ಕಿರುವೆರಳ ಸಟೆ

Author : ಶ್ರೀಧರ ಹೆಗಡೆ ಭದ್ರನ್‍

Pages 96

₹ 75.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಹಳಗನ್ನಡ ಹಾಗೂ ನಡುಗನ್ನಡ ಕಾವ್ಯಗಳು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳ ಅಡಗುದಾಣಗಳು, ಅವುಗಳ ವ್ಯಾಪ್ತಿ, ವೈವಿಧ್ಯದ ಕಡಲಿನಲ್ಲಿ ತೇಲುತ್ತಾ ಮುಳುಗುತ್ತಾ ಸಾಗುವ ಯಾನ ರೋಮಾಂಚನಕಾರಿ. ಮಧ್ಯಕಾಲೀನ ಕನ್ನಡ ಕಾವ್ಯ ಕೃತಿಗಳಲ್ಲಿ ರತ್ನಾಕರ ವರ್ಣಿಯ ಭರತೇಶ ವೈಭವಕ್ಕೆ ಅನನ್ಯವಾದ ಸ್ಥಾನವಿದೆ. ಅದರ ದೇಸೀ ಸ್ವರೂಪ ಹಾಗೂ ಕಾವೋನ್ಮಾದಗಳು ಆಸಕ್ತರನ್ನು ಸಹಜವಾಗಿಯೇ ಸೆಳೆಯುತ್ತವೆ.

ಅದರ ಆಕರ್ಷಣೆಗೆ ಸಿಲುಕಿ ಹಲವಾರು ಬಾರಿ ಕಾವ್ಯದ ಅನುಸಂಧಾನ ನಡೆಸಿದ್ದ ಶ್ರೀಧರ್‍ ಅವರು ಆ ಕಾವ್ಯದ ಒಂದು ಭಾಗವನ್ನು ಆಯ್ದು ಕೊಟ್ಟಿದ್ದಾರೆ.

'ಕಿರುವೆರಳ ಸಟೆ' ಪ್ರಸ್ತುತ ಕೃತಿ ರತ್ನಾಕರವರ್ಣಿಯ ಭರತೇಶ ವೈಭವ ಕಾವ್ಯದ ಒಂದು ಸಂಧಿಯ ಜನಪ್ರಿಯ ಸಂಪಾದನೆ. ಪ್ರಸ್ತುತ ಈ ಭಾಗ ತನ್ನ ನಾಟಕೀಯ ಗುಣದಿಂದಾಗಿ ಕಾವ್ಯದ ಚೌಕಟ್ಟಿನಲ್ಲಿಯೇ ವಿಶಿಷ್ಟವಾದುದಾಗಿದೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಓದಿರುವ ಕಾವ್ಯ ಭಾಗವೇ ಇದಾಗಿದ್ದರೂ ಸಾಹಿತ್ಯಕ ಕಾರಣಕ್ಕಾಗಿ ಸಾಮಾನ್ಯರೂ ಓದಿ ಆಸ್ವಾದಿಸಬಲ್ಲ ಗುಣವನ್ನು ಪಡೆದುಕೊಂಡಿದೆ. ಇಂತಹ ಅನುಕೂಲ ಒದಗಲಿ ಎಂಬ ಉದ್ದೇಶದಿಂದ ಸರಳ ಗದ್ಯದ ಅನುವಾದ, ಪೀಠಿಕೆ, ಸೂಕ್ತ ಟಿಪ್ಪಣಿ ಮುಂತಾದ ಶಾಸ್ತ್ರ ಶುದ್ಧ ಸಂಪಾದನೆಯ ನೆಲೆಯಲ್ಲಿ ಈ ಕೃತಿಯನ್ನು ಸಿದ್ದಪಡಿಸಲಾಗಿದೆ.

