ಹಿರಿಯ ವಿಮರ್ಶಕ ಡಾ. ಜಿ.ಎಚ್. ನಾಯಕ ಅವರ ವಿಮರ್ಶೆ ಬರಹಗಳ ಐದು ಸಂಪುಟಗಳಿರುವ ಕೃತಿ-ಮೌಲ್ಯ ಮಾರ್ಗ. ಕನ್ನಡ ಸಾಹಿತ್ಯ ಕೃತಿಗಳನ್ನು ವಿಮರ್ಶೆಗೆ ಒಳಡಿಸಿರುವ ಲೇಖಕರು, ಈ ಎಲ್ಲ ಬರಹಗಳನ್ನು ಸರಣಿ ರೂಪದಲ್ಲಿ ಐದು ಸಂಪುಟಗಳಾಗಿ ಪ್ರಕಟಿಸಿದ್ದಾರೆ. ಪ್ರತಿ ಸಂಪುಟಗಳು ಕೃತಿ ವಿಮರ್ಶೆಯ ಆಳ-ವಿಸ್ತಾರಗಳ ಅಧ್ಯಯನಕ್ಕೆ ಸೂಕ್ತ ಸಾಮಗ್ರಿ ಪೂರೈಸುತ್ತದೆ.
’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...
READ MORE