ನೈಜ ವಿಮರ್ಶಾ ನೋಟದ ಅನುಭಾವ ‘ಬಯಲ ಕನ್ನಡಿ’. ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯ ವಿಮರ್ಶೆ ಮೂರು ಪ್ರಕಾರವಾದದ್ದು ಎನ್ನುತ್ತಾರೆ ಲೇಖಕರು. ಒಂದು ಸಂಶೋಧನಾತ್ಮಕ, ಎರಡು ವರ್ಣಾತ್ಮಕ, ಮೂರು ದರ್ಶನಾತ್ಮಕ. ಈ ಪ್ರಕಾರದಲ್ಲಿ ವಿಂಗಡಿಸಿಕೊಂಡು ಗಮನಿಸಿದಾಗ ಕವಿ, ಕಾಲ, ದೇಶ, ಮತ ಇತ್ಯಾದಿ ರೂಪಕ ಕಟ್ಟಿಕೊಡುತ್ತದೆ. ಆಗ ತಕ್ಕಮಟ್ಟಿಗೆ ಮುಕ್ತತೆಗೆ ಕಾರಣವೂ ಆಗುತ್ತದೆ. ತಮ್ಮ ಓದಿನ ನಡುವೆ ಕನ್ನಡ ಕೃತಿಗಳ ಪರಿಚಯಾತ್ಮಕವಾದ ನೇರವಂತಿಕೆಯ ಭಾವನೆಯ ಮಾತುಗಳು, ಸಲಹೆಗಳು ಈ ಕೃತಿಯಲ್ಲಿ ವಿಮರ್ಶಾ ಲೇಖನಗಳಾಗಿ ಮೂಡಿ ಬಂದಿವೆ. ‘ಬಯಲ ಕನ್ನಡಿ’ ಅವರವರ ಭಾವಕ್ಕೆ- ರೂಪಕ್ಕೆ ನಾಗೇಶ ನಾಯಕ ಕನ್ನಡಿ ಹಿಡಿದಿದ್ದಾರೆ.
ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...
READ MORE