ರತ್ನಾಕರ ವರ್ಣಿಯ ಭರತೇಶ ವೈಭವದ ಆಯ್ದ ಭಾಗವೇ ಕಿರುವೆರಳ ಸೆಟೆ. ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ಜನಿಸಿದ್ದ ರತ್ನಾಕರ ವರ್ಣಿ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರರು ‘ಕನ್ನಡದ ಮಕ್ಕಳ ಭಾವದ ಹಸಿವನ್ನು ತೀರಿಸಬಲ್ಲ ಮಹಾಕವಿ’ ಎಂದು ಹಾಡಿ ಹೊಗಳಿದ್ದಾರೆ. ಇಂತಹ ಮಹಾನ್‍ ಕವಿಯ ಅತ್ಯುನ್ನತ ಕೃತಿ ಭರತೇಶ ವೈಭವ. ಇದೊಂದು ಅಪರೂಪದ ಕೃತಿ. ಸುಲಭವಾಗಿ ಎಲ್ಲರಿಂದಲೂ ಬರೆಯಲಾಗದಂತಹ ದೇಸಿ ಶೈಲಿಯ ಕಾವ್ಯದ ಪರಿಚಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಮಾಡಿಕೊಟ್ಟಂತಹ ಕವಿ ರತ್ನಾಕರ ವರ್ಣಿ. ಇಂತಹ ಮಹಾನ್‍ ಕಾವ್ಯವು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಮತ್ತು ಎಲ್ಲಾ ವರ್ಗದ ಜನರು ಕೂಡಾ ಸುಲಭವಾಗಿ ಜೀರ್ಣಿಸಿಕೊಳ್ಳುವ ರೀತಿಯಲ್ಲಿ ನಿರೂಪಿಸಿದ್ದಾರೆ, ಈ ಪುಸ್ತಕದ ಲೇಖಕರಾದ ಶ್ರೀಧರ್‍ ಹೆಗಡೆ ಭದ್ರನ್. ಸಾಮಾನ್ಯವಾಗಿ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದ ‘ಕಿರುವೆರಳ ಸೆಟೆ’ ಕಾವ್ಯ ಭಾಗವನ್ನು ಸಾಮಾನ್ಯ ಜನರು ಕೂಡ ಕಾವ್ಯ ಮತ್ತು ನಾಟಕೀಯ ಭಾವಗಳಿಂದ ಓದುವ ರೀತಿಯಲ್ಲಿ ಮತ್ತು ಅರ್ಥೈಸಿಕೊಳ್ಳುವ ಈ ಪುಸ್ತಕ ಮೂಡಿ ಬಂದಿದ್ದು ವಿಶೇಷ.

About the Author

ಶ್ರೀಧರ ಹೆಗಡೆ ಭದ್ರನ್‍
(01 November 1977)

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಮೂರೂರಿನಲ್ಲಿ ಜನನ. ಮೂರೂರು. ಕುಮಟಾ, ಧಾರವಾಡಗಳಲ್ಲಿ ವಿದ್ಯಾಭ್ಯಾಸ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಥಮ ರಾಂಕ್‌ನಲ್ಲಿ ಬಂಗಾರದ ಪದಕಗಳೊಂದಿಗೆ ಕನ್ನಡ ಎಂ.ಎ., ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ಪ್ರಾಚ್ಯಲೇಖನ ಅಧ್ಯಯನ, ಬಸವ ಅಧ್ಯಯನ, ಟ್ರಾನ್ಸ್‌ಲೇಷನ್, ಜೈನಶಾಸ್ತ್ರಗಳಲ್ಲಿ ಸ್ನಾತಕೋತ್ತರ ಡಿಪ್ಲೊಮಾ. ಆಧುನಿಕ ಕನ್ನಡ ಮಾಹಾಕಾವ್ಯಗಳು-ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಹೊನ್ನಾವರದ ಎಸ್.ಡಿ.ಎಂ. ಪದವಿ ಕಾಲೇಜು, ಧಾರವಾಡದ ಜೆ.ಎಸ್.ಎಸ್.ಶಿಕ್ಷಣ ಸಂಸ್ಥೆಗಳಲ್ಲಿ, ಕರ್ನಾಟಕ ವಿಶ್ವವಿದ್ಯಾಲಯದ ಜೈನಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಕನಕ ಅಧ್ಯಯನ ಪೀಠಗಳಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯಲ್ಲಿ ಹಂಗಾಮಿ ವಾರ್ತಾವಾಚಕ, ಪ್ರಸ್ತುತ ಧಾರವಾಡ ತಾಲೂಕಿನ ನಿಗದಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ...

READ MORE

Related Books