`ಆಡಾಡ್ತ ಆಕಾಶ’ ಕೃತಿಯು ಗಿರೀಶ್ ಮೂಗ್ತಿಹಳ್ಳಿ ಅವರ ಮಕ್ಕಳ ನಾಟಕ ವಿಮರ್ಶಾ ಸಂಕಲನವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ವಿಚಾರಗಳು ಹೀಗಿವೆ; `ಸಾಹಿತ್ಯ ಒಂದು ವರ್ಗಕ್ಕೆ ಸೀಮಿತವಲ್ಲ. ಅದು ಒಂದು ಸನ್ನಿವೇಶ ಮತ್ತು ಸಂದರ್ಭವನ್ನು ಪ್ರತಿನಿಧಿಸುತ್ತ ಇಡೀ ಸಮಾಜವನ್ನು ಆವರಿಸಿ ಬಿಡುತ್ತದೆ. ಈ ಗುಣ ಸಾಹಿತ್ಯದ ನವ್ಯತೆಯೂ ಹೌದು. ಸ್ವೀಕರಿಸುವವರಲ್ಲಿ ಸ್ವೀಕೃತಿ ಪತ್ರ ಇದ್ದರೆ ಸಾಹಿತ್ಯದ ಕೆಲಸ ಸಾರ್ಥಕ. ಈ ನಿಟ್ಟಿನಲ್ಲಿ ‘ಆಡಾಡ್ತ ಆಕಾಶ’ ತೆರೆದ ಅಭಿವ್ಯಕ್ತಿಯ ಸೂಕ್ಷ್ಮ ವಿಚಾರವಾಗಿದೆ ಎಂಬುದನ್ನು ವಿಶ್ಲೇಷಿಸಿದ್ದಾರೆ.
ಇಲ್ಲಿ ಟೊಳ್ಳುಗಟ್ಟಿ( ಟಿ.ಪಿ. ಕೈಲಾಸಂ), ಮಂದಾರ ಪುಷ್ಪ, ದ್ರೋಣ-ದ್ರುಪದ(ಬಿ. ನಾರಾಯಣ ಸ್ವಾಮಿರಾವ್), 'ಮೋಡಣ್ಣನ ತಮ್ಮ', 'ನನ್ನ ಗೋಪಾಲ'(ಗೋಪಾಲ), ‘ನಾಲ್ಕನೇ ಪಿಶಾಚಿ', 'ಹೊಟ್ಟೆಯ ಹಾಡು, 'ಮದುವೆಗಿಂತ ಮಸಣವಾಸಿ', 'ಸೂರಚಂದ್ರ' ( ಶಿವರಾಮಕಾರಂತರ), 'ಧ್ವಜ ವಂದನೆ’‘ಬೆಳೆಯುವ ಪಯಿರು' (ಜಿ.ಪಿ ರಾಜರತ್ನಂ), ಅಮ್ಮ(ಜೆ. ಸದಾಶಿವಯ್ಯ), 'ಗೇಛೋ ಬಾಬಾ', 'ಶಿಷ್ಯನ ಪರೀಕ್ಷೆ' (ರವೀಂದ್ರನಾಥ ಠಾಕೂರ), 'ಮಕ್ಕಳು ಅಡಿಗೆ ಮನೆಗೆ ಹೊಕ್ಕರೆ (ದ .ರಾ. ಬೇಂದ್ರೆ), 'ತಾಯಕರೆ( ಪರಶುರಾಮ ಹ ಚಿತ್ರಗಾರ), ಮುಂದೇನು? (ನಾ.ಡಿಸೋಜ ), 'ನೀಲಿ ಕುದುರೆ’ ( ಬಿ.ವಿ.ಕಾರಂತ ಮತ್ತು ಪಿ.ಎಸ್.ರಾಮಪ್ಪ), ಕಿಟ್ಟಿಕಥೆ', ಪುಷ್ಪರಾಣಿ,( ಚಂದ್ರಶೇಖರ ಕಂಬಾರ), 'ನಾಗನ ಕಥೆ', 'ಒಂದೂರಲ್ಲಿ ಒಬ್ಬ ರಾಜು( ಹೊರೆಯಾಲ ದೊರೆಸ್ವಾಮಿ), 'ಕುಮಾರಗೌತಮ', 'ಕೈಕೋಲು( ಎಂ.ವಿ.ಸೀರಾರಾಮಯ್ಯ), ಇದು ಅಭ್ಯಾಸದ ಕೋಣೆ(ವರದರಾಜ ಹುಯಿಲುಗೋಳ), ಒಂದಾನೊಂದು ಕಾಡಿನಲ್ಲಿ(ಎ.