ಬೆಳಗಾವಿ ಜಿಲ್ಲೆಯ ಗುಳೇದಗುಟ್ಟಿದಲ್ಲಿ ಜನಿಸಿದ ಸುರೇಂದ್ರನಾಥ ಅವರು ಗುಳೇದಗುಡ್ಡ, ಧಾರವಾಡ, ಸಾಂಗ್ಲಿಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಅವರು ನಂತರ ಧಾರವಾಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ಆಮೇಲೆ ಗುಜರಾತಿನ ವಲ್ಲಭ ವಿದ್ಯಾನಗರದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಕನ್ನಡದ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರಾದ ಮಿಣಜಗಿಯವರು ವಿ.ಕೃ. ಗೋಕಾಕರ ಆಪ್ತಶಿಷ್ಯರಲ್ಲೊಬ್ಬರು. ‘ಸೃಜನಕ್ರಿಯೆ ಮತ್ತು ಸಂವೇದನೆ’, ಎಲಿಯಟ್: ಕವಿ ಹಾಗೂ ನಾಟಕಕಾರ, ಪ್ರತೀಯಮಾನ, ವಿನಾಯಕ ಕೃಷ್ಣ ಗೋಕಾಕ್, ಟಿ.ಎಸ್. ಎಲಿಯಟ್ ವಿಮರ್ಶೆಯ ವಿಚಾರಗಳು ಇವರ ಪ್ರಮುಖ ಕೃತಿಗಳು. ಎಲಿಯಟ್: ಕವಿ ಹಾಗೂ ...
READ MORE