ಮನಕೆ ಕಾರಂಜಿಯ ಸ್ಪರ್ಶ

Author : ಪಿ. ಲಂಕೇಶ್

Pages 260

₹ 150.00




Year of Publication: 2010
Published by: ಲಂಕೇಶ್ ಪ್ರಕಾಶನ
Address: ನಂ. 9, ಪೂರ್ವ ಆಂಜನೇಯ ಗುಡಿ ರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080 -26676427

Synopsys

ಪಾಶ್ಚಿಮಾತ್ಯ ಲೇಖಕರ ಬದುಕು ಬರಹದ ಕುರಿತು ಪಿ. ಲಂಕೇಶ್ ಅವರು ಬರೆದ ಮಹತ್ವದ ಕೃತಿ  ‘ಮನಕೆ ಕಾರಂಜಿಯ ಸ್ಪರ್ಶ’. ಇಂಗ್ಲಿಷ್ ಎಂ.ಎ ಪದವಿ ಪಡೆದ ಕಾರಣದಿಂದಲೋ ಏನೋ ಲಂಕೇಶ್ ಪಾಶ್ಚಿಮಾತ್ಯ ಸಾಹಿತ್ಯದಿಂದ ಪ್ರಭಾವಿತರಾಗುತ್ತಿದ್ದರು, ವಿಶ್ವದ ಮಹತ್ವದ ಲೇಖಕರ ಅವರ ಕೃತಿಗಳ ಬಗ್ಗೆ ಹೆಚ್ಚೆಚ್ಚು ಅಧ್ಯಯನ ಮಾಡುತ್ತಿದ್ದ ಲಂಕೇಶ್ ಪಾಶ್ಚಿಮಾತ್ಯ ಸಾಹಿತ್ಯವನ್ನ ಅಷ್ಟೇ ನಿಖರವಾಗಿ ಕನ್ನಡೀಕರಿಸುತ್ತಿದ್ದರು ಸಹ. ಈ ಕೃತಿಯಲ್ಲಿ ಅಂಥಾದ್ದೆ ಮಹತ್ವದ ಲೇಖಕರ ಬದುಕು ಮತ್ತು ಬರಹಗಳ ಕುರಿತಾದ ವಿಸ್ತಾರ ಪರಿಚಯವಿದೆ. ಪುಸ್ತಕದ ಕುರಿತು ಬರೆಯುತ್ತಾ ಲಂಕೇಶ್. ‘ಈ ಶತಮಾನದ ಮೊದಲ ಐವತ್ತು ವರ್ಷ ಸಾರ್ತರ್, ಕ್ಯಾಮು, ರಸೆಲ್, ಆರ್ವೆಲ್, ಗಾಂಧಿ ತರಹದವರು ಸರ್ವಾಧಿಕಾರಿಗಳಿಗೆ, ನಿರಂಕುಶ ವ್ಯವಸ್ಥೆಗೆ ಯಾವ ಪ್ರತಿಕ್ರಿಯೆ ನೀಡಿದರು ಎನ್ನುವುದು ಪ್ರಶ್ನೆ.

