ಲೇಖಕಿ ಎಂ.ಎಸ್. ವೇದಾ ಅವರ ಎರಡು ಕಾದಂಬರಿಗಳನ್ನು ಆಧರಿಸಿ ಪೌರಾಣಿಕ ಸ್ತ್ರೀ ಪಾತ್ರಗಳ ಕುರಿತು ಲೇಖಕಿ ರಾಧಾಮಣಿ ಎಂ. ಎ ಅವರು ಸ್ತ್ರೀ ಪಾತ್ರಗಳ ವಿಶ್ಲೇಷಣೆ ಇದು. ಕೃತಿಗೆ ಮುನ್ನುಡಿ ಬರೆದ ರಾಜಶೇಖರ ಜಮದಂಡಿ, ’’ ಜಯ’ ಹಾಗೂ ’ಕಪ್ಪುಕಿವಿಯ ಬಿಳಿಯ ಕುದುರೆಗಳು’ ಕಾದಂಬರಿಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಓದುಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇದರಿಂದ ವಾಸ್ತವಿಕ ಸಮಾಜದಲ್ಲಿ ತಮ್ಮ ನಿಲುವನ್ನು ಅವು ಹೇಗೆ ಕಟ್ಟಿಕೊಡುತ್ತವೆ? ಎಂಬುದನ್ನು ರಾಧಾ ಅವರು ಸುದೀರ್ಘವಾಗಿ ಕೃತಿಯಲ್ಲಿ ಚರ್ಚಿಸಿದ್ದಾರೆ.” ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕಿ ರಾಧಾಮಣಿ ಎಂ.ಎ ಅವರು ಮೂಲತಃ ಮೈಸೂರಿನವರು. ಕನ್ನಡದಲ್ಲಿ ಎಂ.ಎ ಹಾಗೂ ಪಿ.ಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನ ಮಾನಸ ಗಂಗೋತ್ರಿ ಮೈಸೂರಿನಲ್ಲಿ ಸಹ ಸಂಶೋಧಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ’ಪೌರಾಣಿಕ ಸ್ತ್ರೀ ಪಾತ್ರಗಳ ಕಥನ” ಇವರ ಚೊಚ್ಚಲ ಕೃತಿ. ...
READ MORE