‘ತಿಳಿವ ನೋಟ’ ವಿ. ಅರ್ಪಿತ ಅವರ ಮೊದಲ ವಿಮರ್ಶಾ ಸಂಕಲನವಾಗಿದ್ದು ತಾನು ಸಮರ್ಥ ವಿಮರ್ಶಕಿ ಎಂಬುದನ್ನು ಈ ಸಂಕಲನದ ಮೂಲಕ ನಿರೂಪಿಸಿದ್ದಾರೆ. ಸಾಹಿತ್ಯ ಪರಂಪರೆಯೊಂದಿಗೆ ವಿಮರ್ಶಕಿಯಾಗಿ ಇಲ್ಲಿ ಅನುಸಂಧಾನ ನಡೆಸಿದ್ದಾರೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕನ್ನಡಪರ ಚಿಂತನೆ ಕುರಿತ ಲೇಖನಗಳಿವೆ. ಆಧುನಿಕ ಕಾವ್ಯ ಮತ್ತು ಕಥನ ಸಾಹಿತ್ಯದ ವಿಮರ್ಶಾ ಒಳನೋಟಗಳಿವೆ.
ಯುವ ಬರಹಗಾರ್ತಿ ಅರ್ಪಿತ. ವಿ 1994 ಪೆಬ್ರವರಿ 2ರಂದು ಜನಿಸಿದರು. ಸ್ನಾತಕೋತ್ತರ ಪದವಿಧರೆ. ಆಧುನಿಕ ಕನ್ನಡ ವಿಚಾರ ಸಾಹಿತ್ಯ: ಕನ್ನಡ ಪರ ಚಿಂತನೆಯ ತಾತ್ವಿಕ ನೆಲೆಗಳು ಎಂಬ ವಿಷಯದಡಿ ಪಿಎಚ್.ಡಿ ಮಾಡುತ್ತಿದ್ದಾರೆ. ಕವಿತೆ, ವಿಚಾರ ಸಾಹಿತ್ಯ, ಅನುವಾದ ಅವರ ಆಸಕ್ತಿ ಕ್ಷೇತ್ರ. ‘ತಿಳಿವ ನೋಟ’ ಅವರ ಮೊದಲ ವಿಮರ್ಶಾ ಸಂಕಲನ ಕನ್ನಡ ಪುಸ್ತಕ ಪ್ರಾಧಿಕಾರದ ಧನ ಸಹಾಯಕ್ಕೆ ಆಯ್ಕೆಯಾಗಿದೆ. ...
READ MORE