ಇದು ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯ ಕೃತಿಗಳನ್ನು ಕುರಿತ ವಿಮರ್ಶಾ ಲೇಖನಗಳ ಸಂಕಲನ. 40 ಲೇಖನಗಳಿರುವ ಈ ಕೃತಿಯು ಸಮಾಜಮುಖಿಯಾದ ಅಲೋಚನೆಗಳನ್ನು ಲೇಖನಗಳನ್ನು ಒಳಗೊಂಡಿದ್ದು.ಇಲ್ಲಿನ ಆಲೋಚನೆಗಳು ವರ್ತಮಾನದ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಗಳನ್ನು ಮುಖಾಮುಖಿಯಾಗಿಸುತ್ತವೆ. ಇಲ್ಲಿ ’ಸಾಮಾಜಿಕ ನ್ಯಾಯವೂ ಪುತಿನ ಅವರ ಕಾವ್ಯವೂ’, ’ದೇವನೂರರ ನೈತಿಕ ಅಪರಾಧ’, ’ಮಾರ್ಕ್ಸ್‌ವಾದಿ ವಿಮರ್ಶೆ’, ’ಜೈಲೆಂಬ ಲೋಕದಲ್ಲಿ ಕಾಣುವ ತಾಜಾತಣ’, ’ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ’ ಮುಂತಾದ ಲೇಖನಗಳಿವೆ
ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...
READ MORE