ಲೇಖಕ ಡಾ. ರಾಮಲಿಂಗಪ್ಪ ಟಿ. ಬೇಗೂರು ಅವರು ಬರೆದ ಲೇಖನಗಳ ಕೃತಿ-ನುಡಿಯಾಟ. ಅಲ್ಲಮವ ಕುರಿತು ಆಧುನಿಕಪೂರ್ವ ಅನುಸಂಧಾನಗಳು, ಪ್ರಕಾರ ಕೇಂದ್ರಿತ ವಿಮರ್ಶೆ-ಸಮಸ್ಯೆ ಹಾಗೂ ಸವಾಲುಗಳು, ಹೊಸಗನ್ನಡ ಮಹಿಳಾ ಕಾವ್ಯ: ಪ್ರತಿರೋಧದ ನೆಲೆಗಳು, ಕಿರಂ ಅವರ ವಿಮರ್ಶೆಯ ಉಪಕ್ರಮ, ಕೇಶವಾಂಕಿತ ರಚನೆಗಳು, ತತ್ವ ರಾಜಕಾರಣ, ಸರ್ವಜ್ಞಾಂಕಿತ ತ್ರಿಪದಿಗಳು ಒಬ್ಬನ ರಚನೆಗಳಲ್ಲ ಇತ್ಯಾದಿ ಬರಹಗಳನ್ನು ಒಳಗೊಂಡ ಕೃತಿ ಇದು.
ವಿಮರ್ಶಕ-ಲೇಖಕ ರಾಮಲಿಂಗಪ್ಪ ಟಿ. ಬೇಗೂರು ಅವರು ಮೂಲತಃ ನೆಲಮಂಗಲ ತಾಲ್ಲೂಕಿನ ತೆಪ್ಪದ ಬೇಗೂರು ಗ್ರಾಮದವರು. 1968ರ ಡಿಸೆಂಬರ್ 29ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಆರು ಚಿನ್ನದ ಪದಕಗಳೊಂದಿಗೆ ಪ್ರಥಮ ರಾಂಕ್‌ನಲ್ಲಿ ಕನ್ನಡ ಎಂ.ಎ. ಪದವಿ. ಬೆಂಗಳೂರು, ಚಳ್ಳಕೆರೆ, ಕುಕನೂರು, ಕೋಲಾರ, ಚಿಂತಾಮಣಿಗಳಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಕೆಂಗೇರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಕಾವ್ಯ, ವಿಚಾರಸಾಹಿತ್ಯ, ಸಂಶೋಧನೆ, ವಿಮರ್ಶೆಗಳಲ್ಲಿ ಪರಿಶ್ರಮ ಇರುವ ಇವರಿಗೆ ಜಿ.ಎಸ್.ಎಸ್. ಕಾವ್ಯಪ್ರಶಸ್ತಿ ಲಭಿಸಿದೆ. ’ಮಾಯಾಪಾತಾಳ’,’ಸಂಕರಬಂಡಿ’, ಮಾರ್ಗಾಂತರ, ಪರಕಾಯ, ಎಡ್ವರ್ಡ್ ಸೈದ್, ಅಲ್ಲಮಪ್ರಭು : ಆಧುನಿಕ ಪೂರ್ವ ಅನುಸಂಧಾನಗಳು ಮೊದಲಾದವು ಪ್ರಕಟಿತ ...
READ MORE