ಕಲ್ಯಾಣಕೀರ್ತಿಯ ಕೃತಿಗಳು

Author : ಹ.ಕ. ರಾಜೇಗೌಡ

Pages 422

₹ 175.00




Year of Publication: 1976
Published by: ಕನ್ನಡ ಅಧ್ಯಯನ ಸಂಸ್ಥೆ
Address: ಮೈಸೂರು

Synopsys

‘ಕಲ್ಯಾಣಕೀರ್ತಿಯ ಕೃತಿಗಳು’ ಹ.ಕ. ರಾಜೇಗೌಡ ಅವರ ಸಂಪಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ವಿವರಗಳು ಹೀಗಿವೆ; ಕಾಮನ ಕಥೆಯಲ್ಲಿ 5 ಸಂಧಿಗಳೂ 331 ಪದ್ಯಗಳೂ ಇವೆ. ಇದು ಸಾಂಗತ್ಯ ದಲ್ಲಿವೆ. ಇದರಲ್ಲಿ ಜೈನಧರ್ಮಾನುಸಾರವಾಗಿ ಕಾಮನ ಕಥೆಯನ್ನು ನಿರೂಪಿಸಲಾಗಿದೆ. ನಾಗುವಾರ ಚರಿತೆಯಲ್ಲಿ 5 ಸಂಧಿಗಳೂ 520 ಪದ್ಯಗಳೂ ಇವೆ. ಇದು ಭಾಮಿನಿ ಪಟ್ಟಿದಿಯಲ್ಲಿದೆ. ಜಯಧರ ಚಕ್ರವರ್ತಿಯ ಮಗ ವಿಕ್ರಮಂಧರ ನಾಗವಾಪಿಯಲ್ಲಿ ಬಿದ್ದಾಗ ನಾಗರಾಜ ಅವನನ್ನು ತಲೆ ಯಲ್ಲಿ ಧರಿಸಿದುದೆ ಇಲ್ಲಿಯ ಕಥಾವಸ್ತು, ಸಾಂಗತ್ಯ ದಲ್ಲಿ ರಚಿತವಾಗಿರುವ ಚಿನ್ಮಯ ಚಿಂತಾಮಣಿಯಲ್ಲಿ 107 ಪದ್ಯಗಳಿವೆ. ಅನುಪ್ರೇಕ್ಷೆಯಲ್ಲಿ 75 ಪದ್ಯಗಳಿವೆ. ಇದು ಚೌಪದದಲ್ಲಿ ರಚಿತವಾಗಿದೆ. ತತ್ತ್ವರಾಷ್ಟಕದಲ್ಲಿ 9 ವೃತ್ತಗಳಿವೆ. ಈ ನಾಲ್ಕು ಕೃತಿಗಳಲ್ಲಿಯೂ ಜೈನತತ್ತ್ವಗಳನ್ನು ವಿವರಿಸಲಾಗಿದೆ. ಕಲ್ಯಾಣಕೀರ್ತಿ ಉದ್ಯವನ್ನೂ ರಚಿಸಬಲ್ಲ ತತ್ತ್ವವನ್ನೂ ನಿರೂಪಿಸಬಲ್ಲ ಎಂಬು ದಕ್ಕೆ ಈತನ ಕೃತಿಗಳೇ ಸಾಕ್ಷಿಯಾಗಿವೆ. ಇವುಗಳಲ್ಲಿ ಚಿನ್ಮಯ ಚಿಂತಾಮಣಿ, ತತ್ತ್ವ ಭೇದಾತ್ಮಕ, ಆನಂದಕಂದಳಿ ಇವು ಈ ಮೊದಲೇ ಅಚ್ಚಾಗಿವೆ. ಉಳಿದ ಕೃತಿಗಳು ಮೊದಲಬಾರಿಗೆ ಬೆಳಕುಕಾಣುತ್ತಿವೆ. ಕರ್ಣಾಟಕ ಕವಿಚರಿತೆಕಾರರು ಈತನ ಕೃತಿಗಳ ಪದ್ಯ ಸ೦ಖ್ಯೆಗಳ ಬಗೆಗೆ ಹೇಳಿರುವಲ್ಲಿಯೂ ಈಗ ಅಚ್ಚಾಗಿರುವುದರಲ್ಲಿಯೂ ವ್ಯತ್ಯಾಸಗಳು ಕಂಡುಬರುತ್ತವೆ. ಬಹುಶಃ ಇದಕ್ಕೆ ಅವರು ಪರಿಶೀಲಿಸಿರುವ ಹಸ್ತಪ್ರತಿಗಳು ಕಾರಣವಾಗಿರಬಹುದು.

About the Author

ಹ.ಕ. ರಾಜೇಗೌಡ

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು. ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು. ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ. ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ...

READ MORE

Related Books