ಅನಂತಮೂರ್ತಿ ಅವರ ಲೇಖನಗಳ ಸಂಗ್ರಹ. 1980ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿದ್ದ ಈ ಸಂಕಲನದಲ್ಲಿ ಒಟ್ಟು 25 ಬರೆಹಗಳಿವೆ. ಗೋಪಾಲಕೃಷ್ಣ ಅಡಿಗ, ರಾಜೀವ ತಾರಾನಾಥ, ಶಿವರಾಮ ಕಾರಂತರ ಸಂದರ್ಶನಗಳಿವೆ. ಸಂಸ್ಕೃತಿ ಮತ್ತು ಅಡಿಗ, ಕ್ರಾಂತಿ ಕಾವ್ಯ ಗಿನ್ಸ್‌ಬರ್‍ಗ್ ಎಂಬ ಲೇಖನಗಳ ಜೊತೆಯಲ್ಲಿ ಕತೆಗಾರ ಕೆ. ಸದಾಶಿವ ಅವರನ್ನು ಕುರಿತ ’ನನ್ನ ಗೆಳೆಯ ಸದಾಶಿವ’, ಪಾವೆಂ ಆಚಾರ್ಯ ಅವರನ್ನು ’ನಮಗೆ ಹಿರಿಯ ಗೆಳೆಯ ಪಾವೆಂ’ ಎಂಬ ಆಪ್ತ ಬರಹಗಳಿವೆ.
’ಸಂಸ್ಕಾರ -ಸಿನಿಮಾ ಕುರಿತು’, ಘಟಶ್ರಾದ್ಧ ಸಿನಿಮಾ ನನ್ನ ದೃಷ್ಟಿಯಲ್ಲಿ, ಕೆ. ಸದಾಶಿವರ ಅಪರಿಚತರು, ಶ್ರೀಕೃಷ್ಣ ಆಲನಹಳ್ಳಿಯವರ ’ತಪ್ತ’, ಮಾಸ್ತಿಯವರ ಕತೆಗಳಲ್ಲಿ ಸಂಸ್ಕೃತಿ ಮತ್ತು ಪ್ರವೃತ್ತಿ ಎಂಬ ಟಿಪ್ಪಣಿಗಳಿವೆ.
ಸಾಮಾಜಿಕ ಕ್ರಾಂತಿ ಮತ್ತು ಕನ್ನಡ ಸಾಹಿತ್ಯ, ಸಾಹಿತ್ಯದಲ್ಲಿ ಅಂತರ್ಮುಖತೆ ಮತ್ತು ಅದರ ವೈರಿಗಳು, ಸಾಹಿತ್ಯಕ ಟಿಪ್ಪಣಿಗಳು, ಕಾದಂಬರಿ ಮತ್ತು ಹೊಸ ನೈತಿಕ ಪ್ರಜ್ಞೆ, ಕನ್ನಡ ಸಾಹಿತ್ಯ ನಡೆದು ಬಂದ ದಾರಿ ಎಂಬ ಸಾಹಿತ್ಯದ ಬಗ್ಗೆ ವಿಭಿನ್ನ ಒಳನೋಟಗಳಿರುವ ಲೇಖನಗಳಿವೆ.
ಜಾತಿವಿನಾಶ ಮತ್ತು ಹಾವನೂರು ವರದಿ, ಒಕ್ಕೂಟದ ಮರುಹುಟ್ಟು, ಬೂಸಾ ಪ್ರಕರಣ, ದಲಿತರಲ್ಲಿ ಅರಿವಿನ ಸ್ಫೋಟ, ಮಾಧ್ಯಮ ಮತ್ತು ಸ್ವಾತಂತ್ರ, ತುರ್ತು ಪರಿಸ್ಥಿತಿ-ಕಾಂಗ್ರೆಸ್ ಸೋಲು ಜನತಾ ಭವಿಷ್ಯ, ಇಂದಿನ ರಾಜಕೀಯ ಎಂಬ ಸಾಮಾಜಿಕ-ರಾಜಕೀಯ ಸಂಗತಿಗಳನ್ನು ಕುರಿತ ಬರಹಗಳು ಗಮನ ಸೆಳೆಯುತ್ತವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE