ಯುವ ವಿಮರ್ಶಕ-ಲೇಖಕ ಸುರೇಶ ನಾಗಲಮಡಿಕೆ ಅವರ ವಿಮರ್ಶಾತ್ಮಕ ಕೃತಿ ’ಉಳಿದದ್ದು ಆಕಾಶ’. ಈ ಕೃತಿಯು ಮೈಸೂರು ಮಲ್ಲಿಗೆ ಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ಕಾವ್ಯದ ಬಗ್ಗೆ , ಅದರಲ್ಲಿರುವ ಸಾಮಾಜಿಕತೆಯ ಪರಿಕಲ್ಪನೆಯ ಬಗ್ಗೆ ತಿಳಿಸುತ್ತದೆ. ಪ್ರಸ್ತುತ ಈ ಕೃತಿಯಲ್ಲಿ ಕವಿ ಕೆ.ಎಸ್.ನ ಅವರ ಬಗ್ಗೆ, ಸಮಾಜ, ರಾಷ್ಟ್ರೀಯತೆ, ಗಾಂಧೀ ಕೇಂದ್ರಿತ ಭಾರತೀಯತೆ ಚಳುವಳಿ ಇತ್ಯಾದಿ ನಿಲುವುಗಳನ್ನು ಕೆ.ಎಸ್.ನ ಅವರ ಕಾವ್ಯದಲ್ಲಿ ಕಂಡುಬಂದ ರಚನೆಯನ್ನು ಇಲ್ಲಿ ಮನಗಾಣಬಹುದು. ಕೆ. ಎಸ್. ನ ಕಾವ್ಯದಲ್ಲಿನ ಹೆಣ್ಣುನೋಟದ ಕ್ರಮಗಳು, ಗಂಭೀರ ವಸ್ತುವಿನ ಆಲೋಚನೆ, ದಾಂಪತ್ಯ ಲೋಕದ ಬದುಕನ್ನು ಅವರು ಕಟ್ಟಿಕೊಡುವ ಪರಿ, ಹೆಣ್ಣಿನ ಸಾಮಾಜಿಕ ಒಳಸಂಕಟಗಳು, ಎಲ್ಲವನ್ನು ಈ ಕೃತಿ ವಿವರಿಸುತ್ತಾ ಸಾಮಾಜಿಕ ಕಾವ್ಯದ ತಾತ್ವಿಕ ಆಯಾಮಗಳನ್ನು ತಿಳಿಸುವ ಪ್ರಯತ್ಮ ಮಾಡುತ್ತದೆ. ಸಮಾಜ, ಭೂಮಿತತ್ವದ ಪರಿಕಲ್ಪನೆ, ಕಾವ್ಯ ಚಿಂತನೆ ಮತ್ತು ಜೀವನ ಮೀಮಾಂಸೆಗಳ ಬಗ್ಗೆ ಅರಿವು ಮೂಡಿಸುತ್ತದೆ.
ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಸುರೇಶ್ ನಾಗಲಮಡಿಕೆ ಅವರು ಹುಟ್ಟಿದ್ದು ಆಂಧ್ರದ ಗಡಿಭಾಗ ಪಾವಗಡದ ನಾಗಲಮಡಿಕೆಯಲ್ಲಿ. ಸದ್ಯ ಜನಪದ ಮಹಾಕಾವ್ಯಗಳ ಅಧ್ಯಯನದಲ್ಲಿ ತೊಡಗಿಸಿಕೊಡಿರುವ ಇವರು ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಕನಕ ಸಾಹಿತ್ಯ ಮತ್ತು ಲೋಕದೃಷ್ಟಿ, ಕಾಣ್ಕೆ ಕಣ್ಕಟ್ಟು, ಬಯಲಾಗುವ ಪರಿ, ಉಳಿದದ್ದು ಆಕಾಶ, ಹಲವು ಬಣ್ಣದ ಹಗ್ಗ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆಗಳಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಸುರೇಶ್ ಅವರ ಹೇಚ್ಚಿನ ಪುಸ್ತಕಗಳು ಗದ್ಯಕ್ಕೇ ಸೇರಿವೆ. ...
READ MORE