`ಹರಿಶ್ಚಂದ್ರ ಕಾವ್ಯ : ಓದು, ವಿಮರ್ಶೆ’ ಜಿ.ಹೆಚ್.ನಾಯಕ ಅವರ ವಿಮಶಾತ್ಮಕ ಕೃತಿಯಾಗಿದೆ. ಬಾಲ್ಯ ದಿಂದಲೂ ಹರಿಶ್ಚಂದ್ರನ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ಪ್ರೊ! ಜಿ. ಎಚ್. ನಾಯಕ ಸಮರ್ಥವಾಗಿ ಕೃತಿ ವಿಮರ್ಶೆ ಮಾಡಿದ್ದಾರೆ.
’ಜಿ.ಎಚ್. ನಾಯಕ’ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಿರುವ ವಿಮರ್ಶಕ ಗೋವಿಂದರಾಯ ಹಮ್ಮಣ್ಣ ನಾಯಕ ಅವರು ಜನಿಸಿದ್ದು 1935ರ ಸೆಪ್ಟೆಂಬರ್ 18ರಂದು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸೂರ್ವೆ ಗ್ರಾಮದವರು. ಮೈಸೂರಿನ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ...
READ MOREಹೊಸತು-ಜೂನ್-2002
ರಾಘವಾಂಕನ ಪ್ರತಿಭೆಗೆ ಸಾಕ್ಷಿಯಾಗಿರುವ ಹರಿಶ್ಚಂದ್ರ ಕಾವ್ಯ ಪೌರಾಣಿಕ ಕೃತಿಯನ್ನು ಓದಿ ವಿಮರ್ಶಿಸುವುದು ಅಂಥಹರಿಶ್ಚಂದ್ರ ಕಾವ್ಯ ಸುಲಭದ ಮಾತೇನಲ್ಲ. ಹರಿಶ್ಚಂದ್ರ - ಚಂದ್ರಮತಿಯರ ವ್ಯಕ್ತಿತ್ವವನ್ನು ರಾಘವಾಂಕ ಉತ್ತುಂಗಕ್ಕೇರಿಸಿ ಸೊಬಗು ಗಾಂಭೀರ್ಯವನ್ನು ಕೃತಿಯಲ್ಲಿ ತುಂಬಿದ್ದಾನೆ. ಅದನ್ನೋದಿದರೆ ವಿಮರ್ಶೆ ಮಾಡಲು ಅಂತಃಕರಣವೇ ಪ್ರೇರೇಪಿಸುತ್ತದೆ. ಬಾಲ್ಯ ದಿಂದಲೂ ಹರಿಶ್ಚಂದ್ರನ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ಪ್ರೊ|| ಜಿ. ಎಚ್. ನಾಯಕ ಸಮರ್ಥವಾಗಿ ಕೃತಿ ವಿಮರ್ಶೆ ಮಾಡಿದ್ದಾರೆ.