ಎನ್ ಪ್ರಸನ್ನ), 'ಇಸ್ಪೀಟ್ ರಾಜ್ಯ(ಎನ್.ಎಸ್.ಲಕ್ಷ್ಮೀನಾರಾಯಣ ಭಟ್), ಕೆ. ವಿ ಸುಬ್ಬಣ್ಣ ಅವರ ಬೆಟ್ಟಕ್ಕೆ ಚಳಿಯಾದರೆ, ಕಣ್ಣು ತೆರೆಸಿದ ಮಕ್ಕಳು ( ಮಹಾಂತಪ್ರಿಯ ಬಿ.ಶೇಖರಪ್ಪ ಹುಲಿಗೇರಿ ), ಮಾರ್ಜಾಲ ಮಹಾಶಯ( ಬಾ. ಕೃ), ನಚಿಕೇತ( ಪಳಕಳ ಸೀತಾರಾಮಭಟ್ಟರ), ಪರೋಪಕಾರದ ಗುಣವುಳ್ಳ 'ಕಿಟ್ಟಾಯಣ', ಚಂದ್ರಹಾಸ( ನಾಗಚಂದ್ರ), 'ನಕ್ಕಳಾ ರಾಜಕುಮಾರಿ( ಅಬ್ದುಲ್‌ರೆಹಮಾನ್ ಪಾಷ), ಸ್ವರ್ಗದ ಹಕ್ಕು (ಕುದ್ಕಾಡಿ ವಿರ್ಶವನಾಥ ರೈ), ನ್ಯಾಯ ನಿರ್ಣಯ ( ಸಿದ್ದಯ್ಯ ಪುರಾಣಿಕ), ಹೊಯ್ಸಳ ವೈಭವ (ಲೀಲಾ ಬ್ಯಾಪಿ, ಸುರತ್ಕಲ್), ಹನ್ನೊಂದು ಹಂಸಗಳು(ಸುಮತೀಂದ್ರ ನಾಡಿಗ), ಸತ್ಯಂಪದ (ಎಸ್.ಎಂ.ಹಿರೇಮಠ), 'ಪೌರ ಪ್ರಜ್ಞೆ( ಎಸ್.ವಿ. ಶ್ರೀನಿವಾಸರಾವ್), ಸಿಂದಬಾದ್ (ಎನ್.ಎಸ್. ವೆಂಕಟರಾಮ್), ಒಂದ ಏಟಿಗೆ ಯೋಳು' ಅರ್ಥಾತ್ 'ಗಿಡ್ಡುಟೇಲರನ ಸಾಹಸಗಳು (ಬಿ.ಟಿ ದೇಸಾಯಿ), ಪ್ರೀತಿಯ ಕಾಳು(ಆರ್.ಭಂಡಾರಿ), ಗೊಂಬೆಗಳ ಗುಟ್ಟು, ಕೊಟ್ಟ ಭಾಷೆಗೆ ತಪ್ಪಲಾರೆ(ವೈ. ಎಸ್.ಶಿರಹಟ್ಟಿಮಠ), ಹಕೀಂ ನಂಜುಂಡ( ಚಂದ್ರಶೇಖರಯ್ಯ), 'ಕೋಟುಗುಮ್ಮ( ವೈದೇಹಿ), ನಾಯಿ ತಿಪ್ಪ(ಕೋ.ರಾಮಯ್ಯ), ಮಳೆಹುಚ್ಚ, ನವಿಲೂರಿನಕತೆ( ಕೃಷ್ಣಮೂರ್ತಿ ಬಿಳಿಗೆರೆ), ನಿಸರ್ಗವತಿ ( ಶಿವಕುಮಾರ ಕುರ್ಕಿ), ಮಕ್ಕಳ ನಾಟಕಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ಚಿಂತನೆ( ಸಫ್ದರ್ ಹಾಸ್ಮಿ), ಅತೀವಚೇತನದ ಸಾರ್ಥಕರೂಪಕ ‘ಅಳಿಲು ರಾಮಾಯಣ’, ಪರಿಸರ ಪ್ರಜ್ಞೆಯನ್ನು ಸಾರುವ ‘ಹೂವಿ’, ಕಲಿಕಾ ಮಾಧ್ಯಮವಾಗಿ ಮಕ್ಕಳ ರಂಗಭೂಮಿಯನ್ನು ಒಳಗೊಂಡಿದೆ.
©2024 Book Brahma Private Limited.