’ಸಾಹಿತ್ಯ ವಿಮರ್ಶೆ: ಆಧುನಿಕ ವಿಮರ್ಶಾ ಪ್ರಸ್ಥಾನಗಳು ' ಕೃತಿಯು ಡಾ. ಸಿ.ಎನ್. ರಾಮಚಂದ್ರನ್ ಅವರ ವಿಮರ್ಶಾ ಲೇಖನಗಳಾಗಿವೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಜಿ. ಎಂ. ಹೆಗಡೆ ಅವರು, ‘ಶ್ರೇಷ್ಟ ವಿಮರ್ಶೆಯ ಪರಂಪರೆ ಇರುವ ಕನ್ನಡದಲ್ಲಿ, ವಿಮರ್ಶೆಯ ತತ್ವ ಮತ್ತು ಸಿದ್ದಾಂತಗಳಿಗೆ ಸಂಬಂಧಿಸಿದ ಗ್ರಂಥಗಳು ವಿರಳವೆಂದೇ ಹೇಳಬೇಕು. ಕನ್ನಡ ವಿಮರ್ಶೆಯ ಪ್ರಪಂಚದಲ್ಲಿ ಸಾಕಷ್ಟು ಕೃಷಿ ಮಾಡಿರುವ ಸಿ.ಎನ್. ರಾಮಚಂದ್ರನ್ ಬರೆದೊರುವ ವಿಮರ್ಶೆಯ ತತ್ವ ಮತ್ತು ಆಧುನಿಕ ವಿಮರ್ಶಾ ಪ್ರಸ್ಥಾನಗಳಿಗೆ ಸಂಬಂಧಿಸಿದ ಈ ಗ್ರಂಥವು ತುಂಬಾ ಪ್ರಸ್ತುತವಾಗಿದೆ. ಆಧುನಿಕ ವಿಮರ್ಶಾ ಪ್ರಸ್ಥಾನಕ್ಕೆ ಸಂಬಂಧಿಸಿದ ಈ ಗ್ರಂಥದ ಎರಡನೆಯ ಭಾಗ ತುಂಬಾ ಮಹತ್ವಪೂರ್ಣವಾದುದು. ಕರ್ತೃ ಕೇಂದ್ರಿತ ವಿಮರ್ಶೆ, ಮನೋವೈಜ್ಞಾನಿಕ ವಿಮರ್ಶೆ, ಸಮಾಜ ಕೇಂದ್ರಿತ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಮಾರ್ಕ್ಸ್‌ವಾದಿ ವಿಮರ್ಶೆ ಹಾಗೂ ಇತ್ತೀಚೆಗೆ ಪ್ರಚಲಿತವಿರುವ ಸ್ತ್ರೀವಾದಿ ವಿಮರ್ಶೆಯ ಸ್ವರೂಪಗಳನ್ನು ಲೇಖಕರು ವಿವರವಾಗಿ ಚರ್ಚಿಸಿದ್ದಾರೆ. ಪ್ರತಿಯೊಂದು ವಿಮರ್ಶಾ ಮಾರ್ಗದಲ್ಲಿಯೂ ಇರುವ ದೋಷಗಳ ವಿವೇಚನೆ ಇಲ್ಲಿ ಮುಖ್ಯವಾದುದು.ಸಾಹಿತ್ಯ ವಿಮರ್ಶೆಯ ತತ್ವ-ಸ್ವರೂಪಗಳನ್ನು ಅರಿಯುವವರಿಗೆ ವಿವಿಧ ಪ್ರಸ್ಥಾನಗಳ ಪರಿಜ್ಞಾನವನ್ನು ಒದಗಿಸುವ ಈ ಗ್ರಂಥ ತುಂಬಾ ಉಪಯುಕ್ತವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ..
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE