‘ಕಾದಂಬರಿ ವಸ್ತು ಮತ್ತು ತಂತ್ರ’ ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜು ಅವರ ವಿಮರ್ಶಾ ಲೇಖನ ಸಂಕಲನ. 1966ರಿಂದ 1972ರ ವರೆಗೆ ಆರೇಳುವರ್ಷಗಳಲ್ಲಿ ಹಲವು ಕಾದಂಬರಿಗಳಿಗೆ ಬರೆದ ವಿಮರ್ಶಾ ಲೇಖನಗಳು ಈ ಕೃತಿಯಲ್ಲಿವೆ. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಒಂದೆಡೆ ಸಂಕಲನ ಮಾಡಿದ್ದಾರೆ. ಮೂರು ಭಾಗಗಳಾಗಿ ವಿಮರ್ಶೆಗಳನ್ನು ವಿಮರ್ಶಿಸಲಾಗಿದೆ. ಭಾಗ ಒಂದರಲ್ಲಿ ಕಾದಂಬರಿ ವಸ್ತು ಮತ್ತು ತಂತ್ರ, ಕಾದಂಬರಿಯಲ್ಲಿ ವೈಚಾರಿಕತೆ ಎಂಬ ಲೇಖನಗಳಿವೆ. ಎರಡನೇ ಭಾಗದಲ್ಲಿ ವಿಶ್ವಾಮಿತ್ರನ ಸೃಷ್ಟಿ, ಮರಳಿ ಮಣ್ಣಿಗೆ, ಅಡಿಗರ ಎರಡು ಕಾದಂಬರಿಗಳು, ಮಹಾತ್ಯಾಗ, ವಂಶವೃಕ್ಷ, ಬಿರುಕು ಕುರಿತಾದ ಲೇಖನಗಳಿವೆ, ಮೂರನೇ ಭಾಗದಲ್ಲಿ ಕನ್ನಡ ಕಾದಂಬರಿಯಲ್ಲಿ ನವ್ಯತೆ, ಹೆಚ್ಚಿನ ಓದಿಗೆ ಎಂಬ ಲೇಖನಗಳಿವೆ.
ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಮೂಲತಃ ಧಾರವಾಡ ಜಿಲ್ಲೆಯ ಅಬ್ಬಿಗೇರಿಯವರು. ತಂದೆ ಅಂದಾನಪ್ಪ ಮತ್ತು ತಾಯಿ ನಾಗಮ್ಮ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಸಣ್ಣಕತೆ-ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಇಂಗ್ಲೆಂಡ್, ಬೆಲ್ಸಿಯಂ, ಫ್ರಾನ್ಸ್, ಸರೆಂಡ್, ಇಟಲಿಗಳಲ್ಲಿ ಉಪನ್ಯಾಸ ನೀಡಿರುವ ಅವರು ಇಂಗ್ಲಿಷ್ ಸ್ಟಡೀಸ್ ನಲ್ಲಿ ಡಿಪ್ಲಮೊ ಪಡೆದು ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಭಾಷಾ ವಿಜ್ಞಾನದಲ್ಲಿ ವಿಶೇಷ ಅಧ್ಯಯನ ನಡೆಸಿದರು. ಅವರು ಹೈಸ್ಕೂಲಿನಲ್ಲಿರುವಾಗಲೇ 'ಶಾರದಾಲಹರಿ' ಎಂಬ ನೀಳ್ಗವಿತೆ ಪ್ರಕಟಿಸಿದ್ದರು. ನಾಟಕ ಅಕಾಡೆಮಿಯ ಫೆಲೋಶಿಪ್ ದೊರೆತಿರುವ ...
READ MORE