ವಿವರ್ಶಕ , ಕಾದಂಬರಿಗಾರ , ಕವಿ ಹಾಗು ಪ್ರಬಂಧಕರಾಗಿ ಗುರುತಿಸಿಕೊಂಡ ಶಿವರಾಮ ಕಾಡನಕುಪ್ಪೆ ಯವರು ಬರೆದ ಸಾಮಾಜಿಕ ನೆಲೆ ಎಂಬ ಕೃತಿಯೂ ಪಂಪನಿಂದ ಕುವೆಂಪು ಮತ್ತು ಸಮೀಚೀನ ಲೇಖಕರವರೆಗೆ ವೈಚಾರಿಕತೆಯನ್ನು ಹೊಂದಿದೆ. ಕೆಲವು ಲೇಖಕರು ಸಾಹಿತ್ಯ ಸಂವೇದನೆ ಮತ್ತು ಸಾಮಾಜಿಕ ಸಂವೇದನೆ ಇವೆರಡೂ ಬೇರೆ ಬೇರೆ ಎಂದು ಭಾವಿಸದ ಕೆಲವು ಲೇಖಕರನ್ನು ವಿಮರ್ಶ ಮಾಡುವಂತೆ ಈ ಲೇಖನ ಕೃತಿಯೂ ಮೂಡಿ ಬಂದಿದೆ.
ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...
READ MORE