ಅಡಿಗ ನೆನಪು ಅಡಿಗಡಿಗೆ

Author : ಬಿ.ವಿ. ಕೆದಿಲಾಯ

Pages 224

₹ 195.00




Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಲೇಖಕ ಬಿ.ವಿ ಕೆದಿಲಾಯರು ಕವಿ ಗೋಪಾಲಕೃಷ್ಣ ಅಡಿಗರನ್ನು ಕುರಿತು ಹೊರತಂದಿರುವ ಪುಸ್ತಕ ’ಅಡಿಗ ನೆನಪು ಅಡಿಗಡಿಗೆ’.

ಎಲ್ಲ ಕವಿಗಳಿಗಿಂತ ಭಿನ್ನವಾಗಿ, ಹೊಸದಾಗಿ,ಬರೆದ ಪ್ರವರ್ತಕ ಕವಿ ಅಡಿಗರು. ಇವರ ಜನ್ಮ ಶತಾಬ್ದಿಯ  ಸಂದರ್ಭದಲ್ಲಿ ಪ್ರಕಟಗೊಂಡಿರುವ ಕೃತಿ ಎಂದು ಹೇಳಬಹುದು. ಅಡಿಗರ ಕವನಗಳಾದ ಮೋಹನ ಮುರಲಿ, ಬತ್ತಲಾರದ ಗಂಗೆ, ಯಶೋರೂಪಿ ಮಾಸ್ತಿಯವರಿಗೆ ನಮನ, ಚಿಂತಾಮಣೆಯಲ್ಲಿ ಕಂಡ ಮುಖ, ಅರ್ಥವಾಗುವ ಹಾಗೆ ಬರೆಯಬೇಕು ಮೊದಲಾದವುಗಳ ವ್ಯಾಖ್ಯಾನ ನೀಡಲಾಗಿದೆ.

ಅಡಿಗರ ಬದುಕು ಮತ್ತು ಬರಹ : ಸ್ಥೂಲ ಪರಿಚಯ, ಕಾವ್ಯದಲ್ಲಿ ನವ್ಯತೆಯ ನೆಲೆಗಳು, ಅಡಿಗರ ಕಾವ್ಯದ ಸ್ವರೂಪ -ವೈಶಿಷ್ಟ್ಯ, ಅಡಿಗರ ಕಾವ್ಯಭಾಷೆ ಮತ್ತು ತಂತ್ರ, ಇಪ್ಪತ್ತೈದು ಕವನಗಳ ಪಕ್ಷಿನೋಟ, ಅಡಿಗರ ಜೀವನದ ಮುಖ್ಯ ವರ್ಷಗಳು, ಅಡಿಗರಿಗೆ ಸಂದ ಪ್ರಶಸ್ತಿ – ಗೌರವಗಳು, ಅಡಿಗರ ಕಾವ್ಯ ಕುರಿತ ವಿಮರ್ಶಾ ಗ್ರಂಥಗಳು, ಅಡಿಗರ ಸಾಹಿತ್ಯ ಬಗೆಗಿನ ಕೆಲವು ಬರಹಗಳು ಮುಂತಾದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ.

About the Author

ಬಿ.ವಿ. ಕೆದಿಲಾಯ

ಅಡಿಗರ ಕವಿತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಚಲನಶೀಲವಾಗಿಟ್ಟುಕೊಂಡಿರುವ ಧೀಮಂತರು ಕೆದಿಲಾಯರವರು. ಉಡುಪಿ ತಾಲೂಕಿನ ಬಾಳೆಕುದ್ರು ಗ್ರಾಮದಲ್ಲಿ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ 1937ರಲ್ಲಿ ಜನಿಸಿದ ಕೆದಿಲಾಯ ಇವರು ವಿದ್ಯಾರ್ಥಿದೆಸೆಯಿಂದಲೇ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯಗಳ ಅಧ್ಯಯನ, ಪತ್ರಿಕೆಗೆ ಬರೆಯುವ ಹವ್ಯಾಸ (ಎಂ.ಜಿ.ಎಂ ಕಾಲೇಜು ಮತ್ತು ಕರ್ನಾಟಕ ವಿ.ವಿ ಗಳಲ್ಲಿ ಶಿಕ್ಷಣ) ರೂಢಿಸಿಕೊಂಡರು.  ಭಾರತೀಯ ಜೀವವಿಮಾ ನಿಗಮ ದಲ್ಲಿ ಉದ್ಯೋಗಿಯಾಗಿ, ಹಿರಿಯ ಅಧಿಕಾರಿಯಾಗಿ, ಸ್ಟಾಫ್ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ದುಡಿದು 1995ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ, ಕನ್ನಡದಲ್ಲಿ ಲೇಖನ ವ್ಯವಸಾಯ ಮಾಡಿ 7 ಸ್ವತಂತ್ರ ...

READ MORE

Related Books