ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ದಾಂತಗಳು

Author : ಎನ್.ಜಿ. ಮಹಾದೇವಪ್ಪ

Pages 53

₹ 10.00




Year of Publication: 2006
Published by: ಲಿಂಗಾಯತ ಅಧ್ಯಯನ ಅಕಾಡೆಮಿ
Address: ನಾಗನೂರು ರುದ್ರಾಕ್ಷಿಮಠ, ಶಿವಬಸವನಗರ, ಬೆಳಗಾವಿ

Synopsys

‘ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ದಾಂತಗಳು’ ಕೃತಿಯು ಎನ್. ಜಿ. ಮಹಾದೇವಪ್ಪ ಅವರ ಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಸಿದ್ಧರಾಮ ಸ್ವಾಮಿಗಳು, ಬಸವಾದಿ ಪ್ರಮಥರಿಂದ ಸೃಷ್ಟಿಯಾಗಿರುವ ಲಿಂಗಾಯತ ಎನ್ನುವುದು ಒಂದು ಪರಿಪೂರ್ಣ 'ಸಿದ್ಧಾಂತ'. ಇದು ಅಂಗ ಲಿಂಗಮುಖಿ, ಮಾನವಮುಖಿ, ಸಮಸಮಾಜಮುಖಿ, ಸಮದ್ರ ಸಮಾಜಮುಖಿ ಎಂಬ ಚತುರ್ಮುಖೀ ಸಿದ್ಧಾಂತವಾಗಿದೆ. ಭಾರತೀಯ ದಾರ್ಶನಿಕರು ಇವುಗಳಲ್ಲಿ ಮೊದಲಿನ ಎರಡು ಮುಖಗಳ ಬಗ್ಗೆ, ಬಹಳೆಂದರೆ ಮೂರನೆಯ ಮುಖದ ಬಗ್ಗೆ ಸ್ವಲ್ಪ ಚಿಂತನೆ ನಡೆಸಿದರು. ಶರಣರು ಮಾತ್ರ ಈ ನಾಲ್ಕೂ ಮುಖಗಳನ್ನು ಕುರಿತು ತಲಸ್ಪರ್ಶಿ ಸಿದ್ದಾಂತವನ್ನು ಮಂಡಿಸಿದರು. ಯಾವುದೇ ಸಿದ್ಧಾಂತದ ಪರಮಪ್ರಯೋಜನವಿರುವುದು ಅದರ ಸಾಮಾಜೀಕರಣ ಪ್ರಕ್ರಿಯೆಯಲ್ಲಿ, ಕೇವಲ ಆದರ್ಶವಾಗಿರದೆ, ತುಂಬ ವಾಸ್ತವ ಮತ್ತು ಜನಪರವಾಗಿರುವುದರಿಂದ ಲಿಂಗಾಯತ 'ಸಿದ್ಧಾಂತವು 'ಸಮಾಜ'ವಾಗಿ ಪಲ್ಲಟಗೊಳ್ಳುತ್ತ ಬಂದಿದೆ. ಈ ಪಲ್ಲಟ ಕ್ರಿಯೆಯ ಕ್ಷಿಪ್ರಗತಿಕಾರಣವಾಗಿ ಅದು ದಕ್ಷಿಣ ಭಾರತದಲ್ಲಿ ದೊಡ್ಡ ಸಮುದಾಯವಾಗಿಯೂ ಬೆಳೆದಿದೆ. ಈ ಸಿದ್ಧಾಂತ ಮತ್ತು ಸಮಾಜಗಳ ಮೇಲೆ ಮುಖವಾಗಿ (ವೀರ)ಶೈವ ಸ್ವರ, ಅದರ ಮೇಲೆ ವೈದಿಕ ಸ್ತರಗಳು ಆವರಿಸಿಕೊಳ್ಳುವಲ್ಲಿ ಅವುಗಳ ಚರಿತ್ರೆ' ಕಲುಷಿತಗೊಳ್ಳುತ್ತ ಬಂದಿತು. ಹೀಗಾಗಿ, ಲಿಂಗಾಯತ ಸಿದ್ಧಾಂತ ಸಮಾಜ ಚರಿತ್ರಗಳ ನಿಜಸ್ವರೂಪವನ್ನು ಶೋಧಿಸಿ, ಸಮಾಜದ ಮುಂದಿಡುವುದು, ಸಾಮಾಜಿಕರ ಕಣ್ಣು ತೆರೆಯಿಸುವುದು ಇಂದಿನ ಅಗತ್ಯವಾಗಿದೆ. ಈ ಅಗತ್ಯ ಪೂರೈಸುವುದಕ್ಕಾಗಿ, ಅಂದರೆ, ನಮ್ಮನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕಾಗಿ, ಈ ಮಾಲೆ ಶ್ರಮಿಸಲಿದ್ದು, ಪ್ರಸ್ತುತ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರವನ್ನು ನಾವು ಅಪೇಕ್ಷಿಸುತ್ತೇವೆ ಎಂದಿದ್ದಾರೆ.

About the Author

ಎನ್.ಜಿ. ಮಹಾದೇವಪ್ಪ

ಡಾ. ಎನ್. ಜಿ. ಮಹಾದೇವಪ್ಪ ಅವರು ಲೇಖಕರು, ಚಿಂತಕರು. ಮೂಲತಃ ಚಿಕ್ಕಮಗಳೂರಿನವರು.ಲಿಂಗಾಯತ ದರ್ಶನ ಮಾಸಿಕ ಪತ್ರಿಕೆಯ ಸಂಪಾದಕರು.  ಕೃತಿಗಳು: ಲಿಂಗಾಯತರು ಹಿಂದೂಗಳಲ್ಲ (ಲೇಖನಗಳ ಸಂಗ್ರಹ ಕೃತಿ), ವಚನ ಪರಿಭಾಷಾಕೋಶ (ವಚನಗಳ ಸಂಗ್ರಹ ಕೃತಿ),  ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು (ವಿಶ್ಲೇಷಣೆ)  ಪ್ರಶಸ್ತಿ-ಪುರಸ್ಕಾರಗಳು:ಬಸವಕಲ್ಯಾಣದ ವಿಶ್ವ ಬಸವಧರ್ಮ ವಿಶ್ವಸ್ಥ ಸಂಸ್ಥೆಯಿಂದ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಲಭಿಸಿದೆ.   ...

READ MORE

Related Books