ಟಿ.ಎಸ್. ಎಲಿಯಟ್: ವಿಮರ್ಶೆಯ ವಿಚಾರಗಳು

Author : ಸುರೇಂದ್ರನಾಥ ಮಿಣಜಗಿ

₹ 90.00




Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್ ಗಾಂಧಿ ಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು -560004

Synopsys

೨೦ನೇ ಶತಮಾನದಲ್ಲಿ ಜಗತ್ತಿನ ಕಾವ್ಯ ಪರಂಪರೆಯನ್ನು ಪ್ರಭಾವಿಸಿದ ಎಲಿಯಟ್ ಅತ್ಯುತ್ತಮ ಗದ್ಯ ಬರಹಗಾರನೂ ಹೌದು. ಶ್ರೇಷ್ಠ ವಿಮರ್ಶಕ ಕೂಡ. ಟಿ.ಎಸ್. ಎಲಿಯಟ್ ನ ವಿಮರ್ಶೆಯ ವಿಚಾರಗಳನ್ನು ಹಿರಿಯ ಲೇಖಕರಾಗಿದ್ದ ಸುರೇಂದ್ರನಾಥ ಮಿಣಜಗಿ ಅವರು ಕನ್ನಡಿಗರಿಗೆ ಒದಗಿಸಿದ್ದಾರೆ. ಪುಸ್ತಕದ ಬಗ್ಗೆ ಬೆನ್ನುಡಿಯಲ್ಲಿ ಹಿರಿಯ ವಿಮರ್ಶಕ ರಾಜೇಂದ್ರ ಚೆನ್ನಿ ಅವರು ಹೀಗೆ ಬರೆದಿದ್ದಾರೆ- ಮಿಣಜಗಿಯವರ ಈ ಕೃತಿ ತನ್ನ ವಿದ್ವತ್ತು, ಖಚಿತತೆ, ತಾದಾತ್ಮ್ಯದಿಂದ ಗಮನ ಸೆಳೆಯುತ್ತದೆ. ಆ ಕಾಲದಲ್ಲಿ ಬಂದ ಬಹುಪಾಲು ಭಾರತೀಯ ವಿಮರ್ಶೆಗಳಂತೆ ಇದು ಎಲಿಯಟ್ ನ ಬಗ್ಗೆ ಒಂದು ಪರಿಚಯಾತ್ಮಕ ಪುಸ್ತಕವಲ್ಲ. ಇದು ಪಾಶ್ಚಾತ್ಯ ವಿಮರ್ಶಕರ ಅಭಿಪ್ರಾಯಗಳ ಸಂಗ್ರಹವೂ ಅಲ್ಲ. ಇದು ಪಾಶ್ಚಾತ್ಯ ವಿಮರ್ಶೆ ಹಾಗೂ ಎಲಿಯಟ್ ನ ಸಮಗ್ರ ಬರಹದ ಬಗ್ಗೆ ಸೂಕ್ಷ್ಮ ಹಾಗೂ ವಿಸ್ತಾರವಾದ ಜ್ಞಾನವುಳ್ಳು ಒಬ್ಬ ಗಂಭೀರ ಅಕಾಡೆಮಿಕ್ ವಿಮರ್ಶಕ ಬರೆದ ಕೃತಿಯಾಗಿದೆ. ಎಲಿಯಟ್ ನ ವಿಮರ್ಶೆಯ ಪಾರಿಭಾಷಿಕಗಳನ್ನು ಮತ್ತು ಒಟ್ಟಾರೆ ಚರ್ಚೆಯನ್ನು ಮಿಣಜಗಿಯವರು ಎಲ್ಲಿಯೂ ಹೊರೆಯಾಗಿ ಭಾಸವಾಗದ ಕನ್ನಡದಲ್ಲಿ ನಡೆಸುತ್ತಾರೆ. ಇದು ಈ ಕೃತಿಯ ಆಕರ್ಷಕ ಗುಣವಾಗಿದೆ. ಇದು ಸಾಧ್ಯವಾಗಲು ಕಾರಣವೆಂದರೆ ಎಲಿಯಟ್ ನ ಸಮಗ್ರ ಬರಹದ ಜೊತೆಗೆ ಲೇಖಕರು ಹೊಂದಿರುವ ತಾದಾತ್ಮ್ಯ. ವಿವರಣೆ ಮಾತ್ರವಲ್ಲ ತಮ್ಮ ಸ್ವಂತದ ಅಭಿಪ್ರಾಯಗಳನ್ನು ಕೂಡ ಅವರು ಸಹಜವಾಗಿ ಮಂಡಿಸುತ್ತಾರೆ. ಎಲಿಯಟ್ ಕಾವ್ಯದ ಹಲವಾರು ವ್ಯಾಖ್ಯಾನಗಳು ಈ ಕೃತಿಯ ಮೌಲಿಕವಾದ ಅಂಶಗಳಾಗಿವೆ.

About the Author

ಸುರೇಂದ್ರನಾಥ ಮಿಣಜಗಿ
(05 September 1926 - 01 October 2015)

ಬೆಳಗಾವಿ ಜಿಲ್ಲೆಯ ಗುಳೇದಗುಟ್ಟಿದಲ್ಲಿ ಜನಿಸಿದ ಸುರೇಂದ್ರನಾಥ ಅವರು ಗುಳೇದಗುಡ್ಡ, ಧಾರವಾಡ, ಸಾಂಗ್ಲಿಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಅವರು ನಂತರ ಧಾರವಾಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ಆಮೇಲೆ ಗುಜರಾತಿನ ವಲ್ಲಭ ವಿದ್ಯಾನಗರದ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾದರು. ಕನ್ನಡದ ಸೃಜನಶೀಲ ವಿಮರ್ಶಕರಲ್ಲಿ ಒಬ್ಬರಾದ ಮಿಣಜಗಿಯವರು ವಿ.ಕೃ. ಗೋಕಾಕರ ಆಪ್ತಶಿಷ್ಯರಲ್ಲೊಬ್ಬರು. ‘ಸೃಜನಕ್ರಿಯೆ ಮತ್ತು ಸಂವೇದನೆ’, ಎಲಿಯಟ್: ಕವಿ ಹಾಗೂ ನಾಟಕಕಾರ, ಪ್ರತೀಯಮಾನ, ವಿನಾಯಕ ಕೃಷ್ಣ ಗೋಕಾಕ್, ಟಿ.ಎಸ್. ಎಲಿಯಟ್ ವಿಮರ್ಶೆಯ ವಿಚಾರಗಳು ಇವರ ಪ್ರಮುಖ ಕೃತಿಗಳು. ಎಲಿಯಟ್: ಕವಿ ಹಾಗೂ ...

READ MORE

Related Books