ರಷ್ಯಾದಲ್ಲಿ ಲಕ್ಷಾಂತರ ಜನ ಲೆನಿನ್, ಸ್ಟಾಲಿನ್‌ರಿಂದ ಹತವಾಗುತ್ತಿದ್ದಾಗ ಸಾರ್ತ‌ ಆ ಬಗ್ಗೆ ಕಣ್ಣುಮುಚ್ಚಿಕೊಂಡಿದ್ದು ಅಮೆರಿಕದ ಬಂಡವಾಳ ಶಾಹಿಯನ್ನು ಖಂಡಿಸುತ್ತಿದ್ದ; ತನ್ನ ನಾಡು - ಇಂಗ್ಲೆಂಡ್ ಎರಡನೇ ಮಹಾಯುದ್ದದಲ್ಲಿ ಬಾಂಬುಗಳಡಿಯಲ್ಲಿ ನಾಶವಾಗುತ್ತಿದ್ದಾಗ ರಸೆಲ್ ಅಮೆರಿಕದಲ್ಲಿ ಒಂದು ಲಕ್ಚರ್‌ ಅವಕಾಶಕ್ಕಾಗಿ, ಒಂದು ವಿಶ್ವವಿದ್ಯಾನಿಲಯದ ಆಶ್ರಯಕ್ಕಾಗಿ ಬೇಡಿಕೊಳ್ಳುತ್ತಿದ್ದಾಗ ಆರ್ವೆಲ್ ಸ್ಪೇನ್‌ನ ಫ್ಯಾಸಿಸ್ಟರ ವಿರುದ್ದ ಸಿಡಿದೆದ್ದು ರಿಪಬ್ಲಿಕನ್ ಸೈನ್ಯದ ಜೊತೆಗೆ ಹೋರಾಡಿ ಗಾಯಗೊಂಡ. ಹಾಗೆಯೇ ಇಂಗ್ಲೆಂಡಿನ ಕಲ್ಲಿದ್ದಲು ಗಣಿ ಕಾರ್ಮಿಕರ ಜೊತೆ ಬೆರೆತು ಅವರ ದುರಂತವನ್ನು ವರ್ಣಿಸಿದ ಎನ್ನುತ್ತ ಜಗದ ಸೋಜುಗದ, ಕೌತುಕದ ವಿಚಾರಗಳನ್ನು ತೆರೆದಿಡುತ್ತಾರೆ. ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಓದುಗರನ್ನು ಬಂದಿಸುವ ಕಲೆ ಲಂಕೇಶ್ ಅವರಿಗೆ ಕರಗತವಾದದ್ದು. ಈ ಕೃತಿ ಪಾಶ್ಚಿಮಾತ್ಯ ದೇಶಗಳ ಕಾಲ, ಕವಿತ್ವದ ಕುರಿತು ವಿಭಿನ್ನವಾದ ವಿವರಣೆಗಳನ್ನು ನೀಡುತ್ತದೆ.

About the Author

ಪಿ. ಲಂಕೇಶ್
(08 March 1935 - 25 January 2000)

ಪಿ. ಲಂಕೇಶ್ ಕನ್ನಡ ಸಾಹಿತ್ಯದ ಪ್ರಮುಖ ಲೇಖಕರಲ್ಲಿ ಒಬ್ಬರು. ಪತ್ರಕರ್ತ-ಸಾಹಿತಿಯಾಗಿ ಜನಪ್ರಿಯರಾಗಿರುವ ಪಾಳ್ಯದ ಲಂಕೇಶ್ ಅವರ ಬದುಕು-ಬರಹ ವೈವಿಧ್ಯದಿಂದ ಕೂಡಿವೆ. ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ, ನಾಟಕಕಾರ, ನಟ, ಚಲನಚಿತ್ರ ನಿರ್ದೇಶಕ, ಸಂಪಾದಕ, ಕೃಷಿಕ ಹೀಗೆ ಅವರ ಪ್ರತಿಭೆಗೆ ಹಲವು ಮುಖ. ಕೆಲಸ ಮಾಡಿದ ಕ್ಷೇತ್ರದಲ್ಲೆಲ್ಲ ತನ್ನದೇ ಛಾಪು ಮೂಡಿಸಿದವರು ಲಂಕೇಶ್. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೊನಗವಳ್ಳಿ 1935ರ ಮಾರ್ಚ್‌ 8ರಂದು ಜನಿಸಿದರು., ತಂದೆ ನಂದಿ ಬಸಪ್ಪ, ತಾಯಿ ದೇವೀರಮ್ಮ. ಕೊನಗವಳ್ಳಿ ಮತ್ತು ಹಾರನಹಳ್ಳಿಯಲ್ಲಿ ಪ್ರಾಥಮಿಕ, ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಅವರು ಪ್ರೌಢಶಾಲೆ ಮತ್ತು ಇಂಟರ್ ...

READ MORE

Related Books