ಕುಮುದಿನಿ ಹಾಗೂ ಇತರ ಕಾದಂ-ಕಥನಗಳು

Author : ಶ್ರೀನಿವಾಸ ಹಾವನೂರ

Pages 166

₹ 12.00




Year of Publication: 1984
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಕೆಲವು ವಿಶ್ವವಿಖ್ಯಾತ ಕಾದಂಬರಿಗಳ ಸಾರಸರ್ವಸ್ವ ಒಳಗೊಂಡ ಕೃತಿ ‘ಕುಮುದಿನಿ ಹಾಗೂ ಇತರ ಕಾದಂ-ಕಥನಗಳು’ ಈ ಕೃತಿ ಲೇಖಕ ಶ್ರೀನಿವಾಸ ಹಾವನೂರ ಕಾದಂಕಥನಗಳ ದ್ವಿತೀಯ ಸಂಗ್ರಹ. ಮೊದಲನೆಯದಾದ ಮಾತಂಗಿ ಮತ್ತು ಇತರೆ..ಸಂಗ್ರಹಕ್ಕೆ (1982)ದೊರೆತ ಯಶಸ್ಸಿನ ಪ್ರೇರೇಪಣೆಯಿಂದ ಈ ಕೃತಿ ರಚಿಸಿರುವುದಾಗಿ ತಿಳಿಸಿದ್ದಾರೆ. ಇದು ಕಾದಂಬರಿಯ ಡೈಜೆಸ್ಟ್ ಅಥವಾ ಸಾರಾಂಶವಲ್ಲ. ಇಂಗ್ಲಿಶ್ ನಲ್ಲಿಯ ಮ್ಯಾಕ್ಮಿಸನ್ ಸೀರೀಜ್ ನಂತೆ ಎಳೆಯರಿಗಾಗಿ ಬರೆದ ಕಥಾಸಾರವಲ್ಲ. ಬದಲಾಗಿ ಕಾದಂಬರಿಯೊಂದರ ಕತೆಯ ಮೆಯ್ಗಿಡಲೀಯದೆ ಅದರ ಕೆಲವು ಹೃದ್ಯವಾದ ಸನ್ನಿವೇಶಗಳನ್ನು ಯಥಾವತ್ತಾಗಿ ಕೊಡುತ್ತ. ಆ ಮೂಲಕ ಹೇಳಲಾದ ಕಥನವಿದು. ಕಾದಂಬರಿ ಕನ್ನಡದ್ದೇ ಇದ್ದಾರ, ಕಾದಂಬರಿಕಾರನ ನುಡಿಗಟ್ಟನ್ನು ಚಾಚೂ ತಪ್ಪದಂತೆ ಉಳಿಸಿಕೊಳ್ಳಬಹುದು. ಅದರಿಂದ ಮೂಲ ಕೃತಿಯನ್ನೇ ಸಂಕ್ಷೇಪದಲ್ಲಿ ಓದಿದಂತಾಗಿ ರಸಾನುಭವ ಪಡೆಯುವುದು ಸಾಧ್ಯ. ಜಗತ್ಪ್ರಸಿದ್ಧವಾದ ಸರ್ವೋತ್ಕೃಷ್ಟ ಕಾದಂಬರಿಗಳನ್ನು ಇಷ್ಟೊಂದು ಸುಲಭ-ಸರಳವಾದ ರೀತಿಯಲ್ಲಿ ಪರಿಚಯಿಸಿಕೊಳ್ಳುವ ಮಾರ್ಗ ಬೇರೊಂದಿಲ್ಲ ಎಂದಿದ್ದಾರೆ ಶ್ರೀನಿವಾಸ ಹಾವನೂರು.

About the Author

ಶ್ರೀನಿವಾಸ ಹಾವನೂರ

ಕನ್ನಡ ಸಾಹಿತ್ಯಸಂಶೋಧನೆ ಮಾಡಲು ಮೊತ್ತಮೊದಲು ಕಂಪ್ಯೂಟರ್‌ ಬಳಸಿದವರು ಡಾ. ಶ್ರೀನಿವಾಸ ಹಾವನೂರರು (1928-2010). ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾದುದು, ವೈವಿಧ್ಯಮಯವಾದುದು. ಸಣ್ಣ ಕಥೆ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ  ವಿಮರ್ಶೆ ಮೊದಲಾದ ಪ್ರಕಾರಗಳಲ್ಲಿ 60ಕ್ಕೂ ಮಿಕ್ಕಿ ಕೃತಿಗಳನ್ನು ಹೊರತಂದರು.  ವಿದೇಶದಲ್ಲಿದ್ದ ಕನ್ನಡ ಸಾಹಿತ್ಯವನ್ನು ಮರಳಿ ತಾಯ್ನಾಡಿಗೆ ಕರೆತಂದರು. ಹೊಸಗನ್ನಡ ಅರುಣೋದಯದ ಸಾಹಿತ್ಯವನ್ನು ಮತ್ತೆ ತೆರೆದು ತೋರಿಸಿದರು, ಹಿಂದೆ ಮುಂಬಯಿಯ  ಟಾಟಾ ಮೂಲಭೂತ ವಿಜ್ಞಾನ ಸಂಸ್ಥೆಯ ಗ್ರಂಥಪಾಲಕರಾಗಿದ್ದರು. ಮುಂದೆ ಮಂಗಳೂರು ಮತ್ತು ಮುಂಬಯಿ ವಿ.ವಿ.ಯ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದರು. ಆಮೇಲೆ ಪುಣೆಯಲ್ಲಿ ಮರಾಠಿ ಕನ್ನಡ ಸ್ನೇಹ ಸಂವರ್ಧನೆಯಲ್ಲಿ ಪಾತ್ರವಹಿಸಿದರು.. ಕೊನೆಗೆ ಕರ್ನಾಟಕ ಸರಕಾರದ ಸಮಗ್ರ ದಾಸ ಸಾಹಿತ್ಯ ಸಂಪಾದಕರಾಗಿ ೫೦ ಸಂಪುಟಗಳ ಪ್ರಕಟಣೆಯ ನೇತೃತ್ವ ವಹಿಸಿದರು. ಕನ್ನಡದ ನಾಡೋಜರೆಂದು ಹೆಸರಾದರು. ...

READ MORE

Related Books