. ಹಳೆಗನ್ನಡ ಸಾಹಿತ್ಯದಲ್ಲೂ ಇವರಿಗೆ ಆಸಕ್ತಿ. ರಾಷ್ಟ್ರೀಯ,ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕೃತಿಗಳು: ಆಯ್ದ ವೈಚಾರಿಕ ಪ್ರಬಂಧಗಳ ಸಂಗ್ರಹ, ಹಾ.ಮಾ ನಾಯಕ,ಕನ್ನಡದಲ್ಲಿ ಅಂಕಣ ಸಾಹಿತ್ಯ, ಸೃಷ್ಟಿ ಸೌರಭ, ಮಾತು ಮಥಿ ಸಿದಾಗ, ಸಾಹಿತ್ಯ ಸುಧೆ, ಸಾಹಿತ್ಯ ಸಂಜೀವಿನಿ, ಹೈದರಾಬಾದ ಕರ್ನಾಟಕದ ಪ್ರಮುಖ ಕಾದಂಬರಿಕಾರರು, ಮಡಿವಾಳ ...

READ MORE

Related Books